January 29, 2026

Newsnap Kannada

The World at your finger tips!

KU Y

ರೇಷ್ಮೆ ನಗರಿಯ ಪಕ್ಷಾಂತರ ಪರ್ವದಲ್ಲಿ ‘ಸೈನಿಕ’ ಯಶಸ್ವಿ : ತೆನೆ ಇಳಿಸಿ ಕಮಲ ಹಿಡಿದ ನಾಯಕರು

Spread the love

ಮಾಜಿ ಸಿಎಂ ಹೆಚ್‌ಡಿಕೆ ಸ್ವಕ್ಷೇತ್ರ ಚನ್ನಪಟ್ಟಣದಲ್ಲಿ ಪಕ್ಷಾಂತರ ಪರ್ವ ಶುರುವಾಗಿದೆ.

ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಈಗಾಗ್ಲೇ ಜೆಡಿಎಸ್‌ನ ಕೆಲ ನಾಯಕರನ್ನು ತಮ್ಮೆಡೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯೂ ಆಗಿದ್ದಾರೆ.

ಆದರೆ ಹೆಚ್‌ಡಿಕೆ ಮಾತ್ರ ಮತ್ತೊಂದು ರಣವ್ಯೂಹ ರಚಿಸಿದ್ದಾರೆ ಎಲ್ಲವನ್ನು ಗೌಪ್ಯವಾಗಿಟ್ಟಿದ್ದಾರೆ

ರೇಷ್ಮೆ ನಗರಿ ರಾಮನಗರ ಹಾಗೂ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಗಳು ಸದ್ಯಕ್ಕೆ ಜೆಡಿಎಸ್‌ನ ಹಿಡಿತದಲ್ಲಿವೆ. ಹೀಗಾಗಿ, ಈ ದಳಕೋಟೆ ಭೇದಿಸಲು ಸೈನಿಕ ನಾನಾ ಕಸರತ್ತು ಶುರು ಮಾಡಿದ್ದಾರೆ.

ಜೆಡಿಎಸ್‌ನ ಲಿಂಗೇಶ್ ಕುಮಾರ್, ಕುಣ್‌ಗೆರೆ ರವಿ, ಹೆಚ್.ಎನ್.ಅಣ್ಣಯ್ಯ, ಚಕ್ಕೆರೆ ಜಯಪ್ರಕಾಶ್ ಸೇರಿ ಹೀಗೆ ಒಂದಷ್ಟು ನಾಯಕರನ್ನು ಸಿ.ಪಿ. ಯೋಗೇಶ್ವರ್ ಸೆಳೆದುಕೊಂಡಿದ್ದಾರೆ.

ತೆನೆ ಇಳಿಸಿ, ಕಮಲ ಹಿಡಿದವರು ಬಹಿರಂಗವಾಗಿಯೇ ಹೆಚ್‌ಡಿಕೆ ಮೇಲೆ ಆರೋಪ ಮಾಡುತ್ತಿದ್ದಾರೆ ಇದಕ್ಕೆ ಹೆಚ್‌ಡಿಕೆ ಕೂಡ ಟಾಂಗ್‌ ಕೊಟ್ಟಿದ್ದಾರೆ.

ಇನ್ನೂ ಈ ಬಾರಿ ಹೆಚ್.ಡಿ.ಕುಮಾರಸ್ವಾಮಿಯನ್ನು ಕಟ್ಟಿಹಾಕುವ ದೃಷ್ಟಿಯಿಂದಲೇ ಚನ್ನಪಟ್ಟಣದಲ್ಲಿ ಪಕ್ಷಾಂತರ ಪರ್ವಕ್ಕೆ ಸಿಪಿವೈ ಕೈ ಹಾಕಿದ್ದಾರೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಚನ್ನಪಟ್ಟಣ ಕ್ಷೇತ್ರದಿಂದಲೇ ಸಿಪಿವೈ ಹಾಗೂ ಎಚ್‌ಡಿಕೆ ಮುಖಾಮುಖಿಯಾಗಲಿದ್ದಾರೆ.

error: Content is protected !!