RBI ಎರಡು ಕೋಪರೇಟಿವ್ ಬ್ಯಾಂಕ್‌ಗಳ ಲೈಸೆನ್ಸ್ ರದ್ದು ಮಾಡಿದೆ. ಮಹಾರಾಷ್ಟ್ರದ ಸತಾರದ ಹರೀಹರೇಶ್ವರ ಸಹಕಾರಿ ಬ್ಯಾಂಕ್ ಲಿಮಿಟೆಡ್ ಮತ್ತು ಕರ್ನಾಟಕದ ಶ್ರೀ ಶಾರದ ಮಹಿಳಾ ಕೋಆಪರೇಟಿವ್ ಬ್ಯಾಂಕ್ ಲಿಮಿಟೆಡ್ ತನ್ನ ಲೈಸೆನ್ಸ್ ಅನ್ನು ಕಳೆದುಕೊಂಡಿದೆ.
ಈ ಸಹಕಾರಿ ಬ್ಯಾಂಕ್‌ಗಳು ಸಾಕಷ್ಟು ಬಂಡವಾಳ ಮತ್ತು ಗಳಿಕೆಯನ್ನು ಹೊಂದಿಲ್ಲ. ಹಾಗೆಯೇ ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆಯನ್ನು ಅನುಸರಿಸುವಲ್ಲಿ ವಿಫಲವಾಗಿದೆ ಎಂದು RBI ಹೇಳಿದೆ.
ಈ ಎರಡು ಕೋಆಪರೇಟಿವ್ ಬ್ಯಾಂಕ್‌ಗಳ ಲೈಸೆನ್ಸ್ ಅನ್ನು ರದ್ದು ಮಾಡಿ, ಬ್ಯಾಂಕಿಂಗ್ ವಹಿವಾಟನ್ನು ನಿಲ್ಲಿಸುವಂತೆ ಜುಲೈ 11, 2023ರ ದಿನಾಂಕವನ್ನು ಉಲ್ಲೇಖಿಸಿ ಎರಡು ಪ್ರತ್ಯೇಕ ಆದೇಶ ಪತ್ರವನ್ನು RBI ಬಿಡುಗಡೆ ಮಾಡಿದೆ.
ಶ್ರೀ ಶಾರದ ಮಹಿಳಾ ಕೋಆಪರೇಟಿವ್ ಬ್ಯಾಂಕ್
ತುಮಕೂರು ಮೂಲದ ಶ್ರೀ ಶಾರದಾ ಮಹಿಳಾ ಸಹಕಾರಿ ಬ್ಯಾಂಕ್‌ನಲ್ಲಿ, ಶೇಕಡ 97.82ರಷ್ಟು ಡೆಪಾಸಿಟ್‌ದಾರರು ತಮ್ಮ ಡೆಪಾಸಿಟ್‌ನ ಪೂರ್ಣ ಮೊತ್ತವನ್ನು ಡಿಐಸಿಜಿಸಿಯಿಂದ ಸ್ವೀಕರಿಸಲು ಅರ್ಹರಾಗಿದ್ದಾರೆ. 12 ಜೂನ್ 2023 ರಂತೆ, ಕರ್ನಾಟಕ ಮೂಲದ ಬ್ಯಾಂಕ್‌ನ ಡೆಪಾಸಿಟ್‌ದಾರರಿಗೆ ಡಿಐಸಿಜಿಸಿ 15.06 ಕೋಟಿ ರೂಪಾಯಿಯನ್ನು ಪಾವತಿ ಮಾಡಿದೆ.
ಹರೀಹರೇಶ್ವರ ಸಹಕಾರಿ ಬ್ಯಾಂಕ್ ಲಿಮಿಟೆಡ್
ಹರೀಹರೇಶ್ವರ ಸಹಕಾರಿ ಬ್ಯಾಂಕ್ ಲಿಮಿಟೆಡ್ ಸಲ್ಲಿಕೆ ಮಾಡಿದ ಡೇಟಾ ಪ್ರಕಾರ ಇದರ ಒಟ್ಟು ಗ್ರಾಹಕರ ಪೈಕಿ ಸುಮಾರು ಶೇಕಡ 99.96ರಷ್ಟು ಗ್ರಾಹಕರು ಡಿಐಸಿಜಿಸಿಯಿಂದ ತಮ್ಮ ಡೆಪಾಸಿಟ್‌ನ ಸಂಪೂರ್ಣ ಮೊತ್ತವನ್ನು ಪಡೆಯಲು ಅರ್ಹರಾಗಿದ್ದಾರೆ. ಡಿಐಸಿಜಿಸಿ ಈಗಾಗಲೇ ಸತಾರಾ ಮೂಲದ ಬ್ಯಾಂಕ್‌ನ ಡೆಪಾಸಿಟ್‌ದಾರರಿಗೆ ಒಟ್ಟು ವಿಮಾ ಡೆಪಾಸಿಟ್‌ಗಳಿಗೆ 57.24 ಕೋಟಿ ರೂಪಾಯಿ ಪಾವತಿ ಮಾಡಿದೆ.
ಎರಡು ಬ್ಯಾಂಕುಗಳ ಕಾರ್ಯನಿರ್ವಹಣೆ ಮುಂದುವರಿವುದು ಬ್ಯಾಂಕ್‌ಗಳ ಗ್ರಾಹಕರ ಹಿತಾಸಕ್ತಿಗೆ ಹಾನಿಕಾರಕವಾಗಿದೆ. ಈ ಬ್ಯಾಂಕುಗಳು ಪ್ರಸ್ತುತ ಇರುವ ಸ್ಥಿತಿಯಲ್ಲಿ ತನ್ನ ಗ್ರಾಹಕರು ಬ್ಯಾಂಕ್‌ನಲ್ಲಿ ಡೆಪಾಸಿಟ್ ಮಾಡಿದ ಸಂಪೂರ್ಣ ಮೊತ್ತವನ್ನು ಮರುಪಾವತಿನ ಮಾಡಲು ಸಾಧ್ಯವಾಗದು. ಈ ಬ್ಯಾಂಕುಗಳಿಗೆ ಬ್ಯಾಂಕಿಂಗ್ ವಹಿವಾಟನ್ನು ಮುಂದುವರಿಸಲು ಅವಕಾಶ ನೀಡಿದರೆ, ಸಾರ್ವಜನಿಕರ ಹಿತಾಸಕ್ತಿಗೆ ಇನ್ನಷ್ಟು ದಕ್ಕೆ ಉಂಟಾಗಲಿದೆ, ಎಂದು RBI ತಿಳಿಸಿದೆ.
RBI ಏಪ್ರಿಲ್‌ನಲ್ಲಿ ಲೈಸೆನ್ಸ್ ರದ್ದುಗೊಳಿಸಿದ ಬ್ಯಾಂಕ್‌ಗಳು
ಸೇವಾ ವಿಕಾಸ್ ಕೋಪರೇಟಿವ್ ಬ್ಯಾಂಕ್, ಡೆಕ್ಕಾನ್ ಅರ್ಬನ್ ಕೋಪರೇಟಿವ್, ಮಿಲ್ಲತ್ ಕೋಆಪರೇಟಿವ್ ಬ್ಯಾಂಕ್, ಮುದೋಲ್ ಕೋಆಪರೇಟಿವ್ ಬ್ಯಾಂಕ್, ಶ್ರೀ ಆನಂದ್ ಕೋಆಪರೇಟಿವ್ ಬ್ಯಾಂಕ್, ರುಪೀ ಕೋಆಪರೇಟಿವ್ ಬ್ಯಾಂಕ್, ಬಾಬಾಜಿ ಡೇಟ್ ಮಹಿಳಾ ಅರ್ಬನ್ ಬ್ಯಾಂಕ್ ಮತ್ತು ಲಕ್ಷ್ಮೀ ಕೋಆಪರೇಟಿವ್ ಬ್ಯಾಂಕ್ ಬ್ಯಾಂಕಿಂಗ್ ವಹಿವಾಟು ಮಾಡುವ ಪರವಾನಗಿಯನ್ನು ಕಳೆದುಕೊಂಡ ಬ್ಯಾಂಕ್‌ಗಳಾಗಿದೆ.
- ಡ್ರಗ್ಸ್ ಕೇಸ್ ಹೆಸರಿನಲ್ಲಿ ಟೆಕಿಗೆ 40 ಲಕ್ಷ ವಂಚನೆ
- ಮೈಸೂರು BEML ಅಧಿಕಾರಿ ಆತ್ಮಹತ್ಯೆ ಗೆ ಶರಣು
- MUDA ಹಗರಣ: 15,085 ನಿವೇಶನಗಳು ಪೆಂಡಿಂಗ್, ಹಲವಾರು ಅಕ್ರಮ ಬಯಲು
- ರೋಹಿತ್ ಶರ್ಮಾ ದಂಪತಿಗೆ ಗಂಡು ಮಗು ಜನನ
- ಆಸ್ಪತ್ರೆಯಲ್ಲಿ ಬೆಂಕಿ ಅವಘಡ: 10 ಮಕ್ಕಳು ಸಜೀವ ದಹನ
More Stories
ಶೀಘ್ರದಲ್ಲೇ ಅಡುಗೆ ಎಣ್ಣೆಗಳ ಬೆಲೆ ಏರಿಕೆ ಸಾಧ್ಯತೆ
ಅಕ್ರಮ ಜಾಹಿರಾತು ಫಲಕ ಕುಸಿತಕ್ಕೆ 14 ಸಾವು, 74 ಜನರು ಗಂಭೀರ
ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬಂದರೆ ರಾಮ ಮಂದಿರ ಶುದ್ಧೀಕರಣ : ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಉವಾಚ