PSI ಅಕ್ರಮ ನೇಮಕಾತಿ ಹಗರಣ : ADGP ಅಮೃತ್ ಪೌಲ್ ಬಂಧನ

Team Newsnap
1 Min Read

PSI ಅಕ್ರಮ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ನೇಮಕಾತಿ ವಿಭಾಗದ ಮುಖ್ಯಸ್ಥರಾಗಿದ್ದ ADGP ಅಮೃತ್ ಪೌಲ್ ಅವರನ್ನು ಸಿಐಡಿ ಬಂಧಿಸಿದೆ.

ಬಂಧಿತ ಈ ಅಧಿಕಾರಿಯನ್ನು ಕೋರ್ಟ್ ಗೆ ಹಾಜರುಪಡಿಸಲಾಗಿದೆ. ಅದಕ್ಕೂ ಮುನ್ನ ಬೌರಿಂಗ್ ಆಸ್ಪತ್ರೆಯಲ್ಲಿ ಪರೀಕ್ಷೆಗೆ ಒಳಪಡಿಸಲಾಗಿದೆ . ಹೆಚ್ಚಿನ ವಿಚಾರಣೆಗಾಗಿ ADGP ಪೌಲ್ ಅವರನ್ನು ಸಿಐಡಿ ವಶಕ್ಕೆ ಪಡೆಯುವ ಸಾದ್ಯತೆ ಇದೆ

25 ಅಭ್ಯರ್ಥಿಗಳ ಜೊತೆ 30 ಲಕ್ಷ ರು ಗಳಂತೆ ಡೀಲ್‌ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಸಿಐಡಿ ಈಗ ಮತ್ತಷ್ಟು ವಿಚಾರಣೆ ನಡೆಸಲು ಬಂಧಿಸಿದೆ. ಇದನ್ನು ಓದಿ – ಕಾಳಿ ಮಾತೆ ಬಾಯಲ್ಲಿ ಸಿಗರೇಟ್​! ಕ್ಷಮೆ ಕೇಳದೆ ನಿರ್ದೇಶಕಿ ಲೀನಾ ಮಣಿಮೇಕಲೈ

545 ಪಿಎಸ್‌ಐ ಹುದ್ದೆಗಳ ನೇಮಕಕ್ಕೆ ಸಂಬಂಧಿಸಿದಂತೆ ಅಮೃತ್ ಪೌಲ್ ಅವರಿಗೆ ದೂರುಗಳು ಬಂದಿದ್ದವು. ಆದರೆ ಪ್ರಕರಣದ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂಬ ಆರೋಪಗಳು ಸಹ ಕೇಳಿಬಂದಿತ್ತು.

DYSP ಶಾಂತಕುಮಾರ್ ಮೂಲಕ ಡೀಲ್ ಗೆ ಮುಂದಾಗಿದ್ದರು ಎಂಬುದು ತನಿಖೆಯಿಂದ ಬೆಳಕಿಗೆ ಬಂದಿದೆ

ಅಕ್ರಮ ಬೆಳಕಿಗೆ ಬರುತ್ತಿದ್ದಂತೆ ಅಮೃತ್ ಪೌಲ್ ಅವರ ವರ್ಗಾವಣೆಗೆ ಪೊಲೀಸ್ ವಲಯದಲ್ಲಿಯೇ ಒತ್ತಡ ಹೆಚ್ಚಾಗಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ವರ್ಗಾಯಿಸಲಾಗಿತ್ತು.

ಕೇಸ್​ ಸಂಬಂಧ ಎಸ್‌ಪಿ ದರ್ಜೆಯ ತನಿಖಾಧಿಕಾರಿ ಎಡಿಜಿಪಿ ಅಮೃತ್‌ ಪೌಲ್‌ ಅವರನ್ನು ಸುದೀರ್ಘ ವಿಚಾರಣೆ ಮಾಡಿದ್ದರು. ಆಗ ಎಡಿಜಿಪಿ ನೀಡಿದ್ದ ಉತ್ತರ ತೃಪ್ತಿಕರವಾಗದ ಪರಿಣಾಮ ಎರಡು ಬಾರಿ ವಿಚಾರಣೆ ಮಾಡಲಾಗಿತ್ತು. ಪ್ರತಿ ಬಾರಿಯೂ ಅಮೃತ್‌ ಪೌಲ್‌ ವೈಯಕ್ತಿಕ ಕಾರಣ ಮುಂದಿಟ್ಟು ವಿಚಾರಣೆಗೆ ಗೈರು ಹಾಜರಾಗಿದ್ದರು. ಈಗ ಕೊನೆಗೂ ಅಮೃತ್​ ಪೌಲ್​ ಬಂಧನವಾಗಿದೆ

Share This Article
Leave a comment