September 29, 2022

Newsnap Kannada

The World at your finger tips!

film,Apple Box,production

Apple Box Studios: A new film production company from actress Ramya ಆಪಲ್ ಬಾಕ್ಸ್ ಸ್ಟುಡಿಯೋಸ್ : ನಟಿ ರಮ್ಯಾರಿಂದ ಹೊಸ ಚಿತ್ರ ನಿರ್ಮಾಣ ಸಂಸ್ಥೆ

ಕೆ.ಆರ್.ಜಿ ಸ್ಟುಡಿಯೋದಲ್ಲಿ ರಮ್ಯಾ: ಹೊಂಬಾಳೆ ಫಿಲ್ಮ್ಸ್ ಮೂಲಕ ರಮ್ಯಾ ಚಿತ್ರರಂಗಕ್ಕೆ ಕಮ್ ಬ್ಯಾಕ್?

Spread the love

ಕೆಜಿಎಫ್ ಸಿನಿಮಾದ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ ಅವರ ಕೆ.ಆರ್.ಜಿ ಸ್ಟುಡಿಯೋಗೆ ಇಂದು ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಭೇಟಿ ಮಾಡುವ ಮೂಲಕ ಕುತೂಹಲ ಮೂಡಿಸಿದ್ದಾರೆ.

ಈ ಹಿಂದೆಯೂ ಕೂಡ ಇದೇ ಕೆ.ಆರ್.ಜಿ ಸ್ಟುಡಿಯೋ ನಿರ್ಮಿಸುತ್ತಿರುವ ಹೊಯ್ಸಳ ಸಿನಿಮಾದ ಶೂಟಿಂಗ್ ಸ್ಪಾಟ್ ಗೂ ರಮ್ಯಾ ಭೇಟಿ ಮಾಡಿದ್ದರು.ಇದನ್ನು ಓದಿ –ಕೋಲಾರದಲ್ಲಿ ಜಗಳ ಬಿಡಿಸಲು ಹೋದ RSS ಮುಖಂಡನಿಗೆ ಚಾಕು ಇರಿತ

WhatsApp Image 2022 06 09 at 4.49.12 PM

ಹಾಗಾಗಿ ಕೆ.ಆರ್.ಜಿ ಸ್ಟುಡಿಯೋ ಅಥವಾ ಹೊಂಬಾಳೆ ಫಿಲ್ಮ್ಸ್ ಮೂಲಕ ರಮ್ಯಾ ಸಿನಿಮಾ ರಂಗಕ್ಕೆ ಕಮ್ ಬ್ಯಾಕ್ ಆಗುತ್ತಿದ್ದಾರೆ ಎನ್ನಲಾಗುತ್ತಿದೆ.

ಪದೇ ಪದೇ ಕೆ.ಆರ್.ಜಿ ಸ್ಟುಡಿಯೋ ಮಾಲೀಕರನ್ನು ರಮ್ಯಾ ಭೇಟಿ ಆಗುತ್ತಿರುವುದರಿಂದ ಈ ಟೀಮ್ ಮೂಲಕವೇ ರಮ್ಯಾ ಸಿನಿಮಾ ಮಾಡಬಹುದು ಎನ್ನುವ ಸುದ್ದಿ ದಟ್ಟವಾಗಿದೆ, ಇದು ಪುನೀತ್ ಅವರ ಆಸೆಯೂ ಆಗಿತ್ತು ಎನ್ನಲಾಗಿದೆ.

Hombale Films Logo

ಪುನೀತ್ ನಟಿಸಬೇಕಿದ್ದ, ಮತ್ತು ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಮಾಡಬೇಕಿದ್ದ ಚಿತ್ರವೊಂದಕ್ಕೆ ರಮ್ಯಾ ಅವರನ್ನು ನಾಯಕಿಯನ್ನಾಗಿ ಆಯ್ಕೆ ಮಾಡಬೇಕು ಎನ್ನುವುದು ಸ್ವತಃ ಪುನೀತ್ ರಾಜ್ ಕುಮಾರ್ ಅವರ ಆಸೆಯಾಗಿತ್ತಂತೆ. ಅದನ್ನು ಹೊಂಬಾಳೆ ಈಡೇರಿಸಲಿದೆ ಎನ್ನುವುದು ಸದ್ಯದ ವರ್ತಮಾನ.

ಇಂದು ಕೂಡ ರಮ್ಯಾ ಅವರು ಕೆ.ಆರ್.ಜಿ ಸ್ಟುಡಿಯೋ ಕಚೇರಿಗೆ ಭೇಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಖ್ಯಾತ ನಿರ್ಮಾಪಕ ಜಯಣ್ಣ, ನಿರ್ದೇಶಕ ಯೋಗಿ ಜಿ ರಾಜ್, ಪುನೀತ್ ಅವರ ಕುಟುಂಬದ ಸದಸ್ಯರೇ ಆಗಿರುವ ಚೆನ್ನ ಸೇರಿದಂತೆ ಹಲವರು ಈ ಸಂದರ್ಭದಲ್ಲಿ ಹಾಜರಿದ್ದರು.

ಈಗಾಗಲೇ ರಮ್ಯಾ ಅವರಿಗಾಗಿಯೇ ಕಥೆಯನ್ನು ಸಿದ್ಧ ಪಡಿಸುತ್ತಿದ್ದು, ಅತೀ ಶೀಘ್ರದಲ್ಲೇ ಘೋಷಣೆ ಮಾಡುವ ಸಾಧ್ಯತೆ ಇದೆ. ಆದರೆ, ಈ ಕುರಿತು ಕೆ.ಆರ್.ಜಿ ಸ್ಟುಡಿಯೋ ಯಾವುದೇ ಅಧಿಕೃತ ಮಾಹಿತಿಯನ್ನಂತೂ ನೀಡಿಲ್ಲ.

error: Content is protected !!