ಅತ್ಯಾಚಾರ ಪ್ರಕರಣ: ಅರೋಪಿಗಳು ಪೊಲೀಸ್ ಕಸ್ಟಡಿಗೆ

Team Newsnap
1 Min Read
Voting for state assembly tomorrow: 1.56 lakh police personnel in charge ನಾಳೆ ರಾಜ್ಯ ವಿಧಾನಸಭೆಗೆ ಮತದಾನ : 1.56 ಲಕ್ಷ ಪೊಲೀಸ್ ಸಿಬ್ಬಂದಿಗಳ ಉಸ್ತುವಾರಿ

ಮೈಸೂರಿನಲ್ಲಿ ಆಗಸ್ಟ್ 24 ರ ಸಂಜೆ ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ಬಂಧಿಸಲ್ಪಟ್ಟ ಐವರು ಆರೋಪಿಗಳನ್ನು ನ್ಯಾಯಾಲಯ ಪೊಲೀಸ್ ಕಸ್ಟಡಿಗೆ ನೀಡಿದೆ.


ಪೊಲೀಸರು ಆರೋಪಿಗಳನ್ನು ಮೂರನೇ ಜೆಎಂಎಫ್‌ಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದರು. ನಂತರ ನ್ಯಾಯಾಧೀಶರು ಪೊಲೀಸ್ ಕಸ್ಟಡಿಗೆ ನೀಡಿದರು.
ತಮ್ಮ ಕಸ್ಟಡಿಗೆ ಬಂದಿರುವ ಆರೋಪಿಗಳಿಂದ ಪೊಲೀಸರು ವಿವರವಾದ ಮಾಹಿತಿ ಕಲೆ ಹಾಕುವ ಕಾರ್ಯ ಆರಂಭಿಸಿದ್ದಾರೆ.


ಬಂಧನಕ್ಕೊಳಗಾದ ಒಬ್ಬ ಆರೋಪಿಯನ್ನು ಕಳೆದ ಆರು ತಿಂಗಳ ಹಿಂದಷ್ಟೆ ಶ್ರೀಗಂಧಮರ ಕಳವು ಪ್ರಕರಣದಲ್ಲಿ ಮೈಸೂರಿನ ನಜರ್‌ಬಾದ್ ಪೊಲೀಸರು ಬಂಧಿಸಿ, 5 ಲಕ್ಷರೂ. ಬೆಲೆಯ ಶ್ರೀಗಂಧ ವಶಪಡಿಸಿಕೊಂಡಿದ್ದರು. ಈತನ ವಿರುದ್ಧ 10 ಪ್ರಕರಣಗಳು ಇವೆ ಎಂದು ವರದಿಯಾಗಿದೆ.


ಪೊಲೀಸರ ಸಭೆ: ಶನಿವಾರ ಮೈಸೂರಿಗೆ ಬಂದು ಪತ್ರಿಕಾಗೋಷ್ಠಿಯಲ್ಲಿ ಬಂಧಿತರ ಮಾಹಿತಿ ನೀಡಿದ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣಸೂದ್ ನಗರದಲ್ಲೇ ಮೊಕ್ಕಾಂ ಹೂಡಿದ್ದು ಇಂದು ಖಾಸಗಿ ಹೊಟೇಲ್‌ನಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದರು.

Share This Article
Leave a comment