ರಾಷ್ಟ್ರೀಯ ತನಿಖಾ ಸಂಸ್ಥೆಯ ಖೆಡ್ಡಾಕ್ಕೆ ಬಿದ್ದ ಪಾಕಿಸ್ತಾನದ ಐ ಎಸ್ ಐ ಗೂಢಚಾರ

Team Newsnap
1 Min Read

ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಪಾಕಿಸ್ತಾನಕ್ಕಾಗಿ ಗೂಢಚಾರಿಕೆಯನ್ನು ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ರಾಷ್ಟ್ರೀಯ ತನಿಖಾ ದಳದವರು ಬಂಧಿಸಿದ್ದಾರೆ.
ಈತನನ್ನು ಬಂಧಿಸಿದ ನಂತರ ಭಾರತದ ಬೇರೆ ಬೇರೆ ಭಾಗಗಳಲ್ಲಿ ಸ್ಥಳೀಯ. ಐ ಎಸ್ ಐ ಏಜೆಂಟರು ಪಾಕಿಸ್ತಾನದ ಪರವಾಗಿ ಗೂಢಚಾರಿಕೆ ಮಾಡುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿವೆ.

ಬಂಧಿತ ವ್ಯಕ್ತಿಯು ವಿಶಾಖಪಟ್ಟಣದಲ್ಲಿರುವ ಭಾರತೀಯ ನೌಕಾನೆಲೆಗೆ ಸಂಬಂಧಿಸಿದ ವಿವರಗಳನ್ನು ಪಾಕ್ ಗೆ ವರ್ಗಾಯಿಸುತ್ತಿದ್ದ ಎಂದು ಎನ್ಐಎಯ ತನಿಖಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ಭಾರತದ ಬೇರೆ ಬೇರೆ ನೌಕಾನೆಲೆಗಳಲ್ಲಿನ ರಹಸ್ಯಗಳನ್ನು ಪಾಕ್ ಸ್ಟಳೀಯ ಏಜೆಂಟರೊಂದಿಗೆ ಪಡೆದುಕೊಳ್ಳುತ್ತಿದೆ ಎಂದು ಬಂಧಿತ ವ್ಯಕ್ತಿಯು ಬಾಯ್ಬಿಟ್ಟಿದ್ದಾನೆ.

‘ಬಂಧಿತ ಆರೋಪಿಯಾದ ಗುಟೇಲ್ ಇಮ್ರಾನ್ (37) ನು ಗುಜರಾತ್ ನ್ ಗೋದ್ರಾದ ನಿವಾಸಿ’ ಎಂದು ಮಾಹಿತಿ ನೀಡಿದ ತನಿಖಾಧಿಕಾರಿಗಳು ‘ಇದೊಂದು ಪಾಕಿಸ್ತಾನದ ವ್ಯವಸ್ಥಿತ ಜಾಲ. ಭಾರತ ನೌಕಾಪಡೆಯ ನೌಕೆಗಳು, ಸಬ್ ಮೆರಿನ್ ಗಳ ವಿವರ, ಅವುಗಳು ಓಡಾಡುವ ಮಾರ್ಗದ ಬಗ್ಗೆ ಪಾಕಿಸ್ತಾನ ಈ ಮೂಲಕ ಮಾಹಿತಿ ಪಡೆದುಕೊಳ್ಳುತ್ತಿದೆ’ ಎಂದು ಹೇಳಿದ್ದಾರೆ.
ಸಧ್ಯದಲ್ಲೇ ದೇಶದೆಲ್ಲೆಡೆ ಹರಡಿರುವ ಗೂಢಚಾರಿಗಳನ್ನು ಬಂಧಿಸಿವ ಸಾಧ್ಯತೆ ಇದೆ.

Share This Article
Leave a comment