ಎಂಥ ಸೌಂದರ್ಯ ಕಂಡೆ.. ಓಹೋ ಎಂಥ ಸೌಂದರ್ಯ ಕಂಡೆ… ಎಂದು
ಸ್ಯಾಂಡಲ್‍ವುಡ್ ನಟ ಪುನೀತ್ ರಾಜ್‍ಕುಮಾರ್ ಅವರು ತಮ್ಮ ಮಡದಿಗೆ ಮನೆಯಲ್ಲಿ ಪ್ರೀತಿಯಿಂದ ಹಾಡುತ್ತಿದ್ದ ಹಾಡಿನ ತುಣುಕಿನ ವೀಡಿಯೋ ವೈರಲ್ ಆಗಿದೆ.
ಸಂದರ್ಶನ ಕಾರ್ಯಕ್ರಮದಲ್ಲಿ ಪುನೀತ್ ರಾಜ್‍ಕುಮಾರ್ ಭಾಗವಹಿಸಿದ್ದರು. ಈ ವೇಳೆ ಅವರಿಗೆ ಮಡದಿ ಕುರಿತಾಗಿ ಕೆಲವು ಪ್ರಶ್ನೆಗಳನ್ನು ಕೇಳಲಾಗಿತ್ತು.
ಅಪ್ಪು ಮಡದಿ ಅಶ್ವಿನಿ ಕುರಿತಾಗಿ ಇರುವ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.
ಸಿನಿಮಾಗಳಿಗೆ ಹಾಡಿದ್ದನ್ನು ಕೇಳಿದ್ದೇವೆ ಆದರೆ ಮನೆಯಲ್ಲಿ ನಿಮ್ಮ ಪತ್ನಿಗಾಗಿ ಯಾವತ್ತಾದರೂ ಹಾಡಿದ್ದೀರ ಎಂದು ಪ್ರಶ್ನೆ ಕೇಳಲಾಗಿತ್ತು.
ಆಗ ಅಪ್ಪು ನಗುತ್ತಾ ನಾನು ಮನೆಯಲ್ಲಿ ಪತ್ನಿಗಾಗಿ ಆಗಾಗ ತಮಾಷೆಗಾಗಿ ಹಾಡುತ್ತಿರುತ್ತೇನೆ. ಎಂಥ ಸೌಂದರ್ಯ ಕಂಡೆ.. ಓಹೋ ಎಂಥ ಸೌಂದರ್ಯ ಕಂಡೆ… ಎಂದು ಹಾಡುತ್ತೇನೆ ಈ ಹಾಡು ನನಗೆ ತುಂಬಾ ಇಷ್ಟ ಎಂದು ಹೇಳಿದ್ದಾರೆ.
ಈ ಸಂದರ್ಭದಲ್ಲಿ ಭಾರೀ ಖುಷಿ ಮರ್ರೆ ನನ್ನ ಹೆಂಡ್ತಿ ಕಂಡ್ರೆ ಒಂದು ಚೂರು ಬೈಯೋದಿಲ್ಲ ರಾತ್ರಿ ಕುಡ್ಕೊಂಡು ಹೋದ್ರೆ.. ಎಂದು 2 ಸಾಲು ಹಾಡನ್ನು ಹೇಳಿದ್ದಾರೆ.
ಈ ಹಾಡನ್ನು ತಮ್ಮ ಹೆಂಡತಿಯನ್ನು ಪ್ರೀತಿಸುವವರಿಗಾಗಿ ಬರೆದಿದ್ದಾಗಿದೆ. ನಿಮ್ಮ ಮಧ್ಯೆ ಚಿಕ್ಕ, ಪುಟ್ಟ ಗಲಾಟೆ ಆದರೆ ಈ ಹಾಡನ್ನು ಹೇಳಿ ಸರಿ ಹೋಗುತ್ತದೆ ಎಂದು ಅಪ್ಪು ಸಲಹೆ ಕೂಡ ನೀಡಿದ್ದಾರೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು