December 24, 2024

Newsnap Kannada

The World at your finger tips!

raj kaluve

ಬೆಂಗಳೂರಲ್ಲಿ ಮಳೆ ಅವಾಂತರ : 24 ವರ್ಷದ ಶಿವಮೊಗ್ಗದ ಯುವಕ ರಾಜಕಾಲುವೆ ಪಾಲು

Spread the love

ಬೆಂಗಳೂರಿನಲ್ಲಿ ನಿನ್ನೆ ರಾತ್ರಿ ಸುರಿದ ಭಾರೀ ಮಳೆಗೆ ಯುವಕನೊಬ್ಬ ರಾಜಕಾಲುವೆಯಲ್ಲಿ ಕೊಚ್ಚಿಹೋಗಿದ್ದಾನೆ. ಈ ಘಟನೆ ಕೆ.ಆರ್.ಪುರದ ಗಾಯತ್ರಿ ಬಡಾವಣೆಯಲ್ಲಿ ನಡೆದಿದೆ. ಶಿವಮೊಗ್ಗ ಮೂಲದ ಮಿಥುನ್ ಸಾಗರ್ (24) ಕೊಚ್ಚಿ ಹೋಗಿರುವ ಯುವಕ.

ನಿನ್ನೆ ರಾತ್ರಿ 7 ಗಂಟೆಯಿಂದ ಸುರಿದ ಮಳೆಯಿಂದಾಗಿ ರಾಜಕಾಲುವೆ ತುಂಬಿ ಹರಿಯುತ್ತಿತ್ತು. ರಾತ್ರಿ 12 ಗಂಟೆ ಸುಮಾರಿಗೆ ಮಿಥುನ್ ವಾಸವಿದ್ದ ಮನೆಯ ಸುತ್ತ ಸಂಪೂರ್ಣವಾಗಿ ನೀರು ಅವರಿಸಿಕೊಂಡಿತ್ತು. ಅದಾದ ಕೆಲವು ಹೊತ್ತುಗಳಲ್ಲಿ ಆ ಕಟ್ಟಡದ ಬಳಿಯಿದ್ದ ಕಾಂಪೌಂಡ್ ಬಿದ್ದಿದೆ. ಏಕಾಏಕಿ ನೀರು ನುಗ್ಗುತ್ತಿದ್ದಂತೆಯೇ ಯುವಕ ಮಿಥುನ್ ಬೈಕ್ ಕೊಚ್ಚಿಕೊಂಡು ಹೋಗಲು ಶುರುವಾಗಿದೆ. ಆಗ ಯುವಕ ಬೈಕ್ ಹಿಡಿದಿಟ್ಟುಕೊಳ್ಳಲು ಮುಂದಾಗಿದ್ದಾನೆ. ಇದೇ ವೇಳೆ ನೀರಿನ ರಭಸಕ್ಕೆ ಮಿಥುನ್ ಕೊಚ್ಚಿಹೋಗಿದ್ದಾನೆ.

ಇದನ್ನು ಓದಿ – ಸೇನೆಗೆ ಪುಂಡರ ಅಗತ್ಯವಿಲ್ಲ, ರೈಲು ಸುಡುವವರು ಸೇನೆಗೆ ಸೂಕ್ತರಲ್ಲ: ಮಾಜಿ ಜನರಲ್ ವಿಪಿ ಮಲೀಕ್

ಈ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಹಾಗೂ ಕೆಆರ್​ಪುರಂ ಪೊಲೀಸರು ಭೇಟಿ ನೀಡಿ ಶೋಧಕಾರ್ಯ ಮುಂದುವರಿಸಿದ್ದಾರೆ. ಇದೀಗ ಚೀಫ್ ಫೈರ್ ಆಫೀಸರ್ ರವಿಪ್ರಸಾದ್ ನೇತೃತ್ವದಲ್ಲಿ ಮಿಥುನ್​​ಗಾಗಿ ಶೋಧಕಾರ್ಯ ನಡೆಸುತ್ತಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಜೊತೆ ಎಸ್​​​ಡಿಆರ್​ಎಫ್​, ಸ್ಥಳೀಯ ಪೊಲೀಸರು ಹಾಗೂ ಸ್ಥಳೀಯರು ಸಾಥ್ ನೀಡುತ್ತಿದ್ದಾರೆ. ಯುವಕ ರಾಜಕಾಲುವೆಗೆ ಬಿದ್ದ ಸ್ಥಳದಿಂದ ಸುಮಾರು ಎರಡು ಕಿ ಮಿ ತನಕ ಹುಡುಕಾಟ ನಡೆಸಲಾಗಿದೆ ಎಲ್ಲಿಯೂ ಪತ್ತೆಯಾಗಿಲ್ಲ.

Copyright © All rights reserved Newsnap | Newsever by AF themes.
error: Content is protected !!