ಡ್ರಗ್ಸ್ ಪ್ರಕರಣದ ಆರೋಪದ ಮೇಲೆ ಕೇಂದ್ರ ಕಾರಾಗೃಹದಲ್ಲಿರುವ ನಟಿ ರಾಗಿಣಿ, ನಿನ್ನೆ ರಾತ್ರಿ ತಮ್ಮ ಬೆನ್ನು ನೋವಿನ ಸಂಬಂಧ ಜೈಲಿನ ಅಧಿಕಾರಿಗಳ ನಿದ್ದೆಗೆಡಿಸಿದ್ದಾರೆ.
ಹಲವು ತಿಂಗಳಿನಿಂದ ರಾಗಿಣಿ ಬೆನ್ನು ನೋವಿನಿಂದ ನರಳುತ್ತಿದ್ದಾರೆ ಎಂದು ಈ ಮೊದಲೇ ಹೇಳಲಾಗಿತ್ತು. ನಿನ್ನೆ ತಡರಾತ್ರಿ ಅವರಿಗೆ ವಿಪರೀತ ಬೆನ್ನು ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ತಮಗೆ ತುರ್ತು ಚಿಕಿತ್ಸೆಯ ಅಗತ್ಯವಿದೆ ಎಂದು ಜೈಲಿನ ಅಧಿಕಾರಿಗಳ ಗೋಳು ಹೊಯ್ದುಕೊಂಡಿದ್ದಾರೆ. ಅವರ ನರಳಾಟ ನೋಡಲಾರದೇ ಅಧಿಕಾರಿಗಳು ಕಾರಾಗೃಹದ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ.
ಹಲವು ದಿನಗಳಿಂದಲೂ ಅಧಿಕಾರಿಗಳಿಗೆ ‘ನನಗೆ ಬೆನ್ನು ನೋವಿದೆ. ಯಾವುದಾದರೂ ಖಾಸಗೀ ಆಸ್ಪತ್ರೆಗೆ ನನ್ನನ್ನು ದಾಖಲು ಮಾಡಿ. ನನಗೆ ಜೈಲಿನಲ್ಲಿರಲು ಸಹ್ಯವಾಗುತ್ತಿಲ್ಲ’ ಎಂದು ಅವರು ಹೇಳುತ್ತಲೇ ಬಂದಿದ್ದರಂತೆ.
ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಈ ‘ನಶೆ’ ನಟಿ, ಈಗ ಒಂದು ತಿಂಗಳಿನಿಂದ ಜೈಲಿನಲ್ಲೇ ಇದ್ದಾರೆ. ರಾಗಿಣಿಯವರ ಬೆನ್ನು ನೋವನ್ನು ನೆಪವಾಗಿಟ್ಟುಕೊಂಡ ರಾಗಿಣಿ ಪರ ವಕೀಲರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ‘ತಮ್ಮ ಬೆನ್ನು ನೋವಿಗೆ ಜೈಲಿನ ಆಸ್ಪತ್ರೆಯ ಚಿಕಿತ್ಸೆ ಸಾಲುತ್ತಿಲ್ಲ. ಯಾವುದಾದರೂ ಖಾಸಗೀ ಆಸ್ಪತ್ರಗೆ ಸೇರಿಸಲು ಅನುಮತಿ ನೀಡುವಂತೆ ಕೋರಿ ನ್ಯಾಯಾಲಯಕ್ಕೆ ನೀಡಿದ ಅರ್ಜಿಯಲ್ಲಿ ಕೋರಿದ್ದಾರಂತೆ ರಾಗಿಣಿ.
More Stories
ಮಕ್ಕಳನ್ನು ಕೊಂದು ಆತ್ಮಹತ್ಯೆಗೆ ಶರಣಾದ ದಂಪತಿ
2024-25ನೇ ಅತಿಥಿ ಉಪನ್ಯಾಸಕರ ನೇಮಕಾತಿಗೆ ಅರ್ಜಿ ಆಹ್ವಾನ
10ನೇ ತರಗತಿ ಪಾಸಾದವರಿಗೆ ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಅವಕಾಶ