February 20, 2026

Newsnap Kannada

The World at your finger tips!

annadani

ರವಿಶಂಕರ್ ಆಶ್ರಮದಲ್ಲಿ ಪ್ರಾಣಾ ಯಾಮ ಬಿಟ್ಟು ಬೇರೆ ಆಯಾಮ‌ ನಡೆಯುತ್ತೆ-ಶಾಸಕ ಅನ್ನದಾನಿ

Spread the love

ಕೆಲವು ಮಠಗಳಲ್ಲಿ ಪ್ರಾಣಯಾಮ ಬಿಟ್ಟು ಬೇರೇನೇನೋ ಆಯಾಮ ನಡೆಸಲಾಗುತ್ತದೆ ಎಂದು ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ ಜೆಡಿಎಸ್ ಶಾಸಕ ಅನ್ನದಾನಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಮಳವಳ್ಳಿಯಲ್ಲಿ ನಡೆದ ಸರ್ಕಾರಿ ನೌಕರರ ಕ್ರೀಡಾಕೂಡದಲ್ಲಿ ಮಠಗಳು‌ ಹಾಗೂ ಯೋಗ ಗುರುಗಳ ಮೇಲೆ ವ್ಯಂಗ್ಯ ಮಾಡಿದ ಅವರು, ಯೋಗಗುರು ರವಿಶಂಕರ್ ಗುರೂಜಿ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಬೆಂಗಳೂರಿನ ಗೋರಿಪಾಳ್ಯದ ಬಳಿ ರವಿಶಂಕರ್ ಗುರೂಜಿ ಅಂತಾ ಒಬ್ಬ ಇದ್ದಾನೆ. ಆ ಗುರೂಜಿಗೆ ಮೊದಲು ಏನು ಇರಲಿಲ್ಲ. ಈಗ ಆತ ಅಲ್ಲಿ ನೂರಾರು ಎಕರೆ ಜಮೀನು ಮಾಡಿ ಕೊಂಡಿದ್ದಾನೆ. ಆತ ಮೊದಲು ಶುರು ಮಾಡಿದ್ದು ಸಣ್ಣ ಮನೆಯಲ್ಲಿ ಪ್ರಾಣಯಾಮ ಅಂತಾ. ಆದರೆ ಅಲ್ಲಿ ಪ್ರಾಣಯಾಮ ಬಿಟ್ಟು ಬೇರೇನೇನೋ ಆಯಾಮ ಶುರುವಾಗಿದೆ ಎಂದು ಹೇಳಿಕೆ ನೀಡಿದ್ದಾರೆ.

error: Content is protected !!