January 28, 2026

Newsnap Kannada

The World at your finger tips!

rachithram 111

ಚೆಲುವನಾರಾಯಣಸ್ವಾಮಿ ದರ್ಶನ ಮಾಡಿದ ನಟಿ ‌ರಚಿತಾ ರಾಮ್‌

Spread the love

ನಟಿ , ಡಿಂಪಲ್ ಕ್ವಿನ್ ರಚಿತಾರಾಮ್ ಮೇಲುಕೋಟೆಗೆ ಭೇಟಿ ನೀಡಿ ಮನೆ ದೇವರಾದ ಶ್ರೀ ಚೆಲುವನಾರಾಯಣಸ್ವಾಮಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.‌

ಹಣೆಗೆ ಮೂರುನಾಮ ಧರಿಸಿ ಸ್ವಾಮಿಯ ದರ್ಶನಕ್ಕೆ ಆಗಮಿಸಿದ ನಟಿ ಭಗವದ್ರಾವಾನುಜಾಚಾರ್ಯರೇ ಭಿಕ್ಷೆ ಸ್ವೀಕರಿಸುತ್ತಿದ್ದ ಗುರು ಪರಂಪರೆಯ ಸ್ಥಾನಾಚಾರ್ಯ ಶ್ರೀನಿವಾಸ ನರಸಿಂಹನ್ ಗುರೂಜಿ ಮಾರ್ಗದರ್ಶನಲ್ಲಿ ದೇವರ ದರ್ಶನ ಮಾಡಿದ್ದಾರೆ.

ಮೇಲುಕೋಟೆಗೆ ಪ್ರತಿ ವರ್ಷವೂ ಆಗಮಿಸಿ ಚೆಲುವ ನಾರಾಯಣಸ್ವಾಮಿಯ ದರ್ಶನ ಪಡೆಯುವ ರಚಿತಾರಾಮ್ ಈ ವರ್ಷವೂ ಸ್ವಾಮಿಯ ದರ್ಶನ ಪಡೆದು ಸತ್ಸಂಪ್ರದಾಯವನ್ನು ಪಾಲಿಸಿದರು.

ಹಣೆಗೆ ನಾಮಧರಿಸಿದ ಪೋಟೋವನ್ನು ಫೇಸ್ ಬುಕ್ ಪೇಜ್ ಮೂಲಕ ಷೇರ್ ಮಾಡಿದ ನಟಿ, ನಾಮಧರಿಸುವ ಮಹತ್ವವನ್ನು ಅಭಿಮಾನಿಗಳಿಗೆ ಮನವರಿಕೆ ಮಾಡಿದ್ದಾರೆ

ಚೆಲುವನಾರಾಯಣಸ್ವಾಮಿಯ ಸನ್ನಿಧಿಯಲ್ಲಿ ಭಕ್ತರಿಗೂ ಅನುಕೂಲವಾಗುವಂತೆ ಯಾವುದಾದರೂ ಶಾಶ್ವತ ಕೈಂಕರ್ಯ ಮಾಡುವಂತೆ ಶ್ರೀನಿವಾಸನರಸಿಂಹನ್ ಗುರೂಜಿ ರಚಿತಾಗೆ ಸಲಹೆ ನೀಡಿದ್ದಾರೆ.

error: Content is protected !!