January 14, 2026

Newsnap Kannada

The World at your finger tips!

appu marriage eye

ಅಪ್ಪು ಪ್ರೇರಣೆ –ಮದುವೆಗೂ ಮುನ್ನವೇ ನವ ದಂಪತಿ ನೇತ್ರದಾನ

Spread the love

ಅಪ್ಪು ನಿಧನದ ನಂತರ ಸಾವಿರಾರು ಜನರು ನೇತ್ರದಾನಕ್ಕೆ ಹೆಸರು ನೋಂದಾಯಿಸುತ್ತಿದ್ದಾರೆ. ಅದೇ ರೀತಿ ಹುಬ್ಬಳ್ಳಿಯಲ್ಲಿ ಹೊಸ ಜೀವನಕ್ಕೆ ಕಾಲ್ಟಿಟ್ಟ ನೂತನ ದಂಪತಿ ಸಪ್ತಪದಿಗೂ ಮುನ್ನ ನೇತ್ರದಾನ ಮಾಡಿರುವುದು ವಿಶೇಷವಾಗಿದೆ.

ಹುಬ್ಬಳ್ಳಿಯ ಅಂಗಡಿ ಕುಟುಂಬದ ಸುಚಿತ್ ಎಂ ಟೆಕ್ ಪದವೀಧರ. ಅಪ್ಪು ಅವರ ಕಟ್ಟಾ ಅಭಿಮಾನಿ. ಹೀಗಾಗಿ ಅಪ್ಪು ಅವರ ಆದರ್ಶಗಳೇ ಇವರಿಗೆ ಪ್ರೇರಣೆ. ಇತ್ತ ಬಿಇ ಪದವೀಧರೆ ಆಗಿರುವ ರಂಜನಿಯನ್ನು ಮದುವೆಯಾಗುವ ವೇಳೆ ಸುಚಿತ್ ಎಲ್ಲರಿಗೂ ಮಾದರಿಯಾಗುವಂತಹ ಕೆಲಸ ಮಾಡಿದ್ದಾರೆ.

ಅದ್ದೂರಿಯಾಗಿ ಮದುವೆ ಆದರೂ ಸಪ್ತಪದಿಗೂ ಮುನ್ನ ದಂಪತಿ ನೇತ್ರದಾನ ಶಪಥ ಮಾಡಿ ಹೊಸ ಜೀವನಕ್ಕೆ ಕಾಲಿಟ್ಟಿರುವುದು ವಿಶೇಷವಾಗಿದೆ.

error: Content is protected !!