ಐಪಿಎಲ್ 20-20ಯ 37ನೇ ಪಂದ್ಯದಲ್ಲಿ ಕೆಕೆಆರ್ ತಂಡದ ವಿರುದ್ಧ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 8 ವಿಕೆಟ್‌ಗಳ ಅಂತರದಿಂದ ಗೆದ್ದಿತು.
ದುಬೈನ ಶೇಕ್ ಜಯೇದ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಕೆಕೆಆರ್ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು.
ಕೆಕೆಆರ್ ತಂಡದಿಂದ ಆರಂಭಿಕ ಆಟಗಾರರಾಗಿ ಎಸ್. ಗಿಲ್ ಹಾಗೂ ಆರ್. ತ್ರಿಪಾಠಿ ಫೀಲ್ಡಿಗೆ ಎಂಟ್ರಿ ನೀಡಿದರು. ಆದರೆ ಕೆಕೆಆರ್ ತಂಡದ ಇಂದಿನಪ್ರದರ್ಶನ ಅತ್ಯಂತ ನೀರಸವಾಗಿತ್ತು. ಗಿಲ್ ಹಾಗೂ ತ್ರಿಪಾಠಿ ತಲಾ 1 ರನ್‌ಗಳಿಗೆ ಪೆವಿಲಿಯನ್ ಸೇರಿದರು. ಇವರ ನಂತರ ಬಂದ ಇ. ಮಾರ್ಗನ್ (34 ಎಸೆತಗಳಿಗರ 30 ರನ್) ಕೆ.ಯಾದವ್ (19 ಎಸೆತಗಳಿಗೆ 12ರನ್) ಎಲ್. ಫರ್ಗ್ಯುಸನ್ (16 ಎಸೆತಗಳಿಗೆ 19 ರನ್) ಗಳಿಸಿ ತಂಡವನ್ನು ಮುನ್ನಡೆಸುವ ಪ್ರಯತ್ನ ಮಾಡಿದರಾದರೂ ಆರ್‌ಸಿಬಿ ತಂಡದ ಬೌಲರ್‌ಗಳ ತಂಡ ಕೆಕೆಆರ್‌ನ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿ ಹಾಕಿತ್ತು. ಎಂ. ಸಿರಾಜ್ 3 ವಿಕೆಟ್ ಹಾಗೂ ವಿಜಯೇಂದ್ರ ಚಹ್ವಾಲ್ 2 ವಿಕೆಟ್ ಗಳಿಸಿ ಕೆಕೆಆರ್ ತಂಡವನ್ನು ಮಣ್ಣು ಮುಕ್ಕಿಸಿದರು. ಕೆಕೆಆರ್ ತಂಡ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 84 ರನ್‌ಗಳ ಅತ್ಯಂತ ಸಾಧಾರಣ ಗಳಿಕೆ ಮಾಡಿತು.
ಆರ್‌ಸಿಬಿ ತಂಡ ಜೇವಲ 13 ಓವರ್‌ಗಳಲ್ಲಿ ಕೆಕೆಆರ್ ಸವಾಲನ್ನು ಗೆದ್ದಿತು. ಆರ್‌ಸಿಬಿ ತಂಡದಿಂದ ಆರಂಭಿಕ ಆಟಗಾರರಾಗಿ ದೇವದತ್ ಪಡಿಕ್ಕಲ್ ಹಾಗೂ ಆರೋನಾ ಫಿಂಚ್ ಮೈದಾನಕ್ಕಿಳಿದರು. ಪಡಿಕ್ಕಲ್ 17 ಎಸೆತಗಳಿಗೆ 25 ರನ್ ಹಾಗೂ ಫಿಂಚ್ 21 ಎಸೆತಗಳಿಗೆ 16 ರನ್ ಗಳಿಸಿ ತಂಡಕ್ಕೆ ಉತ್ತಮ ಆರಂಭ ನೀಡಿದರು. ನಂತರ ಬಂದ ಜಿ.ಸಿಂಗ್ ಹಾಗೂ ವಿರಾಟ್ ಕೊಹ್ಲಿ ಕ್ರಮವಾಗಿ 26 ಎಸೆತಗಳಿಗೆ 21ರನ್ ಹಾಗೂ 17 ಎಸೆತಗಳಿಗೆ 18 ರನ್ ಗಳಿಕೆ ಮಾಡಿ ತಂಡವನ್ನು ಗೆಲ್ಲಿಸಿತು. ಆರ್‌ಸಿಬಿ ತಂಡ 13.3 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 85 ರನ್ ಗಳಿಸಿ ಪಂದ್ಯದಲ್ಲಿ ಗೆಲುವಿನ ಗರಿಯನ್ನು ತನ್ನದಾಗಿಸಿಕೊಂಡಿತು.
More Stories
ಎಪಿಗಾಮಿಯಾ ಸಹ-ಸಂಸ್ಥಾಪಕ ರೋಹನ್ ಮಿರ್ಚಂದಾನಿ ನಿಧನ
ಮಾತೃವಾತ್ಸಲ್ಯದ ಗಣಿ, ಪ್ರೇಮಮಯಿ ಜಗನ್ಮಾತೆ ಶಾರದಾದೇವಿ
ಓದಿನ ಮಹತ್ವ