‘ರಾಣಿ ಚೆನ್ನಮ್ಮ ವಿವಿಗೆ ೮೭.೩೧ ಎಕರೆ ಜಮೀನು ಮಂಜೂರಾತಿಗೆ ಸಂಪುಟ ಒಪ್ಪಿಗೆ ನೀಡಿತು’ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.
ಸಂಪುಟ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ‘ಸಂಡೂರಿನ ಡೋಣಿಮಲೈ ಗಣಿಣಗಾರಿಕೆಗೆ ಒಪ್ಪಿಗೆ ನೀಡಿಕೆ, ಮೈಸೂರಿನ ಡಿಸಿ ಕಛೇರಿ ನಿರ್ಮಾಣಕ್ಕೆ ೮೪.೬೯ ಕೋಟಿ ರೂಪಾಯಿ ಹೆಚ್ಚುವರಿ ನೀಡಿಕೆ, ಕೆಪಿಎಸ್ ಸಿಯಲ್ಲಿ ಅಕ್ರಮದ ಕುರಿತು ಚರ್ಚೆ, ದೆಹಲಿ ಕರ್ನಾಟಕ ಭವನಕ್ಕೆ ಭೂಮಿ ಪೂಜೆಗೆ ದಿನಾಂಕ ನಿಗದಿ ಹೀಗೆ ಅನೇಕ ವಿಚಾರಗಳ ಕುರಿತು ಚರ್ಚೆ ಮಾಡಲಾಯಿತು’ ಎಂದು ತಿಳಿಸಿದರು.
ಕೆಪಿಎಸ್ಸಿಯಲ್ಲಿನ ಅಕ್ರಮದ ಕುರಿತು ಮತ್ತು ಮಾಜಿ ಅಧ್ಯಕ್ಷ ಹಾಗೂ ಸದಸ್ಯರ ಮೇಲೆ ಭ್ರಷ್ಟಾಚಾರದ ಆರೋಪ ಕೇಳಿ ಬಂದ ಹಿನ್ನಲೆಯಲ್ಲಿ, ಅವರ ಮೇಲೆ ತನಿಖೆ ಕೈಗೊಳ್ಳಬೇಕೆ? ಬೇಡವೇ? ಎಂಬುದರ ಕುರಿತು ಚರ್ಚೆಯಾಯಿತಾದರೂ ಇನ್ನೂ ನಿರ್ಧಾರ ಕೈಗೊಂಡಿಲ್ಲ ಎಂದು ಸಚಿವರು ಮಾಹಿತಿ ನೀಡಿದರು.
More Stories
MUDA ಹಗರಣ: 15,085 ನಿವೇಶನಗಳು ಪೆಂಡಿಂಗ್, ಹಲವಾರು ಅಕ್ರಮ ಬಯಲು
ರೋಹಿತ್ ಶರ್ಮಾ ದಂಪತಿಗೆ ಗಂಡು ಮಗು ಜನನ
ಆಸ್ಪತ್ರೆಯಲ್ಲಿ ಬೆಂಕಿ ಅವಘಡ: 10 ಮಕ್ಕಳು ಸಜೀವ ದಹನ