December 24, 2024

Newsnap Kannada

The World at your finger tips!

ರಂಜಾನ್

ಇಂದಿನಿಂದ ಮುಸ್ಲಿಂ ಬಾಂಧವರ ರಂಜಾನ್ ಉಪವಾಸ ಆರಂಭ

Spread the love

ಮುಸ್ಲಿಮರ ಪವಿತ್ರ ರಂಜಾನ್ ಆಚರಣೆ ಇಂದಿನಿಂದ ಆರಂಭವಾಗಿದೆ.

ಯುಗಾದಿ ಹಬ್ಬದಂದೇ ದೇಶಾದ್ಯಂತ ರಂಜಾನ್ ಚಾಂದ್ ಕಾಣಿಸಿಕೊಂಡಿದ ಮುಸ್ಲಿಂ ಬಾಂಧವರು ಉಪವಾಸ ಆರಂಭಿಸಲು ಸಿದ್ಧತೆ ನಡೆಸಿದ್ದಾರೆ.

ಕಳೆದ ವರ್ಷ ಕೊರೊನಾ 2ನೇ ಅಲೆಯಿಂದಾಗಿ ಮನೆ-ಮನೆಗೆ ಸೀಮಿತಗೊಳಿಸಿದ್ದ ರಂಜಾನ್ ಪ್ರಾರ್ಥನೆಯನ್ನು ಈ ಬಾರಿ ಅದ್ಧೂರಿಯಿಂದ ಆಚರಿಸುವ ಉತ್ಸಾಹದಲ್ಲಿದ್ದಾರೆ.

ಮಾರುಕಟ್ಟೆಗಳಿಗೆ ಇಂದಿನಿಂದಲೇ ಭೇಟಿ ನೀಡುತ್ತಿದ್ದು, ಮುಸ್ಲಿಂ ಬಾಂಧವರು ತಮಗಿಷ್ಟದ ಉಡುಪು, ಅಲಂಕಾರಿಕ ವಸ್ತುಗಳು, ಮಹಿಳೆಯರು ಕುರ್ತಾ, ಬುರ್ಕಾ ಹಬ್ಬದ ಅಡುಗೆಗೆ ಬೇಕಾದ ದಿನಸಿ, ಕರ್ಜೂರ, ಬಾದಾಮಿ ಹೀಗೆ ನೆಚ್ಚಿನ ಸಿಹಿ ತಿನಿಸುಗಳನ್ನೂ ಖರೀದಿಸಲು ಸಜ್ಜಾಗುತ್ತಿದ್ದಾರೆ.

ಬಾಂಧವರಿಗೆ ಮೋದಿ ಶುಭಾಶಯ:

ಪ್ರಧಾನಿ ನರೇಂದ್ರ ಮೋದಿ ರಂಜಾನ್ (ಈದ್ ಉಲ್‌ಫ್ರಿತ್)ಗೆ ಶುಭ ಆರೈಸಿದ್ದಾರೆ.

ಸಮಸ್ತ ಮುಸ್ಲಿಂ ಬಾಂಧವರಿಗೆ ರಂಜಾನ್ ಹಬ್ಬದ ಶುಭಾಶಯಗಳು, ಈ ಪವಿತ್ರ ತಿಂಗಳಲ್ಲಿ ಬಡವರ ಸೇವೆ ಮಾಡಲು ಜನರನ್ನು ಪ್ರೇರೇಪಿಸಲಿ.

ನಮ್ಮ ಸಮಾಜದಲ್ಲಿ ಶಾಂತಿ, ಸಮಾನತೆ, ಸೌಹಾರ್ದತೆ ಇನ್ನಷ್ಟು ಹೆಚ್ಚಿಸಲಿ ಎಂದು ಶುಭ ಹಾರೈಸಿದ್ದಾರೆ. 

ರಂಜಾನ್ ದಿನಗಳಲ್ಲಿ ಉಪವಾಸ ಆಚರಣೆ ಏಕೆ? ಮಹತ್ವ ಏನು ? :

1) ಈ ಮಾಸದಲ್ಲಿ ಮುಸ್ಲಿಮರು 30 ದಿನ ಉಪವಾಸ ಆಚರಿಸುವ ಜೊತೆಗೆ ದಾನ-ಧರ್ಮ, ವಿಶೇಷ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳುತ್ತಾರೆ.

2) ಇಸ್ಲಾಮಿನ ತರಾವೀಹ್, ನಮಾಜ್, ಉಪವಾಸ, ಝಕಾತ್ (ದಾನ), ಹಜ್ ಎಂಬ ಪಂಚಕರ್ಮಗಳನ್ನು ನೇರವೇರಿಸುವ ರಂಜಾನ್ ಪುಣ್ಯ ಸಂಪಾದಿಸುವ ಮಾಸವೂ ಎನಿಸಿಕೊಂಡಿದೆ.

3) ಈ ಸಮಯದಲ್ಲಿ ಆತ್ಮನಿಯಂತ್ರಣದ ಜತೆಗೆ ಸಂಯಮ ರೂಢಿಸಿಕೊಳ್ಳುವುದನ್ನು ಕಲಿಯುತ್ತಾರೆ.

4) ಬಡವರ ಹಸಿವು ಅರಿಯುವ ಜೊತೆಗೆ ಒಂದು ಹೊತ್ತಿನ ಊಟಕ್ಕೆ ಕಷ್ಟಪಡುವವರ ಜೀವನ ಹೇಗಿರಬಹುದು? ಎಂಬ ಪಾಠವನ್ನೂ ಉಪವಾಸ ಕಲಿಸುತ್ತದೆ.

5) ರಾತ್ರಿ ವೇಳೆ ನಡೆಯುವ ವಿಶೇಷ ತರಾವೀಹ್ ನಮಾಜ್‌ಗಳಲ್ಲಿ ಪವಿತ್ರ ಕುರಾನ್ ಪಠಿಸಲಾಗುತ್ತದೆ.

6) ಕುರಾನ್‌ನನ್ನು ಸಂಪೂರ್ಣವಾಗಿ ಬಾಯಿಪಾಠ ಮಾಡಿರುವವರು ಈ ನಮಾಜ್‌ಗೆ ನೇತೃತ್ವ ವಹಿಸುತ್ತಾರೆ.

Copyright © All rights reserved Newsnap | Newsever by AF themes.
error: Content is protected !!