ಐಪಿಎಲ್ 20-20ಯ 42ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಆಫ್ ಬೆಂಗಳೂರು ತಂಡದ ವಿರುದ್ಧ, ಚೆನ್ನೈ ಸೂಪರ್ ಕಿಂಗ್ಸ್ ತಂಡ 8 ವಿಕೆಟ್‌ಗಳ ವಿಜಯ ಸಾಧಿಸಿತು.
ದುಬೈನ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆರ್‌ಸಿಬಿ ತಂಡ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು.
ಆರ್‌ಸಿಬಿ ತಂಡದಿಂದ ಆರಂಭಿಕ ಬ್ಯಾಟ್ಸ್‌ಮನ್ ಗಳಾಗಿ ಪಡಿಕ್ಕಲ್ ಹಾಗೂ ಫಿಂಚ್ ಫೀಲ್ಡಿಗಿಳಿದರು. ಆದರೆ ಇಂದು ಏಕೋ ಆರ್‌ಸಿಬಿ ಆಟದಲ್ಲಿನ ತನ್ನ ಹಿಡಿತವನ್ನು ಕಳೆದುಕೊಂಡಿತ್ತು. ಪಡಿಕ್ಕಲ್ 21 ಎಸೆತಗಳಿಗೆ 22 ರನ್ ಮತ್ತು ಫಿಂಚ್ 11 ಎಸೆತಗಳಿಗೆ 15 ರನ್ ಗಳಿಕೆ ಮಾಡಿದರು. ನಂತರ ಬಂದ ವಿರಾಟ್ ಕೊಹ್ಲಿ 43 ಎಸೆತಗಳಿಗೆ 50 ರನ್ ಹಾಗೂ ಎಬಿಡೀ ವಿಲಿಯರ್ಸ್ 36 ಎಸೆತಗಳಿಗೆ 39 ರನ್ ಗಳಿಸಿದರೂ ತಂಡ ಪಂದ್ಯದಲ್ಲಿ ಪರಾಜಿತಗೊಳ್ಳಲೇಬೇಕಾಯಿತು. ಆರ್‌ಸಿಬಿ ತಂಡ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 145 ರನ್ ಗಳಿಸಿತು.
ಇತ್ತ ಸಿಎಸ್‌ಕೆ ತಂಡದಿಂದ ಆರ್. ಗಾಯಕ್ವಾಡ್ ಹಾಗೂ ಫಾಫ್ ಡು ಪ್ಲೆಸ್ಸಿಸ್ ಉತ್ತಮ ಆರಂಭ ನೀಡಿದರು. ಗಾಯಕ್ವಾಡ್ 51 ಎಸೆತಗಳಿಗೆ 65 ರನ್ ಹಾಗೂ ಪ್ಲೆಸ್ಸಿಸ್ 13 ಎಸೆತಗಳಿಗೆ 25 ರನ್ ಗಳಿಸಿದರು. ನಂತರ ಬಂದ ಅಂಬಾಟಿ ರಾಯುಡು 27 ಎಸೆತಗಳಿಗೆ 39 ರನ್‌ಗಳ ಮೊತ್ತವನ್ನು ತಂಡಕ್ಕೆ ನೀಡಿದರು. ಸಿಎಸ್‌ಕೆ ತಂಡ 18.4 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 150 ರನ್ ಗಳಿಸಿ ಪಂದ್ಯದಲ್ಲಿ ವಿಜಯಿಯಾಯಿತು.
More Stories
ರಾಜ್ಯ ಸರ್ಕಾರದಿಂದ 11 ಡಿವೈಎಸ್ಪಿ (ಸಿವಿಲ್) ಅಧಿಕಾರಿಗಳ ವರ್ಗಾವಣೆ
MUDA ಹಗರಣ: ಜೆಡಿಎಸ್ ಶಾಸಕ ಜಿಟಿಡಿ ವಿರುದ್ಧ ಕಿಕ್ಬ್ಯಾಕ್ ಆರೋಪ, ಲೋಕಾಯುಕ್ತದಲ್ಲಿ ದೂರು
ನಕಲಿ ಸಿಗರೇಟ್ ತಯಾರಿಸಿ ಮಾರಾಟ – ಕೋಟಿ ಮೌಲ್ಯದ ಸಿಗರೇಟ್ ವಶ