December 24, 2024

Newsnap Kannada

The World at your finger tips!

transfer , DYSP , state

34 DySPs transferred in the state ರಾಜ್ಯದಲ್ಲಿ 34 ಮಂದಿ ಡಿವೈಎಸ್ಪಿ ವರ್ಗಾವಣೆ

7 ದಿನದಲ್ಲಿ3 ಠಾಣೆ ಬದಲಾವಣೆ ಪಿಎಸ್‌ಐಗೆ ವಾರದಲ್ಲಿ 3 ಬಾರಿ ವರ್ಗಾವಣೆ ಭಾಗ್ಯ!

Spread the love

ಚಾಮರಾಜನಗರ ಪೂರ್ವ ಠಾಣೆಯಲ್ಲಿ ಪಿಎಸ್​ಐ ಆಗಿದ್ದ ಡಿ.ಆರ್​.ರವಿಕುಮಾರ್​ ಅವರನ್ನು ಒಂದು ವಾರದಲ್ಲಿ ಮೂರು ಬಾರಿ ವರ್ಗಾವಣೆ ಮಾಡಲಾಗಿದೆ. ಆದರೆ, ವರ್ಗಾವಣೆ ಮಾಡಿದ ಸ್ಥಳಗಳಿಗೆ ಪಿಎಸ್​ಐ ಮಾತ್ರ ರಿಪೋರ್ಟ್​ ಮಾಡಿಕೊಂಡಿಲ್ಲ.

ಚಾಮರಾಜನಗರ ಪೂರ್ವ ಠಾಣೆಯಲ್ಲಿದ್ದ ಪಿಎಸ್‌ಐ ಡಿ.ಆರ್.ರವಿಕುಮಾರ್ ಎಂಬವರನ್ನು ಕಳೆದ 6 ರಂದು ಬೇಗೂರು ಠಾಣೆಗೆ ವರ್ಗಾವಣೆ ಮಾಡಲಾಗಿತ್ತು. ಬಳಿಕ, 7 ರಂದು ವರ್ಗಾವಣೆ ಆದೇಶ ಮಾರ್ಪಡಿಸಿ ಬೇಗೂರು ಠಾಣೆಯಿಂದ ಗುಂಡ್ಲುಪೇಟೆ ಠಾಣೆ ಅಪರಾಧ ವಿಭಾಗದ ಪಿಎಸ್‌ಐ ಆಗಿ ಟ್ರಾನ್ಸ್‌ಫರ್ ಮಾಡಲಾಗಿದೆ.

ಇದನ್ನು ಓದಿ :ಅಶಿಸ್ತು, ಉದ್ಧಟತನ ತೋರಿದ ರಮ್ಮಾ -ಆರ್.ಧ್ರುವನಾರಾಯಣ್

ಇದಾದ ನಂತರ, ಕಳೆದ 11 ರಂದು ಗುಂಡ್ಲುಪೇಟೆ ಠಾಣೆಯಿಂದ ಕೊಡಗು ಜಿಲ್ಲೆಯ ವಿರಾಜಪೇಟೆ ಗ್ರಾಮಾಂತರ ಠಾಣೆಗೆ ವರ್ಗಾವಣೆ ಮಾಡಲಾಗಿದೆ. ವರ್ಗಾವಣೆ ಮಾಡಲಾದ ಸ್ಥಳಗಳಿಗೆ ಪಿಎಸ್‌ಐ ರಿಪೋರ್ಟ್ ಮಾಡಿಕೊಂಡಿರಲಿಲ್ಲ ಎಂದು ತಿಳಿದುಬಂದಿದೆ.

ಸದ್ಯ, ವಾರದಲ್ಲಿ 3 ಬಾರಿ ವರ್ಗಾವಣೆ ಭಾಗ್ಯ ಕಂಡಿದ್ದು ಸಾರ್ವಜನಿಕ ವಲಯದಲ್ಲಿ ಚರ್ಚೆ ಆಗುತ್ತಿದೆ. ಈ ವರ್ಗಾವಣೆಗೆ ನಿರ್ದಿಷ್ಟ ಕಾರಣ ಗೊತ್ತಾಗಿಲ್ಲ.

Copyright © All rights reserved Newsnap | Newsever by AF themes.
error: Content is protected !!