ಅಸ್ಸಾಂನಲ್ಲಿನ ರಾಜೀವ್ ಗಾಂಧಿ ನ್ಯಾಷನಲ್ ಪಾರ್ಕ್ ಹೆಸರು ಬದಲಿಸಲು ರಾಜ್ಯ ಸಚಿವ ಸಂಪುಟ ತೀರ್ಮಾನಿಸಿದೆ.
ರಾಜೀವ್ ಗಾಂಧಿ ನ್ಯಾಷನಲ್ ಪಾರ್ಕ್ ಹೆಸರನ್ನು ಒರಂಗ್ ನ್ಯಾಷನಲ್ ಪಾರ್ಕ್ ಎಂದು ಬದಲಾಯಿಸಲಾಗುವುದು. ಆದಿವಾಸಿಗಳು ಮತ್ತು ಚಹಾ ತೋಟದಲ್ಲಿ ಕೆಲಸ ಮಾಡುವ ಬುಡಕಟ್ಟು ಜನರ ಆಗ್ರಹದ ಹಿನ್ನೆಲೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಜಲ ಸಂಪನ್ಮೂಲ ಸಚಿವ ಪೀಯೂಷ್ ಹಜಾರಿಕಾ ಗುವಾಹಟಿಯಲ್ಲಿ ಸಚಿವ ಸಂಪುಟ ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಈ ಉದ್ಯಾನ ದರಾಂಗ್ ಹಾಗೂ ಸೋನಿತ್‌ಪುರ ಜಿಲ್ಲೆಗಳ ಮೂಲಕ ಹರಿಯುವ ಬ್ರಹ್ಮಪುತ್ರ ನದಿಯ ಉತ್ತರ ತೀರದಲ್ಲಿದೆ. 79.28 ಚದರ ಕಿ.ಮೀ. ವಿಸ್ತೀರ್ಣದ ಈ ಅರಣ್ಯವನ್ನು 1985 ರಲ್ಲಿ ವನ್ಯಜೀವಿ ಧಾಮವೆಂದು, ತದನಂತರ 1999ರಲ್ಲಿ ರಾಷ್ಟ್ರೀಯ ಉದ್ಯಾನವೆಂದು ಘೋಷಿಸಲಾಯಿತು.
ಇತ್ತೀಚಿಗೆ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರಾಜೀವ್ ಗಾಂಧೀ ಖೇಲ್‌ರತ್ನ ಹೆಸರು ಬದಲಿಸಿ ಆ ಪ್ರಶಸ್ತಿಗೆ ಹಾಕಿ ಮಾಂತ್ರಿಕ ಮೇ.ಧ್ಯಾನ್‌ಚಂದ್ ಹೆಸರು ನಾಮಕರಣ ಮಾಡಿತ್ತು.
- ಹಾಲಿನ ದರ ಏರಿಕೆ? ಶೀಘ್ರದಲ್ಲೇ ಕೆಎಂಎಫ್ ನಿರ್ಣಯ
- ಮೈಸೂರಿನ ಪ್ರಿನ್ಸೆಸ್ ರಸ್ತೆಗೆ ಸಿದ್ದರಾಮಯ್ಯ ಹೆಸರು: ಪ್ರತಾಪ್ ಸಿಂಹ-ಯದುವೀರ್ ನಡುವೆ ವಾಕ್ಸಮರ
- ವಾರಕ್ಕೆ 70 ಗಂಟೆ ಕೆಲಸದ ಮೇಲೆ ಉದ್ಯಮಿ ನಮಿತಾ ಥಾಪರ್ ಪ್ರತಿಕ್ರಿಯೆ
- ಸಿಲಿಂಡರ್ ಸ್ಫೋಟ ಪ್ರಕರಣ: ಇಬ್ಬರು ಅಯ್ಯಪ್ಪ ಮಾಲಾಧಾರಿಗಳ ದುರ್ಮರಣ
- ಸಂಸತ್ ಭವನದ ಬಳಿಯ ದಾರುಣ ಘಟನೆ: ವ್ಯಕ್ತಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನ
More Stories
ಹಾಲಿನ ದರ ಏರಿಕೆ? ಶೀಘ್ರದಲ್ಲೇ ಕೆಎಂಎಫ್ ನಿರ್ಣಯ
ಮೈಸೂರಿನ ಪ್ರಿನ್ಸೆಸ್ ರಸ್ತೆಗೆ ಸಿದ್ದರಾಮಯ್ಯ ಹೆಸರು: ಪ್ರತಾಪ್ ಸಿಂಹ-ಯದುವೀರ್ ನಡುವೆ ವಾಕ್ಸಮರ
ವಾರಕ್ಕೆ 70 ಗಂಟೆ ಕೆಲಸದ ಮೇಲೆ ಉದ್ಯಮಿ ನಮಿತಾ ಥಾಪರ್ ಪ್ರತಿಕ್ರಿಯೆ