December 24, 2024

Newsnap Kannada

The World at your finger tips!

Daily posts 89

ಸೌಜನ್ಯಳಿಗೆ ನ್ಯಾಯ ಒದಗಿಸಿ – ವೀರೇಂದ್ರ ಹೆಗ್ಗಡೆ ಮನವಿ

Spread the love

ದಕ್ಷಿಣ ಕನ್ನಡ : 11 ವರ್ಷದ ಹಿಂದೆ ನಡೆದ ಕಾಲೇಜು ವಿದ್ಯಾರ್ಥಿನಿ ಸೌಜನ್ಯಳ ಕೊಲೆ ಮತ್ತು ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಸರ್ಕಾರ ಮತ್ತು ತನಿಖಾ ಸಂಸ್ಥೆಗಳು ನ್ಯಾಯ ಒದಗಿಸಕೊಡಬೇಕೆಂದು ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಮನವಿ ಮಾಡಿಕೊಂಡಿದ್ದಾರೆ.

ಈ ಕುರಿತು ಸರ್ಕಾರಕ್ಕೆ ಮಾಧ್ಯಮ ಮುಖೇನ ಮನವಿ ಮಾಡಿರುವ ಹೆಗ್ಗಡೆ ಅವರು, ಈ ಪ್ರಕರಣದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಮತ್ತು ನಮ್ಮ ಕುಟುಂಬವನ್ನು ಗುರಿಯಾಗಿರಿಸಿಕೊಂಡು ಕೆಲವರು ಸುಳ್ಳು ಸುದ್ದಿ ಹರಡುತ್ತಿದ್ದಾರೆ, ಇದರಿಂದ ಭಕ್ತರ ಮನಸಿಗೆ ನೋವಾಗಿದೆ ಎಂದು ಹೇಳಿದ್ದಾರೆ.

ಸೌಜನ್ಯ ಕೊಲೆ ಪ್ರಕರಣದಲ್ಲಿ ಮೊದಲು ಸಿಐಡಿ, ಬಳಿಕ ದೇಶದ ಉನ್ನತ ತನಿಖಾ ಸಂಸ್ಥೆಯಾದ ಸಿಬಿಐ ತನಿಖೆ ನಡೆಸಿ ಆರೋಪ ಪಟ್ಟಿ ಸಲ್ಲಿಸಿದೆ.

ನ್ಯಾಯಾಲಯದಲ್ಲಿ ವಿಚಾರಣೆ ನಡೆದ ಬಳಿಕ ಆರೋಪಿಯನ್ನು ಖುಲಾಸೆ ಮಾಡಲಾಗಿದೆ ಎಂದು ಹೇಳಿರುವ ವೀರೇಂದ್ರ ಹೆಗಡೆಯವರು, ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲು ಶ್ರೀಕ್ಷೇತ್ರದ ವತಿಯಿಂದ ಸರ್ಕಾರದ ಮೇಲೆ ಒತ್ತಡ ಹೇರಲಾಗಿದ್ದು, ಈ ವಿಷಯವನ್ನು ಭಕ್ತಾದಿಗಳ ಗಮನಕ್ಕೆ ತರಲು ಬಯಸುವುದಾಗಿ ಹೇಳಿದ್ದಾರೆ.ರಾಜ್ಯದಲ್ಲಿ ವಿದ್ಯುತ್‌ ಚಾಲಿತ ವಾಹನಗಳ ಬ್ಯಾಟರಿ ಉತ್ಪಾದನೆ – 8 ಸಾವಿರ ಕೋಟಿ ರೂ. ಹೂಡಿಕೆ

ಕು. ಸೌಜನ್ಯಳ ಸಾವಿಗೆ ನ್ಯಾಯ ಒದಗಿಸುವಂತೆ ಸರ್ಕಾರವನ್ನು ಒತ್ತಾಯಿಸುವಾಗಿ ಹೇಳಿದರುವ ಧರ್ಮಾಧಿಕಾರಿ ವೀರೇಂದ್ರ ಹೆಗಡೆಯವರು, ಕ್ಷೇತ್ರದ ಬಗ್ಗೆ ಹರಡಲಾಗುತ್ತಿರುವ ಆಪಾದನೆ, ಸುಳ್ಳು ಸುದ್ದಿಗಳು ಹಾಗೂ ಅವಹೇಳನಕಾರಿ ವದಂತಿಗಳ ಬಗ್ಗೆ ಭಕ್ತಾದಿಗಳು, ಸಾರ್ವಜನಿಕರು ಗೊಂದಲಕ್ಕೆ ಈಡಾಗಬಾರದು ಎಂದು ವಿನಂತಿ ಮಾಡಿಕೊಂಡಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!