December 23, 2024

Newsnap Kannada

The World at your finger tips!

police 1

35 ಲಕ್ಷ ರು ಕೊಟ್ಟಿದ್ದ : 5 ಲಕ್ಷ ಸಿಗದೇ ಪೇಚಾಡಿದ – ಆಪ್ತ ಸ್ನೇಹಿತನಿಂದಲೇ ಪಿಎಸ್‌ಐ ಅಕ್ರಮ ಬಯಲು

Spread the love

35 ಲಕ್ಷ ಮುಂಗಡ ಪಾವತಿ ಮಾಡಿ ಉಳಿದ ಹಣಕ್ಕೆ ಬೇಡಿಕೆ ಈಡೇರಿಸದ್ದಕ್ಕೆ ಪ್ರಶ್ನೆ ಪತ್ರಿಕೆಯ ಅಕ್ರಮ ವ್ಯವಹಾರ ಬಯಲಾಗಿದೆ.

ರಾಜ್ಯದಲ್ಲಿ ಸಂಚಲನಕ್ಕೆ ಕಾರಣವಾಗಿರುವ ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌( ಪಿಎಸ್‌ಐ) ಹುದ್ದೆಗಳ ನೇಮಕಾತಿ ಅಕ್ರಮ ಬೆಳಕಿಗೆ ರೋಚಕವಾಗಿದೆ.

ಹೌದು. ಎಸ್‌ಎಸ್‌ಎಲ್‌ಸಿ, ಪಿಯುಸಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಲೀಕ್‌ ಆಗುತ್ತದೆ. ಆದರೆ ಇಲ್ಲಿ ಪ್ರಶ್ನೆ ಪತ್ರಿಕೆ ಅಲ್ಲ. ಒಎಂಆರ್‌ ಶೀಟ್‌ನಲ್ಲೇ ಗೋಲ್ಮಾಲ್‌ ಮಾಡಲಾಗಿದೆ. ಈ ಕೃತ್ಯಕ್ಕೆ ಸಹಕಾರ ನೀಡಿದ ಸ್ನೇಹಿತನಿಂದಲೇ ಈಗ ಈ ಅಕ್ರಮ ಬಯಲಾಗಿದೆ.

2021ರ ಅ. ‌ 3 ರಂದು ರಾಜ್ಯಾದ್ಯಂತ ಪಿಎಸ್‌ಐ ಪರೀಕ್ಷೆ ನಡೆದಿತ್ತು. ಕಲಬುರಗಿ ಜ್ಞಾನಜ್ಯೋತಿ
ಶಾಲೆಯ ಮುಖ್ಯಸ್ಥೆ ದಿವ್ಯಾ ಮತ್ತು ತಂಡ ಹಣ ಬಲ ಹೊಂದಿರುವ ಅಭ್ಯರ್ಥಿಗಳ ಮಾಹಿತಿ ಸಂಗ್ರಹಿಸಿತ್ತು. ಲಕ್ಷಾಂತರ ರು ನೀಡಿದವರ ಪರವಾಗಿ ಪರೀಕ್ಷೆಯಲ್ಲಿ ಅಕ್ರಮ ಮಾಡಲು ಸಹಕಾರ ನೀಡಿತ್ತು.

ಪರೀಕ್ಷೆ ಮುಗಿದ ಬಳಿಕ ಕ್ಯಾಮೆರಾವನ್ನು ಬಂದ್‌ ಮಾಡಿ ಬಳಿಕ ಅಭ್ಯರ್ಥಿಗಳ ಒಎಂಆರ್‌ ಶೀಟ್‌ಗೆ ಸರಿ ಉತ್ತರವನ್ನು ಭರ್ತಿ ಮಾಡಲಾಗಿತ್ತು.

ಬಂಧನಕ್ಕೆ ಒಳಗಾದ ವೀರೇಶ್‌ಗೂ ಜ್ಞಾನ ಜ್ಯೋತಿ ಶಾಲೆಯೇ ಪರೀಕ್ಷೆ ಕೇಂದ್ರವಾಗಿತ್ತು. ವೀರೇಶ್ ಜ್ಞಾನ ಜ್ಯೋತಿ ಕೇಂದ್ರದಲ್ಲಿ ಪರೀಕ್ಷೆ ಬರೆಯುತ್ತಿರುವ ವಿಚಾರ ತಿಳಿದ ಆತನ ಸ್ನೇಹಿತ, ಜ್ಞಾನಜ್ಯೋತಿ ಕೇಂದ್ರವನ್ನೇ ಬಹಳ ಜನ ಇಷ್ಟಪಟ್ಟು ಆಯ್ಕೆ ಮಾಡುತ್ತಾರೆ.

ಈ ವಿಚಾರ ತಿಳಿದ ವೀರೇಶ್ ಕುತೂಹಲದಿಂದ ಜ್ಞಾನ ಜ್ಯೋತಿ ಕೇಂದ್ರದ ಬಗ್ಗೆ ವಿಚಾರಿಸಿದ್ದ. ಆಗ ಪಿಎಸ್ಐ ಪರೀಕ್ಷೆಯಲ್ಲಿ ಹಣ ನೀಡಿದರೆ ಸರ್ಕಾರಿ ನೌಕರಿ ಸಿಗುತ್ತೆ ಎಂದು ಸ್ನೇಹಿತ ವೀರೇಶನನ್ನು ಸ್ನೇಹಿತ ನಂಬಿಸಿದ್ದ. ಸ್ನೇಹಿತನ ಮಾತನ್ನು ಕೇಳಿದ ವೀರೇಶ್‌ ಎಷ್ಟು ಬೇಕಾದರೂ ಹಣ ನೀಡುತ್ತೇನೆ. ಏನಾದರೂ ಮಾಡಿ ಪರೀಕ್ಷೆಯಲ್ಲಿ ಪಾಸ್‌ ಮಾಡು ಎಂದು ಬೇಡಿಕೊಂಡಿದ್ದ.

ವೀರೇಶನ ಮನವಿಯಂತೆ ಸ್ನೇಹಿತ ಅಕ್ರಮದ ಕಿಂಗ್‌ಪಿನ್‌ ಬಗ್ಗೆ ಮಾಹಿತಿ ನೀಡಿದ್ದ. ಬಳಿಕ ವಿರೇಶ್ ಕಿಂಗ್‌ಪಿನ್ ಜೊತೆ ಸೇರಿಕೊಂಡು ಪಿಎಸ್ಐ ನೌಕರಿಯ ಡೀಲ್‌ ಅನ್ನು 80 ಲಕ್ಷಕ್ಕೆ ಕುದುರಿಸಿದ್ದ.

ಈ ಡೀಲ್‌ನಂತೆ ಪರೀಕ್ಷೆಗೂ ಮುನ್ನವೇ ವೀರೇಶ್‌ 35 ಲಕ್ಷ ರೂ. ಹಣವನ್ನು ಪಾವತಿಸಿದ್ದ. ಹಣ ಕೊಟ್ಟ ಬಳಿಕ ವೀರೇಶ್‌ ಪರೀಕ್ಷೆಯಲ್ಲಿ ಕೇವಲ 20 ಅಂಕಕ್ಕೆ ಉತ್ತರ ಬರೆದಿದ್ದ. ಆದರೆ ಪರೀಕ್ಷಾ ಫಲಿತಾಂಶದ ವೇಳೆ 121 ಅಂಕ ಬಂದಿತ್ತು. ಇಷ್ಟೊಂದು ಅಂಕ ಬಂದ ಕಾರಣ ಸ್ನೇಹಿತ ವೀರೇಶ್ ಬಳಿ ಉಳಿದ ಹಣಕ್ಕಾಗಿ ಬೇಡಿಕೆ ಇಟ್ಟಿದ್ದ.

ಹಣ ಕೊಡದೇ ಇದ್ದಾಗ ವಿರೇಶ್ ಸ್ನೇಹಿತನೇ ಆತನ ಒಎಂಆರ್ ಶೀಟ್ ಬೇರೆ ಅಭ್ಯರ್ಥಿಗಳಿಗೆ ಶೇರ್ ಮಾಡಿ ಅಕ್ರಮದ ಬಗ್ಗೆ ಬಾಯಿ ಬಿಟ್ಟಿದ್ದ. ಆಗ ಪರೀಕ್ಷೆಯಲ್ಲಿ ಅಕ್ರಮ ಆಗಿದೆ ಎಂದು ತಿಳಿದು ಉಳಿದ ಅಭ್ಯರ್ಥಿಗಳು ಸಿಎಂ ಮತ್ತು ಗೃಹ ಸಚಿವರಿಗೆ ದೂರು ನೀಡಿದ್ದರು. ಅಭ್ಯರ್ಥಿಗಳು ಸಲ್ಲಿಸಿದ ದೂರಿನ ಆಧಾರದ ಮೇಲೆ ಸರ್ಕಾರ ಅಕ್ರಮದ‌ ತನಿಖೆಯನ್ನು ಸಿಐಡಿ ಭರದಿಂದ ಸಾಗಿದೆ.

ಶಾಲೆಯ ಮುಖ್ಯಸ್ಥ ದಿವ್ಯಾ ನಾಪತ್ತೆಯಾಗಿದ್ದಾಳೆ. ಆಕೆಯ ಪತಿ ಸೇರಿದಂತೆ 8 ಮಂದಿಯನ್ನು ಬಂಧಿಸಲಾಗಿದೆ.

Copyright © All rights reserved Newsnap | Newsever by AF themes.
error: Content is protected !!