ರಮೇಶ ಅರವಿಂದ್ – ರಚಿತಾರಾಮ್ ನಟನೆಯ ‘100’ ಚಿತ್ರವನ್ನು ವೀಕ್ಷಿಸಲು ಆಗಮಿಸುವಂತೆ ಚಿತ್ರತಂಡ ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ಆಹ್ವಾನ ನೀಡಿದೆ
ಗೃಹ ಸಚಿವರ ನಿವಾಸದಲ್ಲಿ ಇಂದು ಭೇಟಿ ಮಾಡಿದ ನಟ ರಮೇಶ್ ಅರವಿಂದ್ ಚಿತ್ರತಂಡ ನವೆಂಬರ್ 19 ರಂದು ರಿಲೀಸ್ ಆಗಲಿರುವ ಚಿತ್ರವನ್ನು ವೀಕ್ಷಿಸಲು ಆಗಮಿಸಬೇಕೆಂದು ಮನವಿ ಮಾಡಿದ್ದಾರೆ.
100 ಚಿತ್ರ ರಮೇಶ್ ನಟನೆ ಮತ್ತು ನಿರ್ದೇಶನದ ಚಿತ್ರವಾಗಿದೆ. ಅವರ ಕೆರಿಯರ್ನ 102 ನೇ ಚಿತ್ರವಾಗಿದೆ. ಸಸ್ಪೆನ್ಸ್ ಥ್ರಿಲ್ಲರ್ ಕಥಾ ಹಂದರ ಹೊಂದಿರುವ ಈ ಸಿನಿಮಾ ವಿಭಿನ್ನವಾಗಿ ಮೂಡಿ ಬಂದಿದ್ದು ಪ್ರೇಕ್ಷರನ್ನು ರಂಜಿಸುವಲ್ಲಿ ಯಶಸ್ವಿಯಾಗಲಿದೆ ಎಂಬುದು ಚಿತ್ರತಂಡದ ಮಾತು. ರಮೇಶ್ ರೆಡ್ಡಿ ನಿರ್ಮಿಸಿರುವ ಈ ಸಿನಿಮಾಗೆ ಪೊಲೀಸ್ ಸಹಾಯವಾಣಿ 100 ಅಂತ ಹೆಸರಿಟ್ಟಿರುವ ವಿಶೇಷವಾಗಿದೆ
ಕನ್ನಡ ಮತ್ತು ತೆಲಗು ಭಾಷೆಗಳಲ್ಲಿ ತೆರೆಕಾಣಲಿದೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು