ನಟ ರಜನಿಕಾಂತ್ ಮುಂದಿನ ರಾಜಕೀಯ ನಡೆ: ನಾಳೆ ಮಹತ್ವದ ಸಭೆ

Team Newsnap
2 Min Read

ಅನಾರೋಗ್ಯದ ಕಾರಣದಿಂದಾಗಿ ತಮ್ಮ ರಾಜಕೀಯ ನಡೆಯನ್ನು ಬದಲಿಸುವುದಾಗಿ ನಿರ್ಧರಿಸಿದ್ದ ರಜನಿಕಾಂತ್ ಗೆ ಅಭಿಮಾನಿಗಳಿಂದ ಆ ನಿರ್ಧಾರವನ್ನು ಮರುಪರಿಶೀಲಿಸುವಂತೆ ಒತ್ತಡ ಬಂದಿದೆ.

ಈ ಹಿನ್ನಲೆಯಲ್ಲಿ ರಜನಿಕಾಂತ್ ತಮಿಳುನಾಡಿನ ಚುನಾವಣೆಗೂ ಮುನ್ನ ತಮ್ಮ ರಾಜಕೀಯ ನಿಲುವಿನ ಕುರಿತಾಗಿ ಚರ್ಚಿಸಲು ತಮ್ಮ ಪಕ್ಷದ ಜಿಲ್ಲಾ ಕಾರ್ಯದರ್ಶಿಗಳಾದ ರಜಿನಿ ಮಕ್ಕಲ್ ಮಂದ್ರಾಮ್ ಅವರನ್ನು ನಾಳೆ ಭೇಟಿಯಾಗಲಿದ್ದಾರೆ.

ಚುನಾವಣೆಗೆ ಸ್ಪರ್ಧೆ ಸಾಧ್ಯತೆ?

ಮುಂದಿನ ವರ್ಷ ನಡೆಯಲಿರುವ ತಮಿಳುನಾಡು ವಿಧಾನಸಭೆ ಚುನಾವಣೆಯ ಸ್ಪರ್ಧೆಯ ಬಗ್ಗೆ ಸೂಪರ್‌ಸ್ಟಾರ್ ರಜನಿಕಾಂತ್ ನಾಳೆ ಒಂದು ಸ್ಪಷ್ಟ ತೀರ್ಮಾನ ಪ್ರಕಟಿಸಲಿದ್ದಾರೆ.

ಚೆನ್ನೈನ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಸೂಪರ್‌ಸ್ಟಾರ್ ರಜನಿಕಾಂತ್ ಅವರು ರಜನಿ ಮಕ್ಕಳ್ ಮಂಡ್ರಂನ ಪದಾಧಿಕಾರಿಗಳ ಸಭೆ ಕರೆದಿದ್ದಾರೆ. ಈ ಸಭೆಯ ನಂತರ 2021 ರಲ್ಲಿ ನಡೆಯುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಬೇಕೋ ಬೇಡವೋ ಎಂಬ ಬಗ್ಗೆ ಒಂದು ತೀರ್ಮಾನ ಪ್ರಕಟಿಸುವ ಸಾಧ್ಯತೆ ಇದೆ.

ನಾಳೆ ಎಲ್ಲವೂ ತೀರ್ಮಾನ

ರಜನಿ ಮಕ್ಕಳ ಮಂಡ್ರಮ್ ನ ಜಿಲ್ಲಾ ಕಾರ್ಯದರ್ಶಿ ಪ್ರಕಾರ ನಾಳೆ ಸೂಪರ್‌ಸ್ಟಾರ್ ರಜನಿಕಾಂತ್ ಚುನಾವಣೆ ಬಗ್ಗೆ ಒಂದು ಸ್ಪಷ್ಟ ತೀರ್ಮಾನವನ್ನು ಪ್ರಕಟಿಸುವ ಸಾಧ್ಯತೆ ಇದೆ. ಸೂಪರ್‌ಸ್ಟಾರ್ ತೆಗೆದುಕೊಳ್ಳುವ ತೀರ್ಮಾನಕ್ಕೆ ನಾವೆಲ್ಲ ಬದ್ಧ.ಅವರ ತೀರ್ಮಾನಕ್ಕೆ ತಮ್ಮ ಬೆಂಬಲವಿರುತ್ತದೆ ಎಂದು ಹೇಳಿದ್ದಾರೆ.

ನಾಳೆ ನಡೆಯುವ ಸಭೆಯಲ್ಲಿ ಸೂಪರ್‌ಸ್ಟಾರ್ ರಜನಿಕಾಂತ್ ಯಾವ ತೀರ್ಮಾನ ಕೈಗೊಳ್ಳುತ್ತಾರೊ ನಮಗೆ ಗೊತ್ತಿಲ್ಲ. ಅವರು ನಮ್ಮಿಂದ ಏನನ್ನು ನಿರೀಕ್ಷಿಸುತ್ತಿದ್ದಾರೆ ಎಂಬುದು ಅರಿವಿಲ್ಲ. ಶುಭ ಸುದ್ದಿಯ ನಿರೀಕ್ಷೆಯಲ್ಲಿ ನಾವಿದ್ದೇವೆ ಎಂದು ಅವರು ಹೇಳಿದ್ದಾರೆ.

ಪಕ್ಷ ಸ್ಥಾಪನೆ ಮಾಡಿರಲಿಲ್ಲ:

ಸೂಪರ್‌ಸ್ಟಾರ್ ರಜನಿಕಾಂತ್ 2017ರ ಡಿಸೆಂಬರ್‌ನಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಪಕ್ಷ ಸ್ಥಾಪಿಸುವುದಾಗಿ ಹೇಳಿದ್ದರಾದರೂ ಯಾವುದೇ ಪಕ್ಷ ಸ್ಥಾಪನೆ ಮಾಡಿರಲಿಲ್ಲ. ಕೆಲ ದಿನಗಳ ಹಿಂದೆ ಅವರು ಸಕ್ರಿಯ ರಾಜಕಾರಣದಿಂದ ದೂರ ಉಳಿಯುವುದಾಗಿ ಹೇಳಿದ್ದರಾದರೂ ಚುನಾವಣೆ ಸ್ಪರ್ಧೆಯ ಬಗ್ಗೆ ಅವರ ಮೇಲೆ ಒತ್ತಡಗಳು ಹೆಚ್ಚಿವೆ. ಹಾಗಾಗಿ, ನಾಳಿನ ರಜನಿ ಮಕ್ಕಳ್ ಮಂಡ್ರಂ ಪದಾಧಿಕಾರಿಗಳ ಸಭೆಯಲ್ಲಿ ಒಂದು ಸ್ಪಷ್ಟ ನಿರ್ಧಾರ ಪ್ರಕಟಿಸುವ ಸಾಧ್ಯತೆಗಳಿವೆ.

ಆರೋಗ್ಯ ಕಾರಣಗಳಿಂದ ಜನರನ್ನು ಭೇಟಿ ಮಾಡದಂತೆ ವೈದ್ಯರು ಸಲಹೆ ನೀಡಿರುವುದರಿಂದ ಕೋವಿಡ್‌ನ ಪರಿಸ್ಥಿತಿಯಲ್ಲಿ ಚುನಾವಣೆ ಪ್ರಚಾರದಲ್ಲಿ ಪಾಲ್ಗೊಳ್ಳುವುದು ಅವರಿಗೆ ಅಪಾಯ ತಂದೊಡ್ಡಬಹುದು ಎಂದು ವೈದ್ಯರು ಹೇಳಿರುವುದರಿಂದ
ರಜನಿಕಾಂತ್ ಚುನಾವಣೆ ಸ್ಪರ್ಧೆಯ ಬಗ್ಗೆ ಯಾವ ತೀರ್ಮಾನ ಕೈಗೊಳ್ಳುತ್ತಾರೆ ಎಂಬುದು ಕುತೂಹಲ ಕೆರಳಿಸಿದೆ.

Share This Article
Leave a comment