ಪಿಎಸ್‍ಐ ಅಕ್ರಮ – ಸರ್ಕಾರಿ ನೌಕರರು ಸೇರಿ ಮತ್ತೆ 8 ಅಭ್ಯರ್ಥಿಗಳು ಬಂಧನ

Team Newsnap
2 Min Read
Applications invited for filling up 1.30 lakh constable posts in CRPF ಸಿಆರ್ ಪಿಎಫ್ ನಲ್ಲಿ 1.30 ಲಕ್ಷ ಕಾನ್ಸ್ ಟೇಬಲ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಪಿಎಸ್‍ಐ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಪೊಲೀಸರು ಅಕ್ರಮವಾಗಿ ಪಾಸಾದ 8 ಅಭ್ಯರ್ಥಿಗಳನ್ನು ಬಂಧಿಸಿದ್ದಾರೆ.

ರವಿರಾಜ್, ಪೀರಪ್ಪ, ಶ್ರೀಶೈಲ್, ಭಗವಂತ, ಸಿದ್ದು ಪಾಟೀಲ್, ಸೋಮನಾಥ, ಕಲ್ಲಪ್ಪ, ವಿಜಯಕುಮಾರ್ ಎನ್ನುವವರೇ ಅಕ್ರಮದ ಮೂಲಕ ಪಿಎಸ್‍ಐ ಪರೀಕ್ಷೆಯಲ್ಲಿ ಅಕ್ರಮವಾಗಿ ಪಾಸಾದ ಬಂಧಿತ ಅಭ್ಯರ್ಥಿಗಳು.ಇದನ್ನು ಓದಿ –ಅಂಗವೈಕಲ್ಯತೆ ಮಗಳನ್ನು 4ನೇ ಮಹಡಿಯಿಂದ ಎಸೆದು ಕೊಂದ ತಾಯಿ ದಂತ ವೈದ್ಯೆ ಬಂಧನ

ಬಂಧಿತರಲ್ಲಿ ಹಲವರು ಸರ್ಕಾರಿ ನೌಕರರು:

WhatsApp Image 2022 08 05 at 5.22.36 PM

ಬಂಧಿತರ ಪೈಕಿ ಹಲವರು ಈಗಾಗಲೇ ಸರ್ಕಾರಿ ಹುದ್ದೆಯಲ್ಲಿ ಇದ್ದಾರೆ. ಅದಾಗಿಯೂ ಪಿಎಸ್‍ಐ ಆಗುವ ಹವಣಿಕೆಯಿಂದ ಅಕ್ರಮದ ಹಾದಿ ತುಳಿದಿದ್ದಕ್ಕಾಗಿ ಇದೀಗ ಜೈಲು ಪಾಲಾಗಿದ್ದಾರೆ.

ಬಂಧಿತ ಆರೋಪಿ ಸಿದ್ದು ಪಾಟೀಲ್, ಈಗಾಗಲೇ ಎಫ್‍ಡಿಎ ಆಗಿ ಸರ್ಕಾರಿ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾನೆ. ಇನ್ನೂ ಬಂಧಿತ ಕಲ್ಲಪ್ಪ ಪೊಲೀಸ್ ಪೇದೆಯಾಗಿ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾನೆ. ಪೀರಪ್ಪ ಎನ್ನುವ ಇನ್ನೊಬ್ಬ ಬಂಧಿತ ಆರೋಪಿ ಹಾಸ್ಟೆಲ್‍ನಲ್ಲಿ ಕುಕ್ ಆಗಿ ಕೆಲಸ ಮಾಡುವವನು.ಮಂಡ್ಯದಲ್ಲಿ ಭೀಕರ ಹತ್ಯೆಯ ಆರೋಪಿ ಬಂಧನ :ಪತ್ನಿ ಸಂಬಂಧಿ ಜೊತೆ ಲವ್ವಿ-ಡವ್ವಿ, ವೇಶ್ಯೆ ಪ್ರೀತಿಗೆ ಬಿದ್ದು ಆದ ಸೈಕೋ ಕಿಲ್ಲರ್

ಇವರೆಲ್ಲಾ ಬ್ಲೂಟೂತ್ ಎಲೆಕ್ಟ್ರಾನಿಕ್ ಡಿವೈಸ್ ಬಳಸಿ ಅಕ್ರಮವಾಗಿ ಪಿಎಸ್‍ಐ ಪರೀಕ್ಷೆ ಬರೆದವರು. ಈ 8 ಜನ ಅಭ್ಯರ್ಥಿಗಳು ಕಲ್ಯಾಣ ಕರ್ನಾಟಕ ಕೋಟಾದಲ್ಲಿ ಆಯ್ಕೆಯಾಗಿದ್ದರು. ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ 8 ಅಭ್ಯರ್ಥಿಗಳ ಹೆಸರು ಇತ್ತು.

ಎಸ್.ಬಿ.ಆರ್ ಪರೀಕ್ಷಾ ಕೇಂದ್ರದಲ್ಲೂ ಅಕ್ರಮ:

ಕಲಬುರಗಿ ನಗರದ ಪ್ರತಿಷ್ಠಿತ ಶರಣಬಸವೇಶ್ವರ ವಿದ್ಯಾವರ್ಧಕ ಸಂಸ್ಥೆಯ ಎಸ್‍ಬಿಆರ್ ಪರೀಕ್ಷಾ ಕೇಂದ್ರದಲ್ಲೂ ಅಕ್ರಮ ನಡೆದಿರುವುದು ಈ ಮೂಲಕ ಬಯಲಾಗಿದೆ. ಬಂಧಿತ 8 ಜನರು ಕಲಬುರಗಿಯ ಎಸ್‍ಬಿಆರ್ ಮತ್ತು ಸರ್ಕಾರಿ ಪದವಿ ಕಾಲೇಜಿನಲ್ಲಿ ಪರೀಕ್ಷೆ ಬರೆದವರಾಗಿದ್ದಾರೆ.

ಪಿಎಸ್‍ಐ ಪರೀಕ್ಷೆ ಅಕ್ರಮ ಮಾಡಿ ಸಿಕ್ಕಿ ಬಿದ್ದಿರುವ 8 ಜನ ಅಭ್ಯರ್ಥಿಗಳು ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕು ಮತ್ತು ಅಫಜಲಪೂರ ತಾಲೂಕಿನ ನಿವಾಸಿಗಳಾಗಿದ್ದಾರೆ. ಅಫಜಲಪೂರ ತಾಲೂಕಿನ ಮಲ್ಲಾಬಾದ್ ಗ್ರಾಮದ ರವಿರಾಜ್ ಅಖಂಡೆ, ಶಿದ್ನಾಳ್ ಗ್ರಾಮದ ಬೀರಪ್ಪ, ಜೇವರ್ಗಿ ತಾಲೂಕಿನ ಕೋಣಸಿರಸಗಿ ಗ್ರಾಮದ ಶ್ರೀಶೈಲ್, ಜೇರಟಗಿ ಗ್ರಾಮದ ಭಗವಂತರಾಯ ಯಾತನೂರ್, ಜೇವರ್ಗಿ ತಾಲೂಕಿನ ಬದನಿಹಾಳ ಗ್ರಾಮದ ಸೋಮನಾಥ್, ಅಫ್ಜಲ್ ಪುರ ತಾಲೂಕಿನ ಕರ್ಜಗಿ ರೋಡ್ ರಾಮನಗರದ ಕಲ್ಲಪ್ಪ ಅಲ್ಲಾಪುರ್, ಜೇವರ್ಗಿ ತಾಲೂಕಿನ ಗುಡೂರ್ ಎಸ್ ಗ್ರಾಮದ ವಿಜಯಕುಮಾರ್ ಎನ್ನುವವರೇ ಬಂಧಿತ ಆರೋಪಿಗಳು.

ಬಂಧಿತರ ಸಂಖ್ಯೆ 52 ಕ್ಕೆ ಏರಿಕೆ:

ಪಿಎಸ್‍ಐ ನೇಮಕಾತಿಯ ಅಕ್ರಮ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ, ಬಗೆದಷ್ಟು ಬಯಲಾಗುತ್ತಲೇ ಇದೆ. ಈಗಾಗಲೇ ಈ ಪ್ರಕರಣದಲ್ಲಿ ಸಿಐಡಿ 44 ಜನ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದೆ. ಈಗ ಒಮ್ಮೆಲೆ 8 ಜನ ಅಭ್ಯರ್ಥಿಗಳ ಬಂಧನದ ಮೂಲಕ ಪಿಎಸ್‍ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಇದುವರೆಗೆ ಬಂಧಿತರ ಸಂಖ್ಯೆ 52ಕ್ಕೆ ಏರಿಕೆಯಾದಂತಾಗಿದೆ.

Share This Article
Leave a comment