December 26, 2024

Newsnap Kannada

The World at your finger tips!

ashwini punith1

‘ಅಪ್ಪು’ಗೆ ಮರಣೋತ್ತರ ಡಾಕ್ಟರೇಟ್ ಗೌರವ -ಪುನೀತ್​​ ನೆನೆದು ಕಣ್ಣೀರಿಟ್ಟ ಅಶ್ವಿನಿ

Spread the love

ಕನ್ನಡದ ರಾಜರತ್ನ ಪುನೀತ್ ರಾಜ್​ಕುಮಾರ್​ ಅವರಿಗೆ ನೀಡಲಾಗಿದ್ದ ಮೈಸೂರು ವಿಶ್ವವಿದ್ಯಾಲಯ ಮರಣೋತ್ತರ ಗೌರವ ಡಾಕ್ಟರೇಟ್ ಪದವಿಯನ್ನು ಅಶ್ವಿನಿ ಪುನೀತ್​ರಾಜ್​​ಕುಮಾರ್ ಅವರಿಗೆ ಪ್ರದಾನ ಮಾಡಲಾಯಿತು. ಈ ವೇಳೆ ಪುನೀತ್ ಅವರನ್ನು ನೆನೆದು ಅಶ್ವಿನಿ ಕಣ್ಣೀರಿಟ್ಟರು.

ashwini punith

ಮೈಸೂರು ವಿಶ್ವವಿದ್ಯಾಲಯದಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ಗೌರವ ಡಾಕ್ಟರೇಟ್ ಅನ್ನು ಕ್ರಾಫರ್ಡ್ ಹಾಲ್​​​ನಲ್ಲಿ ನಡೆದ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಪ್ರದಾನ ಮಾಡುವ ವೇಳೆ ನಟ ರಾಘವೇಂದ್ರ ರಾಜ್​ಕುಮಾರ್, ಪತ್ನಿ ಮಂಗಳ, ನಟ ವಿನಯ್ ರಾಜ್​​ಕುಮಾರ್, ಡಾ.ರಾಜ್​​ ಕುಮಾರ್ ಪುತ್ರಿ ಲಕ್ಷ್ಮಿ ಗೋವಿಂದು ಹಾಗೂ ಮೊಮ್ಮಕ್ಕಳು ಸೇರಿದಂತೆ ಅಶ್ವಿನಿ ಪುನೀತ್ ರಾಜ್​​ಕುಮಾರ್ ಅವರು ಭಾಗಿಯಾಗಿದ್ದರು.

ವರನಟ ರಾಜ್ ಕುಮಾರ್ ಅವರಿಗೆ ಡಾಕ್ಟರೇಟ್ ನೀಡಿ ಗೌರವಿಸಿದ್ದ ಮೈಸೂರು ವಿಶ್ವವಿದ್ಯಾಲಯವೇ ಈಗ ಪುನೀತ್ ಅವರಿಗೂ​ ಡಾಕ್ಟರೇಟ್ ಕೊಟ್ಟಿರೋದು ತುಂಬಾ ವಿಶೇಷವೆನಿಸಿದೆ. 1976ರಲ್ಲಿ ಅಣ್ಣಾವ್ರಿಗೆ ಡಾಕ್ಟರೇಟ್ ಸಿಕ್ತು. ಜಗತ್ತಿನಲ್ಲೇ ಮೊಟ್ಟ ಮೊದಲ ಬಾರಿಗೆ ಸಿನಿಮಾ ನಟನೊಬ್ಬ ಡಾಕ್ಟರೇಟ್​ ಪಡೆದ ಖ್ಯಾತಿ ರಾಜ್ ಕುಮಾರ್ ಅವರಿಗೆ ಸಲ್ಲುತ್ತದೆ. ಈಗ ಪುನೀತ್ ಅವರಿಗೆ ಮೈಸೂರು ವಿ ವಿ ಮರಣೋತ್ತರ ಡಾಕ್ಟರೇಟ್ ನೀಡಿ ಗೌರವಿಸಿದೆ.

Copyright © All rights reserved Newsnap | Newsever by AF themes.
error: Content is protected !!