ಭಾರತದ RAW ಮುಖ್ಯಸ್ಥ-ನೇಪಾಳದ ಪ್ರಧಾನಿ ಭೇಟಿ: ನೇಪಾಳದಲ್ಲಿ ಕಿಡಿ

Team Newsnap
1 Min Read

ಭಾರತದ RAW (ರೀಸರ್ಚ್ ಅಂಡ್ ಅನಾಲಿಸಿಸ್ ವಿಂಗ್)ದ ಮುಖ್ಯಸ್ಥ ಸುಮಂತ್ ಕುಮಾರ್‌ ಗೋಯಲ್ ಹಾಗೂ ನೇಪಾಳದ ಪ್ರಧಾನಿ ಕೆ.ಪಿ. ಒಲಿ ಶರ್ಮಾ ಅವರನ್ನು ಬುಧವಾರ ಭೇಟಿ ಮಾಡಿ ತಡರಾತ್ರಿಯವರೆಗೂ ಸಮಾಲೋಚನೆ ನಡೆಸಿದ್ದಾರೆ.

ತಡರಾತ್ರಿಯವರೆಗೆ ನಡೆದ ಸಮಾಲೋಚನೆಯ ವಿಷಯ ನೇಪಾಳದ ವಿರೋಧ ಪಕ್ಷಗಳಿಗೆ ತಿಳಿಯುತ್ತಿದ್ದಂತೆಯೇ ವಿರೋಧ ಪಕ್ಷಗಳು ಪ್ರಧಾನಿಯವರ ಮೇಲೆ ಕೆಂಡಕಾರಿದ್ದಾರೆ.

ಹಲವು ತಿಂಗಳುಗಳಿಂದ ಭಾರತ-ನೇಪಾಳದ ಸಂಬಂಧ ಹದಗೆಟ್ಟಿದೆ. ಹಾಗಾಗಿ ಭಾರತದ ರಾ ಮುಖ್ಯಸ್ಥ-ನೇಪಾಳದ ಪ್ರಧಾನಿಯವರ ಭೇಟಿ ಇಷ್ಟೊಂದು ವಿವಾದಕ್ಕೀಡಾಗಿದೆ.

ಸುಮಂತ್ ಕುಮಾರ್‌ ಗೋಯಲ್ ಹಾಗೂ ಕೆ.ಪಿ. ಒಲಿ ಶರ್ಮಾ ಮಧ್ಯರಾತ್ರಿಯವರೆಗಿನ ಸಭೆಯ ವಿವರ ನೀಡುವಂತೆ ನೇಪಾಳದ ಮಾಜಿ ಪ್ರಧಾನಿ ಪುಷ್ಪ ಕಮಲ್ ದಾಹಲ್ ಪ್ರಚಂಡ, ಬಹದ್ದೂರ್ ರಾವಲ್, ಜಾಲತಾಥ್ ಖಾನಲ್, ಮಾಜಿ ಉಪ ಪ್ರಧಾನಿಗಳಾದ ನಾರಾಯಣ್ ಕಾಜಿ ಶ್ರೇಷ್ಠ ಮತ್ತು ಭೀಮ್ ಹಾಗೂ ಮಾಧವ್ ಕುಮಾರ್ ನೇಪಾಳ್, ಒತ್ತಾಯಿಸಿದ್ದಾರೆ.

ಅಲ್ಲದೇ ಗೋಯಲ್ ಮತ್ತು ಅವರ ತಂಡ ಒಂದು ದಿನದ ನೇಪಾಳ ಪ್ರವಾಸಕ್ಕಾಗಿ ವಿಶೇಷ ವಿಮಾನದಲ್ಲಿ ಕಠ್ಮಂಡುಗೆ ತೆರಳಿದ್ದು, ಮಾಜಿ ಪ್ರಧಾನಿ ಬಾಬುರಾಮ್ ಭಟ್ಟಾರಾಯ್ ಮತ್ತು ನಾಯಕ ಮಹಾಂತ ಠಾಕೂರ್ ಅವರನ್ನೂ ಭೇಟಿ ಮಾಡಿ ಸಮಾಲೋಚನೆ ನಡೆಸಿದ್ದಾರೆ. ಈ ಕ್ರಿಯೆ ನೇಪಾಳದಲ್ಲಿ ರಾಜಕೀಯ ಕಿಡಿಯನ್ನು ಹೊತ್ತಿಸಿದೆ.

TAGGED:
Share This Article
Leave a comment