MIಗೆ 10 ವಿಕೆಟ್‌ಗಳ ಅದ್ಭುತ ವಿಜಯ

Team Newsnap
1 Min Read

ಐಪಿಎಲ್ 20-20ಯ 39ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ, ಎಮ್‌ಐ ತಂಡ‌ 10 ವಿಕೆಟ್‌ಗಳ ಅಮೋಘ ವಿಜಯ ಸಾಧಿಸಿತು.

ದುಬೈನ ಶಾರ್ಜಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಎಮ್‌ಐ ತಂಡ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು.

ಸಿಎಸ್‌ಕೆ ತಂಡದಿಂದ ಆರಂಭಿಕ ಆಟಗಾರರಾಗಿ ಆರ್. ಗಾಯಕ್ವಾಡ್ ಹಾಗೂ ಫಾಫ್ ಡು ಪ್ಲೆಸಿಸ್ ಮೈದಾನಕ್ಕಿಳಿದರು. ಆದರೆ ಆಟ ಆರಂಭ ಅತ್ಯಂತ ನೀರಸವಾಗಿಯೇ ಪ್ರಾರಂಭಗೊಂಡಿತು. ಗಾಯಕ್ವಾಡ್ ಶೂನ್ಯಕ್ಕೆ ಪೆವಿಲಿಯನ್ ಸೇರಿದರೆ, ಪ್ಲೆಸಿಸ್ ಕೇವಲ‌ 1 ರನ್ ಗಳಿಸಿದರು. ಎಸ್. ಕರನ್ (47 ಬಾಲ್‌ಗಳಿಗೆ 52 ರನ್) ಅವರನ್ನೊಬ್ಬರನ್ನು ಬಿಟ್ಟರೆ ತಂಡದ ಯಾವ ಆಟಗಾರರೂ ಸಹ ಉತ್ತಮ ಪ್ರದರ್ಶನ ತೋರಲೇ ಇಲ್ಲ. ಸಿಎಸ್‌ಕೆ ತಂಡ‌ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 114 ರನ್‌‌ಗಳನ್ನು ಮಾತ್ರ ಗಳಿಸಿತು.

ಎಮ್‌ಐ ತಂಡದಿಂದ ಮೈದಾನಕ್ಕಿಳಿದ ಡಿ. ಕಾಕ್ ಹಾಗೂ ಐ. ಕಿಶನ್ ತಂಡವನ್ನು ಗೆಲ್ಲಿಸುವಲ್ಲಿ‌ ಮಹತ್ವದ ಪಾತ್ರ ವಹಿಸಿದರು. ಕಾಕ್ 37ಬಾಲ್‌ಗಳಿಗೆ 46 ರನ್ ಹಾಗೂ ಕಿಶನ್ 37 ಬಾಲ್‌ಗಳಿಗೆ 68 ರನ್ ಗಳಿಸಿದರು‌. ಮುಂಬೈ ತಂಡ 12.2 ಓವರ್‌ಗಳಲ್ಲಿ 0 ವಿಕೆಟ್ ನಷ್ಟಕ್ಕೆ 116 ರನ್ ಗಳಿಸಿ ಪಂದ್ಯದಲ್ಲಿ ಅಮೋಘ ಜಯ ತನ್ನದಾಗಿಸಿಕೊಂಡಿತು.

Share This Article
Leave a comment