ನಿತ್ಯಾನಂದನ ಬಂಧನಕ್ಕೆ ಜಾಮೀನು ರಹಿತ ವಾರೆಂಟ್ ಜಾರಿಯಾಗಿದೆ. ನಿತ್ಯಾನಂದ ಎಲ್ಲೇ ಇದ್ದರೂ ಬಂಧಿಸಿ ಕರೆದು ತಂದು ನಿಲ್ಲಿಸಿ ಎಂದು ನ್ಯಾಯಾಲಯ ಸಿಐಡಿಗೆ ಆದೇಶಿಸಿದೆ.
ಅತ್ಯಾಚಾರ ಪ್ರಕರಣ ಸಂಬಂಧ ಈಗಾಗಲೇ ಕೋರ್ಟ್ ಟ್ರಯಲ್ ಆರಂಭವಾಗಿದೆ. ಆದರೆ, ಈ ಕೇಸ್‌ನ 4ನೇ ಆರೋಪಿ ಮತ್ತು 6ನೇ ಆರೋಪಿ ಮಾತ್ರ ಕೋರ್ಟ್‌ಗೆ ಹಾಜರಾಗಿದ್ದಾರೆ. ಈ ಕೇಸ್‌ನ ಪ್ರಮುಖ ಆರೋಪಿಯಾಗಿರುವ ನಿತ್ಯಾನಂದ ಮತ್ತು ಆತನ ಆಪ್ತರು ನಾಪತ್ತೆಯಾಗಿದ್ದಾರೆ. ಇದನ್ನು ಓದಿ – ಕಾಂಗ್ರೆಸ್ ಎಂಎಲ್ ಸಿ ಅಭ್ಯರ್ಥಿ ಮಧುಗೆ ಜೆಡಿಎಸ್ MLC ಮರಿತಿಬ್ಬೇಗೌಡರ ಬೆಂಬಲ ಘೋಷಣೆ
ಈಗಾಗಲೇ ಪ್ರಾಥಮಿಕ ಜಾಮೀನನ್ನು ಹೈಕೋರ್ಟ್ ರದ್ದು ಮಾಡಿತ್ತು. ಹೀಗಾಗಿ ನಿತ್ಯಾನಂದನ ವಿರುದ್ದ ಓಪನ್ ಡೇಟೆಂಟ್ ವಾರೆಂಟ್ ಕೂಡಾ ಆಗಿತ್ತು. ಆದರೆ ಇಲ್ಲಿ ತನಕ ಪೊಲೀಸರಿಗೆ ಆತನನ್ನು ವಶಕ್ಕೆ ಪಡೆಯಲಾಗಿಲ್ಲ. ಹೀಗಾಗಿ ಮತ್ತೆ ನಿತ್ಯಾನಂದನ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿಯಾಗಿದೆ. ಮುಂದಿನ 18 ದಿನಾಂಕ ದಂದು ಬಂಧಿಸಿ ಕರೆತರಲು ಸಿಐಡಿಗೆ ರಾಮನಗರ ಅಪರ ಜಿಲ್ಲಾ & ಸತ್ರ ನ್ಯಾಯಾಲಯ ಆದೇಶ ಹೊರಡಿಸಿದೆ.
ಅತ್ಯಾಚಾರ ಕೇಸ್‌ನಲ್ಲಿ ನಿತ್ಯಾನಂದ ಸ್ವಾಮಿ ಪ್ರಮುಖ ಆರೋಪಿಯಾಗಿದ್ದಾನೆ. ಈತನ ಆಪ್ತರಾದ ಗೋಪಾಲ ಶೀಲಂರೆಡ್ಡಿ 2ನೇ ಆರೋಪಿ, ಮೂರನೇ ಆರೋಪಿ ಶಿವವಲ್ಲಭನೇನಿ, ನಾಲ್ಕನೇ ಆರೋಪಿ ಧನಶೇಖರನ್, ಐದನೇ ಆರೋಪಿ ರಾಗಿಣಿ ಹಾಗೂ ಆರನೇ ಆರೋಪಿಯಾಗಿ ಮಾ. ನಿತ್ಯಾನಂದ ಅಲಿಯಾಸ್ ಜಮುನಾ ರಾಣಿ ಈ ಕೇಸ್‌ನಲ್ಲಿ ಇನ್ವಾಲ್ ಆಗಿದ್ದಾರೆ.
ಪಾಸ್ಪೋರ್ಟ್ ಸಮೇತ ಎಸ್ಕೇಪ್ ಆಗಿದ್ದ ನಿತ್ಯಾನಂದ ಕೈಲಾಸವೆಂಬ ದೇಶವನ್ನು ಕಟ್ಟಿಕೊಂಡು ಅಲ್ಲಿ ತಾನೇ ಅಧಿಪತಿಯಾಗಿ ಮೆರೆಯುತ್ತಿದ್ದಾನೆ ಎಂಬ ಬಗ್ಗೆ ಮಾಹಿತಿ. ಅಲ್ಲದೇ ಅಲ್ಲಿಂದಲೇ ತನ್ನ ಲೀಲೆಗಳ ದರ್ಶನವನ್ನೂ ಮಾಡಿಸುತ್ತಿದ್ದಾನೆ.
More Stories
ಕರ್ನಾಟಕ ಬಂದ್ಗೆ ಕನ್ನಡಪರ ಸಂಘಟನೆಗಳ ನಿರ್ಧಾರ – ಶೀಘ್ರದಲ್ಲೇ ಅಧಿಕೃತ ಘೋಷಣೆ!
ನಾಳೆಯಿಂದ ಆರಂಭವಾಗುವ ದ್ವಿತೀಯ PUC ಪರೀಕ್ಷೆ – ಸಂಪೂರ್ಣ ಮಾಹಿತಿ ಇಲ್ಲಿದೆ!
ಆಧಾರ್ ದೃಢೀಕರಣಕ್ಕೆ ಖಾಸಗಿ ಕಂಪನಿಗಳಿಗೆ ಅನುಮತಿ