ಸ್ಕೂಟರ್ ದಾಖಲಾತಿ ತಪಾಸಣೆ ವೇಳೆ ಯುವತಿಯ ರಂಪಾಟ ಮಾಡಿದ್ದಕ್ಕಾಗಿ ಮಹಿಳಾ ಪೋಲಿಸ್ ಪಿಎಸ್ ಐ ಕಪಾಳ ಮೋಕ್ಷ ಮಾಡಿದ ಘಟನೆ ಮಂಡ್ಯದ ನೂರಡಿ ರಸ್ತೆಯಲ್ಲಿ ಘಟನೆ.
ನೂರಡಿ ರಸ್ತೆಯ ಬೆಸಗರಹಳ್ಳಿ ರಾಮಣ್ಣ ವೃತ್ತದ್ದಲ್ಲಿ ಯುವತಿಗೆ ಕಪಾಳ ಮೋಕ್ಷ ಮಾಡಿದ ಮಂಡ್ಯದ ಮಹಿಳಾ ಠಾಣೆ ಪಿಎಸ್ ಐ ಸವಿತಾಗೌಡ ಪಾಟೀಲ್ ನೂರಡಿ ರಸ್ತೆಯಲ್ಲಿ ಸಂಚರಿಸೊ ಬೈಕ್ ಸವಾರರ ದಾಖಲಾತಿ ಪರಿಶೀಲನೆ ಮಾಡುತ್ತಿದ್ದಾಗ ಯುವತಿಯ ರಂಪಾಟ ಮಾಡಿದ್ದಾಳೆ.
ಸ್ಕೂಟರ್ ನಲ್ಲಿ ಬಂದ ಯುವತಿಯನ್ನು ತಡೆದು ದಾಖಲಾತಿ ಪರಿಶೀಲನೆ ಮಾಡುತ್ತಿದ್ದರು.
ಈ ವೇಳೆ ನನ್ನ ಸ್ಕೂಟರ್ ಅನ್ನು ಯಾಕೆ ಮುಟ್ಟುತ್ತೀರಾ ಎಂದು ಯುವತಿಯ ಆವಾಜ್ ಹಾಕಿದ್ದಾಳೆ.
ಸ್ಕೂಟರ್ ಮೇಲೆ ಕುಳಿತು ನಾನ್ ಗಾಡಿ ಯಾಕ್ ಕೊಡ್ಲಿ ಎಂದು ಪ್ರಶ್ನೆ ಮಾಡಿದ ಯುವತಿ ಸ್ಕೂಟರ್ ನಿಂದ ಇಳಿಯಮ್ಮ, ನಿನ್ನ ಹೆಸರೇನು ನಿಮ್ಮ ತಂದೆ ಕರೆಸು ಠಾಣೆಗೆ ಬಾ ಎಂದು ಕರೆದ ಮಹಿಳಾ ಪಿಎಸ್ ಐ. ಈ ವೇಳೆ ಮಹಿಳಾ ಪಿಎಸ್ಐ ಕುರಿತು ಹೇ ನನ್ ತಂದೆ ಇಲ್ಲ. ಎಲ್ಲರನ್ನು ಕರೆಸಲಾಗಲ್ಲ ಎಂದ ಯುವತಿ.ಈ ವೇಳೆ ತಾಳ್ಮೆ ಕಳೆದುಕೊಂಡ ಮಹಿಳಾ ಪಿಎಸ್ ಐ ಸವಿತಾ ಗೌಡ ನನ್ನ ಹೇ ಅಂತೀಯಾ. ಏನ್ ಮಾತಾಡ್ತಿಯಾ ಎಂದು ಯುವತಿಗೆ ಕಪಾಳ ಮೋಕ್ಷ ಮಾಡಿದರು.
ಹೇ ಏನೆ ಮಾಡ್ತಿಯಾ ರಾಸ್ಕಲ್ ಎಂದು ಮಹಿಳಾ ಪಿಎಸ್ ಐಗೆ ಅವಾಜ್ ಹಾಕಿದ ಯುವತಿ. ಠಾಣೆಗೆ ಬಾ ನೀನು ಎಂದು ಸ್ಕೂಟರ್ ತೆಗೆಸಿಕೊಂಡು ಹೋದ ಪಿಎಸ್ ಐ.
ಈ ವೇಳೆ ಮಹಿಳಾ ಪಿಎಸ್ ಐ ಕುರಿತು ಅನ್ ಎಜುಕೇಟೆಡ್ ಬ್ರೂಟ್ ಎಂದು ಬೈದ ಯುವತಿ.
ನಾನು ಎಜುಕೇಟೆಡ್ ನೀನೆ ಅನ್ ಎಜುಕೇಟೆಡ್ ಎಂದ ಮಹಿಳಾ ಪಿಎಸ್ ಐ ಮತ್ತೆ ನಾನು ಎಜುಕೇಟೆಡ್ ನೀನೆ ಅನ್ ಎಜುಕೇಟೆಡ್ ರೀತಿ ಬಿಹ್ಯಾವ್ ಮಾಡಿದ್ದು.
ರೂಲ್ಸ್ ಗೊತ್ತಿಲ್ಲ ಪೊಲೀಸ್ ಅಂತೆ ಇವಳು. ವಿಡಿಯೊ ಮಾಡ್ಕೊತ್ತಿದ್ದೀರಾ ತಾನೆ ಮಾಡ್ಕೊಳಿ ಜಾಸ್ತಿ ಮಾತನಾಡಬಾರದು ಎಂದು ಯುವತಿಯಿಂದ ಆವಾಜ್ ಹಾಕಿರುವ ವಿಡಿಯೋ ಈಗ ವೈರಲ್ ಆಗಿದೆ.
- ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ: 6 ಜನರ ಮೃತದೇಹ ಪತ್ತೆ
- ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ: DYSP ವಿರುದ್ಧ ಗಂಭೀರ ಆರೋಪ
- ಐಶ್ವರ್ಯ ಗೌಡ ಪ್ರಕರಣ: ಸರ್ಕಾರದ ವಿರುದ್ಧ ಹೆಚ್ಡಿಕೆ ವಾಗ್ದಾಳಿ
- ಸಾರಿಗೆ ನೌಕರರಿಗೆ ಸರ್ಕಾರದ ಭರವಸೆ: 2 ಸಾವಿರ ಕೋಟಿ PF ನಿಧಿ ಬಿಡುಗಡೆ
- ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆ: ಚುನಾವಣೆಯ ಮೂಲಕ ತೀರ್ಮಾನ
More Stories
ಐಶ್ವರ್ಯಗೌಡ ವಂಚನೆ ಪ್ರಕರಣ: ಶಾಸಕ ನರೇಂದ್ರಸ್ವಾಮಿಯ ಕೈವಾಡ ಶಂಕೆ, ಅನ್ನದಾನಿಯ ಗಂಭೀರ ಆರೋಪ
ಮಂಡ್ಯದಲ್ಲಿ ಭೀಕರ ಅಪಘಾತ: ಕಾರು-ಲಾರಿ ಡಿಕ್ಕಿಯಾಗಿ ಮೂವರು ವಿದ್ಯಾರ್ಥಿ ಸಾವು
ಮಂಡ್ಯ: 87ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅದ್ಧೂರಿ ಚಾಲನೆ