ರವೀಂದ್ರ ಶ್ರೀಕಂಠಯ್ಯ ಅದ್ದೂರಿ ಪ್ರಚಾರ

Team Newsnap
2 Min Read
  • ಜೆಡಿಎಸ್ ಅಧಿಕಾರಕ್ಕೆ ಬರುವುದು ಖಚಿತ
  • ಕುಮಾರಣ್ಣನೇ ಮುಂದಿನ ಮುಖ್ಯಮಂತ್ರಿ
  • ಪ್ರಾದೇಶಿಕ ಪಕ್ಷ ಅಧಿಕಾರಕ್ಕೆ ಬರಲು ಕಾಲ ಪಕ್ವ
  • ಮೇ 13 ರಂದು ಸುಮಲತಾಗೆ ಜನರಿಂದಲೇ ಉತ್ತರ

ಶ್ರೀರಂಗಪಟ್ಟಣ :

ಜೆಡಿಎಸ್ ನ ಫೈರ್ ಬ್ರ್ಯಾಂಡ್ ಶಾಸಕ ಎಂದೇ ಖ್ಯಾತಿಯಾಗಿರುವ ರವೀಂದ್ರ ಶ್ರೀಕಂಠಯ್ಯ ಅವರು ಶ್ರೀರಂಗಪಟ್ಟಣದಲ್ಲಿ ಶುಕ್ರವಾರ ಅದ್ದೂರಿಯಾಗಿ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳ ಜೊತೆ ಪ್ರಚಾರ ಮಾಡಿದರು.

ravindra sri2

ಕ್ಷೇತ್ರದ ಬಾಬುರಾಯನಕೊಪ್ಪಲು, ಕಿರಂಗೂರು ಸೇರಿದಂತೆ ಪ್ರಮುಖ ಹಳ್ಳಿಗಳಲ್ಲಿ ಚುನಾವಣಾ ಪ್ರಚಾರ ಮಾಡಿ ಮತ ಯಾಚಿಸಿದರು.

ಈ ವೇಳೆ ಮಾತನಾಡಿದ ಜೆಡಿಎಸ್ ಅಭ್ಯರ್ಥಿ ರವೀಂದ್ರ ಶ್ರೀಕಂಠಯ್ಯ ಜೆಡಿಎಸ್ ಈ ಬಾರಿ ಅಧಿಕಾರಕ್ಕೆ ಬರುವುದು ಶತ ಸಿದ್ದ. ಕುಮಾರಣ್ಣ ಮುಖ್ಯಮಂತ್ರಿಯಾಗುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದರು.
ಕಾಂಗ್ರೆಸ್ ಮತ್ತು ಬಿಜೆಪಿ ಆಡಳಿತದಿಂದ ಜನರು ರೋಸಿ ಹೋಗಿದ್ದಾರೆ. ಜೆಡಿಎಸ್ ಅಧಿಕಾರಕ್ಕೆ ಬಂದರೆ ಕರ್ನಾಟಕ ಸುವರ್ಣ ಯುಗ ಆರಂಭವಾದಂತೆ. ಜನರ ಮತ್ತು ಜನಪರ ಪಕ್ಷ ಎಂದು ಜನ ಮನ್ನಣೆ ಗಳಿಸಿರುವ ಜೆಡಿಎಸ್ ಮತ್ತೆ ಬಹುಮತದಿಂದ ಅಧಿಕಾರಕ್ಕೆ ಬರಲಿದೆ. ಅದಕ್ಕೆ ಮತದಾರರ ಆಶೀರ್ವಾದ ಬೇಕೆ ಬೇಕು . ನಮ್ಮನ್ನು ಆಶೀರ್ವಾದ ಮಾಡುವಂತೆ ಮತದಾರರಲ್ಲಿ ಮನವಿ ಮಾಡಿದರು.

ravindra sri3

ರಾಜ್ಯದಲ್ಲಿ ಪ್ರಾದೇಶಿಕ ಪಕ್ಷ ಅಧಿಕಾರಕ್ಕೆ ಬಂದರೆ ಕನ್ನಡದ ನೆಲ. ಜಲ , ಭಾಷೆಗೆ ರಕ್ಷಣೆ ಸಿಗಲಿದೆ . ಜನರ ಆಶೋತ್ತರಗಳೂ ಕೂಡ ಈಡೇರುತ್ತವೆ ಎಂದರು.

ಮೇ 13 ರಂದು ಸುಮಲತಾಗೆ ಉತ್ತರ :

ಸಂಸದೆ ಸುಮಾಲತಾ ಅವರು ಜೆಡಿಎಸ್ ಶಾಸಕರ ಹಾಗೂ ನಾಯಕರ ಸ್ವಾಭಿಮಾನವನ್ನು ಪ್ರಶ್ನೆ ಮಾಡಿ ಕೆಣಕುವ ಯತ್ನ ಮಾಡಿದ್ದಾರೆ . ಆದರೆ ನಾವು ಯಾರೂ ಈಗ ಸುಮಲತಾರ ಯಾವುದೇ ಹೇಳಿಕೆಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ಹೇಳಿದರು.

ಸುದ್ದಿಗಾರರ ಜೊತೆ ಮಾತನಾಡಿದ ರವೀಂದ್ರ, ಈಗ ನಮ್ಮ ಪರೀಕ್ಷೆ ನಡೆದಿದೆ. ಈ ರಾಜ್ಯದ , ಜಿಲ್ಲೆಯ ಜನರು ಮೇ 10 ರಂದು ನಮ್ಮ ಮೌಲ್ಯ ಮಾಪನ ಮಾಡಲಿದ್ದಾರೆ. ಮೇ 13 ರಂದು ಫಲಿತಾಂಶ ಬರಲಿದೆ. ಅಂದು ನಾನು ಸುಮಲತಾರ ಎಲ್ಲಾ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡುತ್ತೇನೆ ಎಂದರು.

Share This Article
Leave a comment