ರಾಮನಗರ ರೇಷ್ಮೆ ಮಾರುಕಟ್ಟೆ ಡಿಡಿ ನಾಪತ್ತೆ ಪ್ರಕರಣ: ಗೂಡು ಮಾರಿದವರ ಕಣ್ಣೀರು

Team Newsnap
1 Min Read

ಕಳೆದ ವಾರ ನಾಪತ್ತೆಯಾಗಿರುವ ರಾಮನಗರ ಸಿಲ್ಕ್ ಮಾರ್ಕೆಟ್ ಉಪನಿರ್ದೇಶಕ ಮುನ್ಷಿ ಬಸಯ್ಯ ಇನ್ನೂ ಸಿಕ್ಕಿಲ್ಲ.

ರೀಲರ್ಸ್​ಗಳು ತಾವು ಖರೀದಿಸಿದ ರೇಷ್ಮೆಗೂಡಿನ ಹಣವನ್ನು ಬಸಯ್ಯನವರ ಅಕೌಂಟ್​ಗೇ ಹಾಕುತ್ತಿದ್ದರು. ಈಗ ರೈತರು ಹಣ ಸಿಗದೇ ಪರದಾಡುತ್ತಿದ್ದಾರೆ.
ಕಳೆದ ವಾರದಿಂದ ನಾಪತ್ತೆಯಾಗಿರುವ ಮುನ್ಷಿ ಬಸಯ್ಯ ಬೆಂಗಳೂರಿನ ಮನೆಗೆ ಬಂದಿದ್ದರು. ಅವರು ಎಲ್ಲಿದ್ದರೂ ಎಂದು ಹೇಳಲಿಲ್ಲ. ಆದರೆ ಈಗ ಮತ್ತೆ ನಾಪತ್ತೆಯಾಗಿದ್ದಾರೆಂದು ಮುನ್ಷಿ ಬಸಯ್ಯ ಪುತ್ರ ಧನ್ವಿ ದತ್ತ ಮಾಹಿತಿ ಹಂಚಿಕೊಂಡಿದ್ದಾರೆ.

ಮಾರುಕಟ್ಟೆಯ ಪ್ರಭಾರ ಅಧಿಕಾರಿ ಕೆ.ಟಿ.ವೆಂಕಟೇಶ್ ಸಹ ರಾಮನಗರದ ಐಜೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಮುನ್ಷಿ ಬಸಯ್ಯ ವಿರುದ್ಧ ಎಫ್ ಐಆರ್ ದಾಖಲಾಗಿದೆ. ದೂರಿನ ಪ್ರತಿ ಸರ್ಕಾರಕ್ಕೂ ತಲುಪಿದೆ. ಎಫ್ ಐಆರ್ ನಲ್ಲಿ 569 ಜನ ರೈತರಿಗೆ 2.36 ಕೋಟಿಗೂ ಹೆಚ್ಚು ಹಣ ಸಂದಾಯವಾಗಬೇಕಿತ್ತು. ಅದರಲ್ಲಿ 1.5 ಕೋಟಿಗೂ ಹೆಚ್ಚು ಹಣಕ್ಕೆ ಮುನ್ಷಿ ಬಸಯ್ಯ ಜವಾಬ್ದಾರಿಯಾಗಿದ್ದಾರೆ.

ಅವರನ್ನು ಪತ್ತೆ ಮಾಡಿ ತನಿಖೆ ನಡೆಸಬೇಕಿದೆ ಎಂದು ದಾಖಲಿಸಲಾಗಿದೆ. ಇನ್ನು ಅದಲ್ಲದೇ ದಿನೇದಿನೇ ರೈತರಿಗೆ ಹಣ ಕೊಡಬೇಕಿರುವ ಪಟ್ಟಿ ಬೆಳೆಯುತ್ತಿದೆ. ಈ ಬಗ್ಗೆ ಕೆ.ಟಿ. ವೆಂಕಟೇಶ್ ಮಾಹಿತಿ ಪ್ರಕಾರವಾಗಿ
ಒಟ್ಟಾರೆಯಾಗಿ, ರೇಷ್ಮೆಗೂಡು ಮಾರುಕಟ್ಟೆ ಅಧಿಕಾರಿ ನಾಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಆದರೆ ಇಲಾಖೆಯ ಅಧಿಕಾರಿಗಳಿಂದ ಆಗಿರುವ ತಪ್ಪಿಗೆ ರೈತರು-ರೀಲರ್ಸ್ ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತರಿಗೆ ಆಗಿರುವ ಅನ್ಯಾಯದ ಬಗ್ಗೆ ಹಿರಿಯ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಮುನ್ಷಿ ಬಸಯ್ಯ ಜೊತೆಗೆ ಇನ್ನು ಕೆಲ ಅಧಿಕಾರಿಗಳ ಕೈವಾಡವೂ ಇದೇ ಎನ್ನಲಾಗುತ್ತಿದೆ.

ತನಿಖೆಯ ನಂತರ ಸತ್ಯಾಂಶ ತಿಳಿಯ ಬೇಕಿದೆ. ಜೊತೆಗೆ ಬಸಯ್ಯನವರ ಕುಟುಂಬಸ್ಥರ ಹೇಳಿಕೆ ಸಹ ಅನುಮಾನ ಹುಟ್ಟಿಸುತ್ತಿದೆ.

Share This Article
Leave a comment