ಮೇಲುಕೋಟೆ ಚಲುವನಾರಾಯಣಸ್ವಾಮಿ ದೇವಸ್ಥಾನವನ್ನು ಶೂದ್ರರಿಗೆ ಒಪ್ಪಿಸಿ ಪ್ರಗತಿಪರರ ಒತ್ತಾಯ

Team Newsnap
1 Min Read
Progressives urge to hand over the Melukote Temple

ಮೇಲುಕೋಟೆಯ ಸಲಾಂ ಆರತಿ ಕುರಿತು ಜಿಲ್ಲಾಧಿಕಾರಿ ಕೈಗೊಂಡಿರುವ ನಿರ್ಣಯ, ಶಿಕ್ಷಣವನ್ನು ಕೇಸರೀಕರಣಗೊಳಿಸಲು ಉದ್ದೇಶಿಸಿ ಬಿಜೆಪಿ ಸರ್ಕಾರ ತೆಗೆದುಕೊಂಡಿರುವ ಪಠ್ಯ ಪುಸ್ತಕ ಪರಿಷ್ಕರಣೆ ಮತ್ತು ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರಿಗೆ ಮೀಸಲಾತಿಯನ್ನು ನಿರಾಕರಿಸುತ್ತಿರುವ ಸುಪ್ರೀಂ ಕೋರ್ಟ್ ತೀರ್ಮಾನಗಳನ್ನು ಖಂಡಿಸಿ ಮಂಡ್ಯದ ಡಿಸಿ ಪಾರ್ಕಲ್ಲಿ ನಡೆದ ಸಮಾನ ಮನಸ್ಕರ ಸಭೆಯಲ್ಲಿ ಹಲವು ತೀರ್ಮಾಗಳನ್ನು ಕೈಗೊಳ್ಳಲಾಯಿತು.

ಇದನ್ನು ಓದಿ –ಬೆಂಗಳೂರು-ಮೈಸೂರು ಎಕ್ಸ್​​ಪ್ರೆಸ್​​ ಹೈವೆಯಲ್ಲಿ ಬೈಕ್​ಗಳಿಗೂ ಪ್ರವೇಶ ಕುರಿತು ಚರ್ಚೆ – ಸಿಂಹ

ಪಠ್ಯ ಪುಸ್ತಕ ಪರಿಷ್ಕರಣೆ ಮಾಡಿ ಕೋಮು ವಿಷಯಗಳನ್ನು ಪಠ್ಯದಲ್ಲಿ ತುಂಬುತ್ತಿರುವ ಕೋಮುವಾದಿ ಬಿಜೆಪಿ ಕ್ರಮ ಖಂಡಿಸಿ ಮೇ 26 ರಂದು (ಗುರುವಾರ) ಮಂಡ್ಯದ ಕುವೆಂಪು ಪ್ರತಿಮೆಯಿಂದ ಹೊರಟು ಸಂಜಯ ವೃತ್ತದಲ್ಲಿ ಹೊಸ ಪಠ್ಯ ಪುಸ್ತಕಕ್ಕೆ ಬೆಂಕಿ ಹಾಕಿ ಸುಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ

ಮೇ 27 ರಂದು ಮೇಲುಕೋಟೆಯಲ್ಲಿ ಸಲಾಂ ಆರತಿ ನಿಲ್ಲಿಸಲು ನಿರ್ದರಿಸುವ ಅಧಿಕಾರಾಯಿ ಹುನ್ನಾರವನ್ನು ಬಯಲು ಮಾಡಲು ಪ್ರತಿಭಟನೆ ನಡೆಸಿ ಜಿಲ್ಲಾದಿಕಾರಿಗಳಿಗೆ ಮನವಿ ಸಲ್ಲಿಸುವುದು. ಮತ್ತು ಇಡೀ ಮೇಲುಕೋಟೆ ಚಲುವನಾರಾಯಣ ದೇವಸ್ಥಾನವನ್ನು ಜಿಲ್ಲೆಯ ಶೂದ್ರರ ಮತ್ತು ದಲಿತರ ಸುಪರ್ದಿಗೆ ಬಿಟ್ಟು ಕೊಡಲು ಆಗ್ರಹಿಸಿ ಸಭೆ ನಿರ್ಣಯ ಕೈಗೊಂಡಿತು..

ಸಭೆಯಲ್ಲಿ ಹುಲ್ಕೆರೆ ಮಹದೇವು, ವಕೀಲ ಲಕ್ಷ್ಮಣ್ ಚೀರನಹಳ್ಳಿ, ಪ್ರೊ ಜಿಟಿ ವೀರಪ್ಪ CPMನ ಕೃಷ್ಣೇಗೌಡ’ DSS ಅಂದಾನಿ, ಕೃಷ್ಣ, ಮುಸ್ಲಿಂ ಒಕ್ಕೂಟದ ತಾಹೇರ್ ಸವಿತ ಸಮಾಜದ ಬೋರಪ್ಪ, ಮಾಜಿ ಜಿಪಂ ಅಧ್ಯಕ್ಷ ಲಿಂಗಯ್ಯ ಉಪ್ಪಾರ ಸಮಾಜದ ನಾಗರತ್ನ’ ಬೆಸ್ತರ ಸಂಘದ ಉಮೇಶ ಹಾಲಹಳ್ಳಿ ಮುಕುಂದ, ‘ ಟಿಡಿನಾಗರಾಜ್ ‘ ಶಿಕ್ಷಕ ನಾರಾಯಣ್ ಹಿಂದೂದ ವಗ೯ಗಳ ವೇದಿಕೆಯ ಸಂದೇಶ’ ಯುವ ಸಾಹಿತಿ ರಾಜೇಂದ್ರ, ಗಾನಸುಮ ಪಟ್ಟಸೋಮನಹಳ್ಳಿ, ಸೇರಿದಂತೆ ಜಿಲ್ಲೆಯ ಐವತ್ತಕ್ಕೂ ಹೆಚ್ಚು ಪ್ರಗತಿಪರರು ಪಾಲ್ಗೊಂಡಿದ್ದರು.

Share This Article
Leave a comment