ಪುನೀತ್ ರಾಜ್‍ಕುಮಾರ್ ಅವರ ಅಪ್ಪಟ್ಟ ಅಭಿಮಾನಿಯೋರ್ವ ತನ್ನ ವಿವಾಹದ ದಿನಂದಂದು ರಾಜರತ್ನನಿಗೆ ವಿಭಿನ್ನವಾಗಿ ನಮನ ಸಲ್ಲಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ರಾಯಬಾಗ ಪಟ್ಟಣದ ನಿವಾಸಿಯಾಗಿರುವ ಆನಂದ ಪಟ್ಟಣ ಹಾಗೂ
ಜ್ಯೋತಿ ಎನ್ನುವ ಯುವ ಜೋಡಿ ಪುನೀತ್ ಅವರ ನೆನಪಿನಲ್ಲಿ ವಿಶೇಷವಾಗಿ ವಿವಾಹವಾಗಿದ್ದಾರೆ.
ರಾಯಬಾಗ ಪಟ್ಟಣದಲ್ಲಿ ಅದ್ದೂರಿಯಾಗಿ ನಡೆದ ವಿವಾಹ ಸಮಾರಂಭ ಸಂಪೂರ್ಣವಾಗಿ ಪುನೀತ್ ಮಯವಾಗಿತ್ತು.
ಮದುವೆ ಸಮಾರಂಭ ನಡೆಯುವ ಕಲ್ಯಾಣ ಮಂಟಪ ಪುನೀತ್ ಭಾವಚಿತ್ರಗಳಿಂದ ರಾರಾಜಿಸುತ್ತಿತ್ತು. ಮದುವೆ ಸಮಾರಂಭದ ವೇದಿಕೆಯಲ್ಲೂ ಪುನೀತ್ ಭಾವಚಿತ್ರವನ್ನ ಹೂವಿನ ಅಲಂಕಾರದಿಂದ ಶೃಂಗಾರ ಮಾಡಲಾಗಿತ್ತು. ವಿಶೇಷವೆಂದರೆ ಈ ಯುವ ಜೋಡಿಗಳು ಅರುಂಧತಿ ನಕ್ಷತ್ರ ನೋಡುವ ಬದಲು ಪುನೀತ್ ಭಾವಚಿತ್ರವನ್ನ ನೋಡಿ ನವಜೀವನಕ್ಕೆ ಕಾಲಿಟ್ಟಿದೆ.
ಬಹುತೇಕ ಮದುವೆ ಸಮಾರಂಭಗಳಲ್ಲಿ ನವ ವಧು-ವರರು ಅರುಂಧತಿ ನಕ್ಷತ್ರ ನೋಡುವುದು ವಾಡಿಕೆ. ಆದರೆ ಈ ಜೋಡಿ ಪುನೀತ್ ಭಾವಚಿತ್ರವನ್ನೇ ಅರುಂಧತಿ ನಕ್ಷತ್ರ ಎಂದು ನೋಡಿ ಆಶೀರ್ವಾದ ಪಡೆದರು. ಪುನೀತ್ ಅಪ್ಪಟ ಅಭಿಮಾನಿಯಾಗಿರುವ ಆನಂದ್‍ಗೆ ಆತನ ಸ್ನೇಹಿತರು ಪುನೀತ್ ಭಾವಚಿತ್ರ ಇರುವ ವಿವಿಧ ಉಡುಗೊರೆಗಳನ್ನು ನೀಡಿ ಸಂತಸಪಟ್ಟರು. ಆನಂದ್ ಪಟ್ಟಣ ಅವರ ಸ್ನೇಹಿತರು ಪುನೀತ್ ಹಾಡುಗಳನ್ನು ಹಾಡಿ ಮದುವೆಗೆ ಮತ್ತಷ್ಟು ಕಳೆ ತಂದರು.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು