ಸಿದ್ದಗಂಗಾ ಶ್ರೀಗಳ ಲಿಂಗೈಕ್ಯ ದಿನವನ್ನು ದಾಸೋಹ ದಿನ : ಬೊಮ್ಮಾಯಿ ಘೋಷಣೆ

Team Newsnap
1 Min Read
CM gave compensation of 3 lakhs to journalist Ramumudi Gowda's family ಪತ್ರಕರ್ತ ರಾಮುಮುದಿಗೌಡರ ಕುಟುಂಬಕ್ಕೆ 3 ಲಕ್ಷ ರು ಪರಿಹಾರ ನೀಡಿದ ಸಿಎಂ

ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಲಿಂಗೈಕ್ಯರಾದ ದಿನವನ್ನು ದಾಸೋಹ ದಿನವನ್ನಾಗಿ ಘೋಷಣೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಕಟಿಸಿದರು

ಸಿದ್ದಗಂಗಾ ಮಠದಲ್ಲಿ ಶಿವಕುಮಾರ ಶ್ರೀಗಳ ಗದ್ದುಗೆಗೆ ಎರಡನೇ ವರ್ಷದ ಲಕ್ಷ ಪುಷ್ಪ ಬಿಲ್ವಾರ್ಜನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು

ನಂತರ ಮಾತನಾಡಿದ ಸಿಎಂ, ಶ್ರೀಗಳ ಆಶೀರ್ವಾದ ಪಡೆದಿದ್ದೇನೆ ಅವರು ಮಾಡಿರೋ ಸೇವೆ ಅನನ್ಯ. ಆಧುನಿಕ ಭಾರತದಲ್ಲಿ ಅವರು ಮಾಡಿದ ಸೇವೆ ವೇಳೆಯಲ್ಲಿ ನಾವಿರುವುದು ಧನ್ಯತಾ ಭಾವ. ಅದರ ಆಚರಣೆಯ ರೂಪುರೇಷಗಳನ್ನು ಸಿದ್ದಲಿಂಗ ಶ್ರೀಗಳ ಬಳಿ ಚರ್ಚಿಸಲಾಗುವುದು ಎಂದರು.

ಅಗತ್ಯ ಮುಂಜಾಗ್ರತಾ ಕ್ರಮಗಳು:

ರಾಜ್ಯಕ್ಕೆ ಕೊರೊನಾ ಮೂರನೇ ಅಲೆ ಭೀತಿ ಹಿನ್ನೆಲೆ ಪ್ರತಿಕ್ರಿಯಿಸಿದ ಅವರು, ಮೂರನೇ ಅಲೆ ಬಗ್ಗೆ ನಾವು ನಿಗಾ ವಹಿಸಿದ್ದೇವೆ. ಕಂಟೈನ್ಮೆಂಟ್ ಝೋನ್ ಮಾಡುವ ಮೂಲಕ ನಿಯಂತ್ರಣದಲ್ಲಿಡಲು ಪ್ರಯತ್ನಿಸುತ್ತಿದ್ದೇವೆ. ಎಲ್ಲಾ ಸ್ಯಾಂಪಲ್‍ಗಳನ್ನು ಡೆಲ್ಟಾ ಅಥವಾ ಓಮಿಕ್ರಾನ್ ಎನ್ನುವುದನ್ನು ಖಾತ್ರಿಪಡಿಸಿಕೊಳ್ಳಲು ಕಳಿಸುತ್ತಿದ್ದೇವೆ. ವಿಮಾನ ನಿಲ್ದಾಣ ಹಾಗೂ ಕೇರಳದಿಂದ ಬಂದವರ ಮೇಲೆ ಹೆಚ್ಚಿನ ನಿಗಾ ವಹಿಸಲಾಗುತ್ತಿದೆ. ಶಾಲೆ, ಕಾಲೇಜುಗಳಲ್ಲೂ ಸಹ ಹೆಚ್ಚಿನ ಬಿಗಿ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದರು.

Share This Article
Leave a comment