May 26, 2022

Newsnap Kannada

The World at your finger tips!

WhatsApp Image 2022 03 10 at 11.27.51 AM

Punjab Elections : ಎಪಿಪಿ ಅಧಿಕಾರಕ್ಕೆ – 3ನೇ ಸ್ಥಾನಕ್ಕೆ ಕುಸಿದ ಸಿಧು

Spread the love

ಪಂಜಾಬ್‍ನಲ್ಲಿ(Punjab ) ಎಪಿಪಿ ಅಧಿಕಾರಕ್ಕೆ ಬರುವುದು ಹಾಗೂ ಕಾಂಗ್ರೆಸ್ ಸೋಲುವುದು ಕೂಡ ಬಹುತೇಕ ಖಚಿತವಾಗಿದೆ ಈ ಮಧ್ಯೆ ಅಮೃತಸರ ಪೂರ್ವ ಕ್ಷೇತ್ರದಿಂದ ಸ್ಪರ್ಧಿಸಿದ್ದ ನವಜೋತ್ ಸಿಂಗ್ ಸಿದ್ದು ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ.

ಆಪ್‍ನಿಂದ ಸ್ಪಧಿ೯ಸಿದ್ದ ಜೀವನ್ ಜ್ಯೋತ್ ಕೌರ್ ಮುನ್ನಡೆಯಲ್ಲಿದ್ದರೆ, ಶಿರೋಮಣಿ ಅಕಾಲಿ ದಳದ ಬಿಕ್ರಾಂ ಸಿಂಗ್ ಎರಡನೇ ಸ್ಥಾನ ಪಡೆದಿದ್ದಾರೆ.

ಬೆಳಗ್ಗೆ 11 . 30 ರ ವೇಳೆಯ ಟ್ರೆಂಡ್ ಪ್ರಕಾರ ಈಗಾಗಲೇ ಪಂಜಾಬ್​​ನಲ್ಲಿ ಎಎಪಿ ಪಾರ್ಟಿ ಮ್ಯಾಜಿಕ್​ ನಂಬರ್​​​ಅನ್ನು ದಾಟ್ಟಿದ್ದು, 59ಕ್ಕೂ ಹೆಚ್ಚು ಸ್ಥಳಗಳಲ್ಲಿ ಮುನ್ನಡೆಯನ್ನು ಸಾಧಿಸಿದೆ. ಅಲ್ಲದೇ ಒಟ್ಟಾರೆ 63 ಸ್ಥಾನಗಳಲ್ಲಿ ಪಕ್ಷದ ಅಭ್ಯರ್ಥಿಗಳು ಮುನ್ನಡೆಯಲ್ಲಿದ್ದು, ಕಾಂಗ್ರೆಸ್ 25, ಎಸ್​​ಎಡಿ 11, ಬಿಜೆಪಿ+ 2 ಸ್ಥಾನಗಳಲ್ಲಿ ಮುನ್ನಡೆಯನ್ನು ಪಡೆದುಕೊಂಡಿದೆ.

ಒಟ್ಟು 117 ಸ್ಥಾನಗಳ ಪೈಕಿ ಬಹುಮತಕ್ಕೆ 59 ಅಗತ್ಯವಿದೆ. 2017ರ ಫಲಿತಾಂಶದಲ್ಲಿ ಕಾಂಗ್ರೆಸ್ 77, ಆಪ್ 20, ಎಸ್‍ಎಡಿ+ ಬಿಜೆಪಿ 18, ಇತರರು 02 ಸ್ಥಾನವನ್ನು ಗೆದ್ದಿದ್ದರು.

error: Content is protected !!