ಸ್ಯಾಂಡಲ್‍ವುಡ್ ನಟಿ ಮೋಹಕತಾರೆ ಮಾಜಿ ಸಂಸದೆ ರಮ್ಯಾ ಇಂದು ಹುಟ್ಟುಹಬ್ಬದ ಸಂಭ್ರಮ.
40 ನೇ ವಸಂತಕ್ಕೆ ಕಾಲಿಟ್ಟ ಈ ವಿಶೇಷ ದಿನದಂದು ರಮ್ಯಾ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಳ್ಳುವ ಮೂಲಕ ತಮ್ಮ ವಯಸ್ಸನ್ನು ಬಹಿರಂಗ ಪಡಿಸಿದ್ದಾರೆ.
ಒಂದು ದಶಕಗಳ ಕಾಲ ಸ್ಯಾಂಡಲ್‍ವುಡ್‍ನ ಟಾಪ್ ನಟಿಯಾಗಿ ಮಿಂಚಿದ್ದ ರಮ್ಯಾ ಇಂದು 40ನೇ ವಸಂತಕ್ಕೆ ಕಾಲಿಟ್ಟಿದ್ದಾರೆ
ಇದೇ ಖುಷಿಯಲ್ಲಿ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದು, ಶುಭಾಶಯ ತಿಳಿಸಿದ ಪ್ರೀತಿಯ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ.
ಚಂದನವನದಲ್ಲಿ ಹಲವು ಸ್ಟಾರ್ ನಟರೊಂದಿಗೆ ಅಭಿನಯಿಸುವ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದ ರಮ್ಯಾ ಅವರು ಅಂದು ಎಷ್ಟು ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೋ, ಇಂದಿಗೂ ಅಷ್ಟೇ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಕೇವಲ ಕನ್ನಡ ಮಾತ್ರವಲ್ಲದೇ ತೆಲುಗು, ತಮಿಳು ಭಾಷೆಯ ಸಿನಿಮಾಗಳಲ್ಲಿಯೂ ಬಣ್ಣಹಚ್ಚಿರುವ ರಮ್ಯಾ ವಯಸ್ಸು ಎಷ್ಟೇ ಆದರೂ ಇನ್ನೂ ಟೀನೆಜ್ ಹುಡುಗಿಯಂತೆ ಇದ್ದಾರೆ. ಆದರೆ ಮದುವೆ ಬಗ್ಗೆ ನಿದಿ೯ಷ್ಟವಾಗಿ ಹೇಳಿಲ್ಲ
ಸಧ್ಯಕ್ಕೆ ನಾನು ಅಟ್ಲಾಂಟಿಕ್ ಸಾಗರದಲ್ಲಿ ಇದ್ದೇನೆ. ತುಂಬಾ ಸುಸ್ತಾಗಿದೆ ನಿದ್ದೆ ಬರುತ್ತಾದೆ. ಆದರೂ 39 ವಷ೯ ಕಳೆದು ಹೋಗಿದ್ದು ಖುಷಿ ಇದೆ ಎಂದು ಇನ್ಸ್ಟಾ ಗ್ರಾಂ ರಮ್ಯಾ ಕ್ಯಾಪ್ಷನ್ ಹಾಕಿದ್ದಾಳೆ
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು