ಪಿಎಸ್ಐ ನೇಮಕಾತಿ ಅಕ್ರಮ: ಸಚಿವ ಅಶ್ವತ್ಥ್ ನಾರಾಯಣರ ತಮ್ಮ ಸತೀಶ್ ಭಾಗಿ – ಉಗ್ರಪ್ಪ

Team Newsnap
1 Min Read

PSI ಪರೀಕ್ಷೆ ಅಕ್ರಮದಲ್ಲಿ ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ ಹಾಗೂ ಅವರ ತಮ್ಮ ಹೆಸರು ಕೇಳಿ ಬಂದಿದೆ.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಮಾಜಿ ಸಂಸದರಾದ ಉಗ್ರಪ್ಪ, ಚಂದ್ರಪ್ಪ, ಮಾಜಿ ಸಚಿವ ಹೆಚ್.ಎಂ.ರೇವಣ್ಣ ಮಾತನಾಡಿದರು.

ಈ ವೇಳೆ ಉಗ್ರಪ್ಪ ಮಾತನಾಡಿ, ರಾಮನಗರ ಉಸ್ತುವಾರಿ ಸಚಿವ ಅಶ್ವಥ್ ನಾರಾಯಣ ಸುತ್ತ ಅನುಮಾನ ಮೂಡಿಸುತ್ತಿದೆ. ಮಾಗಡಿಯಲ್ಲಿ ಮೂರರಿಂದ ಐದು ಜನರಿಗೆ ರ‍್ಯಾಂಕ್ ಬಂದಿದೆ. ಅಶ್ವಥ್ ನಾರಾಯಣ್ ಸಹೋದರ ಸತೀಶ್‍ಗೆ ಅಕ್ರಮದ ಲಿಂಕ್ ಇದೆ ಎಂದು ಆರೋಪಿಸಿದರು.

ಪ್ರಭಾವಿ ಸಚಿವರ ಸಹೋದರನನ್ನು ತನಿಖೆಗೆ ಕರೆದಿದ್ದಾರೆ. ಆಗ ಪ್ರಭಾವಿ ಸಚಿವರು ಕರೆ ಮಾಡಿ ಒತ್ತಡ ಹಾಕಿದ್ದಾರೆ. ರಾಮನಗರದ ಐದು ಮಂದಿ ಆಯ್ಕೆ ಆಗಿದ್ದಾರೆ. ನಾನೊಬ್ಬ ವಕೀಲ ಕೂಡ ಹೌದು. ಈಗ ಈ ಪ್ರಕರಣ ಅಶ್ವಥ್ ನಾರಾಯಣ್ ಕಡೆಯೂ ಬೆರಳು ತೋರಿಸುತ್ತಿದೆ ಎಂದು ಆರೋಪಿಸಿದರು.

ಅಶ್ವಥ್ ನಾರಾಯಣ ಗಂಡಸ್ಥನದ ಬಗ್ಗೆ ಮಾತನಾಡಿದ್ದೀರಿ. ನಿಮಗೆ ತಾಕತ್, ಧಮ್ ಇದ್ದರೆ ನ್ಯಾಯಾಂಗ ತನಿಖೆಗೆ ಒಪ್ಪಿಸಿ. ಹೈಕೋರ್ಟ್ ಸಿಟ್ಟಿಂಗ್ ಜಡ್ಜ್ ನೇತೃತ್ವದಲ್ಲಿ ಒಪ್ಪಿಸಿ. ನೈತಿಕತೆ ಇದ್ದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಎಂದು ಅಶ್ವಥ್ ನಾರಾಯಣ್ ರಾಜೀನಾಮೆಗೆ ಉಗ್ರಪ್ಪ ಆಗ್ರಹಿಸಿದ್ದಾರೆ.

Share This Article
Leave a comment