ಆರ್ ಎಸ್ ಎಸ್ ಗೆ ಮಂಜೂರಾಗಿದ್ದ ಭೂಮಿ ಹಸ್ತಾಂತರ’ಕ್ಕೆ ಕಾಂಗ್ರೆಸ್ ತಡೆ

Team Newsnap
1 Min Read

ಆರ್ ಎಸ್ ಎಸ್ ಗಾಗಿ ಮಂಜೂರಾಗಿದ್ದ ಭೂಮಿಯ ಹಸ್ತಾಂತರಕ್ಕೆ ಕಾಂಗ್ರೆಸ್ ಸರ್ಕಾರ ತಡೆಯನ್ನು ನೀಡಲಾಗಿದೆ.

ಈ ಹಿಂದಿನ ಸರ್ಕಾರದ ಅವಧಿಯಲ್ಲಿ ರಾಷ್ಟ್ರೀಯ ಸ್ವಯಂ ಸೇವಾ ಸಂಘ ಆರ್ ಎಸ್ ಎಸ್ ಗೆ ಬೆಂಗಳೂರಿನ ಕುರುಬರಹಳ್ಳಿ ಬಳಿಯಲ್ಲಿ 35.33 ಎಕರೆ ಭೂಮಿಯನ್ನು ಮಂಜೂರು ಮಾಡಲಾಗಿತ್ತು.

ಬಿಜೆಪಿ ಸರ್ಕಾರದ ಅವಧಿಯಲ್ಲೇ ಸೆಪ್ಟೆಂಬರ್ ನಲ್ಲಿ ಗೋಮಾಳ ಭೂಮಿ ಆರ್ ಎಸ್ ಎಸ್ ಗಾಗಿ ಮಂಜೂರು ಮಾಡಿ, ಹಸ್ತಾಂತರ ಮಾತ್ರ ಬಾಕಿ ಉಳಿಸಲಾಗಿತ್ತು. ಇದೀಗ ಕುರುಬರಹಳ್ಳಿ ಬಳಿ 35.33 ಎಕರೆ ಆರ್ ಎಸ್ ಎಸ್ ಗಾಗಿ ಮಂಜೂರು ಮಾಡಿದ್ದ ಭೂಮಿ ಹಸ್ತಾಂತರಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರ ತಡೆ ನೀಡಿದೆ.

ಈ ಬಗ್ಗೆ ವಿಧಾನಸಭೆಯಲ್ಲಿ ಶಾಸಕ ಎಸ್.ಟಿ ಸೋಮಶೇಖರ್ ಕೇಳಿದ ಪ್ರಶ್ನೆಗೆ ಕಂದಾಯ ಸಚಿವ ಕೃಷ್ಣಭೈರೇಗೌಡ ಮುಖ್ಯಮಂತ್ರಿ ಗಳ ಸೂಚನೆ ಮೇರೆಗೆ ತಡೆ ನೀಡಿರುವುದಾಗಿ ಉತ್ತರಿಸಿದ್ದಾರೆ.

ಆರ್ ಎಸ್ ಎಸ್ ಗೆ ಮಂಜೂರಾಗಿದ್ದ ಗೋಮಾಳ ಭೂಮಿ ಹಸ್ತಾಂತರಕ್ಕೆ ತಡೆ ನೀಡಿರುವುದಾಗಿ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

Share This Article
Leave a comment