KGF ಸಿನಿಮಾ ಖ್ಯಾತಿಯ ತಾತ ಕೃಷ್ಣ ಜಿ .ರಾವ್ ಇನ್ನಿಲ್ಲ

Team Newsnap
1 Min Read

ಕೆಜಿಎಫ್ ಸಿನಿಮಾದಲ್ಲಿ ಕುರುಡ ಮುದುಕನ ಪಾತ್ರ ನಿರ್ವಹಿಸಿದ ಹಿರಿಯ ನಟ ಕೃಷ್ಣ ಜಿ ರಾವ್ ನಿಧನರಾದರು, ಡಿಸೆಂಬರ್ 1 ಗುರುವಾರ ಆಸ್ಪತ್ರೆಗೆ ದಾಖಲಾಗಿದ್ದ ತಾತ ಕೃಷ್ಣ ಜಿ .ರಾವ್ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಅನಾರೋಗ್ಯದಿಂದ ಬಳಲುತ್ತಿದ್ದ ಇವರನ್ನು ಸೀತಾ ಸರ್ಕಲ್ ಬಳಿಯ ವಿನಾಯಕ ಆಸ್ಪತ್ರೆಯಲ್ಲಿ ತೀವ್ರ ನಿಘಾಘಟಕದಲ್ಲಿ ಇರಿಸಲಾಗಿತ್ತು. ಕೆಜಿಎಫ್ ತಾತ ಎಂದೇ ಫೇಮಸ್ ಆಗಿದ್ದ ಹಿರಿಯ ನಟ ಕೃಷ್ಣ ಜಿ ರಾವ್ ಈ ಹಿಂದೆ ಅಷ್ಟೇ ಕೆಮಿಸ್ಟ್ರೀ ಆಫ್ ಕರಿಯಪ್ಪ ಸಿನಿಮಾದ ಸಾರಥಿ ಕುಮಾರ್ ನಿರ್ದೇಶನದ ಹೊಸ ಸಿನಿಮಾ ʼನ್ಯಾನೋ ನಾರಾಯಣಪ್ಪʼ ಚಿತ್ರದಲ್ಲಿ ಮುಖ್ಯಭೂಮಿಕೆಯಲ್ಲಿ ನಟಿಸಿದ್ದರು.

ಹತ್ತು ತಲೆಯುಳ್ಳ ರಾವಣನ ಅವತಾರದಲ್ಲಿ ರಿಲೀಸ್ ಆಗಿರುವ ಫಸ್ಟ್ ಲುಕ್ ನಲ್ಲಿ ಕೃಷ್ಣ ಜಿ ರಾವ್ ಕಿರೀಟ, ಗ್ಲಾಸ್ ಹಾಕಿ ಫೋಸ್ ಕೊಟ್ಟಿದ್ದು, ನ್ಯಾನೋ ಕಾರು ಕೂಡ ಹೈಲೈಟ್ ಆಗಿತ್ತು.

ಕೆಜಿಎಫ್ ನಂತರ ಕೃಷ್ಣ ಜಿ ರಾವ್ ಅವರಿಗೆ ಹಲವಾರು ಅವಕಾಶಗಳು ಒದಗಿ ಬಂದವು. ಇದೀಗ ಈ ಚಿತ್ರದ ಜತೆ, ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್ ಚಿತ್ರದಲ್ಲಿಯೂ ಅವಕಾಶ ಸಿಕ್ಕಿತ್ತು. ಕೆಜಿಎಫ್ 2 ಬಿಡುಗಡೆಯ ನಂತರ 15 ಚಿತ್ರದಲ್ಲಿ ನಟಿಸಿದ್ದಾರೆ.

Share This Article
Leave a comment