ಭಾರತಕ್ಕೆ ರಫೇಲ್ ವಿಮಾನ- ಎರಡನೇ ಬ್ಯಾಚ್ ಆಗಮನ

Team Newsnap
1 Min Read
Image source : google / Picture By: wikipedia

ನವೆಂಬರ್‌ನಲ್ಲಿ‌ ರಫೇಲ್ ಯುದ್ಧ ವಿಮಾನಗಳ ಮತ್ತೊಂದು ಬ್ಯಾಚ್ ಬರಲಿದೆ. ರಫೇಲ್ ವಿಮಾನಗಳನ್ನು ಭಾರತಕ್ಕೆ ಹಸ್ತಾಂತರಿಸಲು ಫ್ರಾನ್ಸ್‌ನ ಡಸಾಲ್ಟ್ ಏವಿಯೇಷನ್ ಸಂಸ್ಥೆ ಎಲ್ಲ ತಯಾರಿಯನ್ನೂ ಮಾಡಿಕೊಂಡಿದೆ.

ಎರಡನೇ ಬ್ಯಾಚ್ ವಿಮಾನಗಳ ಸ್ವೀಕಾರ ಸಿದ್ಧತೆಗೆ ಪ್ರಾಜೆಕ್ಟ್​‌ನ ಅಸಿಸ್ಟೆಂಟ್ ಚೀಫ್ ಆಫ್ ಏರ್ ಸ್ಟಾಫ್ ನೇತೃತ್ವದ ಪರಿಣತರ ತಂಡ ಫ್ರಾನ್ಸ್​ಗೆ ತೆರಳಿದೆ ಎಂದು ಮೂಲಗಳು ಹೇಳಿವೆ.

ಭಾರತಕ್ಕೆ ಡಸಾಲ್ಟ್ ಏವಿಯೇಷನ್ ರಫೇಲ್ ವಿಮಾನಗಳ ಮೊದಲ ಬ್ಯಾಚನ್ನು ಜುಲೈ 29 ರಂದು ಕಳುಹಿಸಿ ಕೊಟ್ಟಿತ್ತು. ಆ ವಿಮಾನಗಳನ್ನು ಅಂಬಾಲ ವಾಯುನೆಲೆಗೆ ಸೆಪ್ಟೆಂಬರ್ 10ರಂದು ಸೇರ್ಪಡೆ ಮಾಡಲಾಗಿತ್ತು.

ಈಗಾಗಲೇ ವಾಯುಪಡೆಯ ಪೈಲಟ್‌ಗಳಿಗೆ ರಫೇಲ್ ವಿಮಾನಗಳ ಕುರಿತು ಫ್ರಾನ್ಸ್​ನ ಸೇಂಟ್ ಡಿಝಿಯೆರ್ ವಾಯುನೆಲೆಯಲ್ಲಿ ತರಬೇತಿ ಒದಗಿಸಲಾಗುತ್ತಿದೆ. ಒಟ್ಟು 36 ರಫೇಲ್‌ ಯುದ್ಧ ವಿಮಾನಗಳನ್ನು ಭಾರತವು ಆಮದು ಮಾಡಿಕೊಳ್ಳುತ್ತಿದೆ. ಇದಕ್ಕೆ 59,000 ಕೋಟಿ ವೆಚ್ಛವಾಗಿದೆ. ಮೊದಲ ಬ್ಯಾಚ್‌ನಲ್ಲಿ ಡಸಾಲ್ಟ್ ಏವಿಯೇಷನ್ ಸಂಸ್ಥೆ 5 ವಿಮಾನಗಳನ್ನು ಕಳುಹಿಸಿಕೊಟ್ಟಿತ್ತು.

Share This Article
Leave a comment