ಮಂಡ್ಯದ ಪಿಇಎಸ್ ಕಾಲೇಜಿನ ಪ್ರಾಧ್ಯಾಪಕ ಡಾ. ಎಲ್ ಪ್ರಸನ್ನ ಕುಮಾರ್ ಹಠಾತ್ ನಿಧನ

Team Newsnap
1 Min Read

ಮಂಡ್ಯ :

ನಗರದ ಪಿಇಎಸ್ ಇಂಜಿನಿಯರಿಂಗ್ ಕಾಲೇಜಿನ ಭೂವಿಜ್ಞಾನ ವಿಭಾಗದ ಪ್ರಾಧ್ಯಾಪಕ ಡಾ. ಎಲ್. ಪ್ರಸನ್ನಕುಮಾರ್ (59) ಅವರು ಭಾನುವಾರ ಮಧ್ಯಾಹ್ನ ತೀವ್ರ ಹೃದಯಾಘಾತದಿಂದ ನಿಧನರಾದರು.

ಮದ್ದೂರು ತಾಲೂಕು ಹುನಗನಹಳ್ಳಿ ಗ್ರಾಮದ ಪ್ರೊ. ಪ್ರಸನ್ನಕುಮಾರ್ ಅವರು ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಹಠಾತ್ತನೇ ಹೃದಯಾಘಾತವಾಗಿ ಕುಸಿದು ಬಿದ್ದಿದ್ದಾರೆ.

ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮೃತಪಟ್ಟಿದ್ದಾರೆ. ಡಾ. ಪ್ರಸನ್ನಕುಮಾರ್ ಅವರು ಪಿಇಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಜೈವಿಕ ಇಂಧನ ತಯಾರಿಸುತ್ತಿದ್ದರು. ಜೈವಿಕ ಇಂಧನವನ್ನೇ ಅವರು ತಮ್ಮ ಕಾರಿಗೆ ಬಳಸುತ್ತಿದ್ದರು.

ಮೃತರು ಪತ್ನಿ ಅನಿತಾ, ಪುತ್ರಿ ಡಾ. ಅನುಶ್ರೀ ಪಿ.ಕುಮಾರ್ ಸೇರಿದಂತೆ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಚಾಮುಂಡೇಶ್ವರಿನಗರದ 11ನೇ ಕ್ರಾಸ್‌ನಲ್ಲಿರುವ ಅವರ ಸ್ವಗೃಹದಲ್ಲಿ ಪಾರ್ಥೀವ ಶರೀರ ಇಡಲಾಗಿದೆ.

ನಾಳೆ ಬೆಳಗ್ಗೆ 9 ಗಂಟೆಯ ನಂತರ ಮೃತರ ಸ್ವಗೃಹ ಹುನಗನಹಳ್ಳಿಗೆ ಕೊಂಡೊಯ್ದು, ಬೆಳಗ್ಗೆ 11 ಗಂಟೆಗೆ ಅವರ ತೋಟದಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ.

Share This Article
Leave a comment