ಬೆಂಗಳೂರಿನಲ್ಲಿ ನಿನ್ನೆ ರಾತ್ರಿ ಸುರಿದ ಭಾರೀ ಮಳೆಗೆ ಯುವಕನೊಬ್ಬ ರಾಜಕಾಲುವೆಯಲ್ಲಿ ಕೊಚ್ಚಿಹೋಗಿದ್ದಾನೆ. ಈ ಘಟನೆ ಕೆ.ಆರ್.ಪುರದ ಗಾಯತ್ರಿ ಬಡಾವಣೆಯಲ್ಲಿ ನಡೆದಿದೆ. ಶಿವಮೊಗ್ಗ ಮೂಲದ ಮಿಥುನ್ ಸಾಗರ್ (24) ಕೊಚ್ಚಿ ಹೋಗಿರುವ ಯುವಕ.
ನಿನ್ನೆ ರಾತ್ರಿ 7 ಗಂಟೆಯಿಂದ ಸುರಿದ ಮಳೆಯಿಂದಾಗಿ ರಾಜಕಾಲುವೆ ತುಂಬಿ ಹರಿಯುತ್ತಿತ್ತು. ರಾತ್ರಿ 12 ಗಂಟೆ ಸುಮಾರಿಗೆ ಮಿಥುನ್ ವಾಸವಿದ್ದ ಮನೆಯ ಸುತ್ತ ಸಂಪೂರ್ಣವಾಗಿ ನೀರು ಅವರಿಸಿಕೊಂಡಿತ್ತು. ಅದಾದ ಕೆಲವು ಹೊತ್ತುಗಳಲ್ಲಿ ಆ ಕಟ್ಟಡದ ಬಳಿಯಿದ್ದ ಕಾಂಪೌಂಡ್ ಬಿದ್ದಿದೆ. ಏಕಾಏಕಿ ನೀರು ನುಗ್ಗುತ್ತಿದ್ದಂತೆಯೇ ಯುವಕ ಮಿಥುನ್ ಬೈಕ್ ಕೊಚ್ಚಿಕೊಂಡು ಹೋಗಲು ಶುರುವಾಗಿದೆ. ಆಗ ಯುವಕ ಬೈಕ್ ಹಿಡಿದಿಟ್ಟುಕೊಳ್ಳಲು ಮುಂದಾಗಿದ್ದಾನೆ. ಇದೇ ವೇಳೆ ನೀರಿನ ರಭಸಕ್ಕೆ ಮಿಥುನ್ ಕೊಚ್ಚಿಹೋಗಿದ್ದಾನೆ.
ಇದನ್ನು ಓದಿ – ಸೇನೆಗೆ ಪುಂಡರ ಅಗತ್ಯವಿಲ್ಲ, ರೈಲು ಸುಡುವವರು ಸೇನೆಗೆ ಸೂಕ್ತರಲ್ಲ: ಮಾಜಿ ಜನರಲ್ ವಿಪಿ ಮಲೀಕ್
ಈ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಹಾಗೂ ಕೆಆರ್ಪುರಂ ಪೊಲೀಸರು ಭೇಟಿ ನೀಡಿ ಶೋಧಕಾರ್ಯ ಮುಂದುವರಿಸಿದ್ದಾರೆ. ಇದೀಗ ಚೀಫ್ ಫೈರ್ ಆಫೀಸರ್ ರವಿಪ್ರಸಾದ್ ನೇತೃತ್ವದಲ್ಲಿ ಮಿಥುನ್ಗಾಗಿ ಶೋಧಕಾರ್ಯ ನಡೆಸುತ್ತಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಜೊತೆ ಎಸ್ಡಿಆರ್ಎಫ್, ಸ್ಥಳೀಯ ಪೊಲೀಸರು ಹಾಗೂ ಸ್ಥಳೀಯರು ಸಾಥ್ ನೀಡುತ್ತಿದ್ದಾರೆ. ಯುವಕ ರಾಜಕಾಲುವೆಗೆ ಬಿದ್ದ ಸ್ಥಳದಿಂದ ಸುಮಾರು ಎರಡು ಕಿ ಮಿ ತನಕ ಹುಡುಕಾಟ ನಡೆಸಲಾಗಿದೆ ಎಲ್ಲಿಯೂ ಪತ್ತೆಯಾಗಿಲ್ಲ.
- ಡಾ. ವೀರೇಂದ್ರ ಹೆಗ್ಗಡೆ, ಇಳಯರಾಜ ಸೇರಿ ನಾಲ್ವರು ರಾಜ್ಯಸಭೆಗೆ ನಾಮ ನಿರ್ದೇಶನ
- KRSಗೆ 30 ಸಾವಿರ ಕ್ಯೂಸೆಕ್ ಒಳಹರಿವು – ಪ್ರವಾಹದ ಮುನ್ನೆಚ್ಚರಿಕೆ : ಆಣೆಕಟ್ಟೆ ಭರ್ತಿಗೆ 9 ಅಡಿ ಬಾಕಿ
- 18 ದಿನಗಳಲ್ಲಿ 8 ಬಾರಿ ತಾಂತ್ರಿಕ ದೋಷ: ಸ್ಪೈಸ್ ಜೆಟ್ ಗೆ ಡಿಜಿಸಿಎ ನೊಟೀಸ್
- ವೆಸ್ಟ್ ಇಂಡೀಸ್ ತಂಡಕ್ಕೆ ಟೀಂ ಇಂಡಿಯಾ ಪ್ರಕಟ : ಶಿಖರ್ ಧವನ್ ನಾಯಕ – ಕೊಹ್ಲಿ, ರೋಹಿತ್ ಗೆ ವಿಶ್ರಾಂತಿ
- ಕೇಂದ್ರ ಸಚಿವ ಸ್ಥಾನಕ್ಕೆ ಮುಖ್ತಾರ್ ಅಬ್ಬಾಸ್ ನಖ್ವಿ, ಆರ್ಸಿಪಿ ಸಿಂಗ್ ರಾಜೀನಾಮೆ
More Stories
ಈ ವರ್ಷಾಂತ್ಯಕ್ಕೆ ಬೈಯಪ್ಪನಹಳ್ಳಿ- ವೈಟ್ಫೀಲ್ಡ್ ಮೆಟ್ರೋ ಸೇವೆ ಆರಂಭ
ಬೆಂಗಳೂರು ನಗರ ಮಾಜಿ DC ಮಂಜುನಾಥ್ ಫ್ಲ್ಯಾಟ್ ಮೇಲೆ ACB ದಾಳಿ: 30 ಎಕರೆ ಜಮೀನು ದಾಖಲೆ ಪತ್ತೆ
ಗುರುವನ್ನೇ ಹತ್ಯೆ ಮಾಡಿದ ಇಬ್ಬರು ಪಾಪಿಗಳನ್ನು ಪೋಲಿಸರು ಬಂಧಿಸಿದ್ದೇ ರೋಚಕ ಕಥೆ