ಅಸಿಸ್ಟೆಂಟ್ ಪ್ರೊಫೆಸರ್ ಪ್ರಶ್ನೆಪತ್ರಿಕೆ ಲೀಕ್ ಪ್ರಕರಣದ ಆರೋಪಿ, ಪ್ರಾಧ್ಯಾಪಕ ಪ್ರೊ.ನಾಗರಾಜು ಅವರನ್ನು ಅಮಾನತ್ತುಗೊಳಿಸಿ ಮೈಸೂರು ವಿವಿ ಆದೇಶ ಹೊರಡಿಸಿದೆ.
ನಾಗರಾಜು ಜಿಯಾಗ್ರಫಿ ಪ್ರೊಫೆಸರ್ . ಪ್ರಶ್ನೆ ಪತ್ರಿಕೆ ಲೀಕ್ ಸಂಬಂಧ ಮಲ್ಲೇಶ್ವರಂ ಪೊಲೀಸರಿಂದ ಬಂಧಿತರಾಗಿದ್ದರು.
ಧಾರವಾಡ ಕರ್ನಾಟಕ ಯೂನಿವರ್ಸಿಟಿಯ ಮೌಲ್ಯಮಾಪನ ರಿಜಿಸ್ಟ್ರಾರ್ ಆಗಿದ್ದು, ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ನಿರ್ಲಕ್ಷ್ಯ ಹಿನ್ನೆಲೆಯಲ್ಲಿ ಬಂಧನ ಮಾಡಲಾಗಿತ್ತು.
ಪ್ರಶ್ನೆಪತ್ರಿಕೆ ಲೀಕ್ ನಲ್ಲಿ ಭಾಗಿ ಹಿನ್ನೆಲೆ ನಾಗರಾಜ್ ತಂಗಿ ಮಗಳು ಕುಸುಮಳನ್ನು ಕೂಡ ಪೊಲೀಸರು ವಶಕ್ಕೆ ಪಡೆದಿದ್ದರು.
ಭೂಗೋಳ ಶಾಸ್ತ್ರ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಿದ ತಂಡದಲ್ಲಿದ್ದ ನಾಗರಾಜ್ ಮನೆಗೆ ಆಗಾಗ ಹೋಗುತ್ತಿದ್ದಾಗಿ ಆರೋಪಿ ಸೌಮ್ಯ ವಿಚಾರಣೆಯ ವೇಳೆ ಒಪ್ಪಿಕೊಂಡಿದ್ದಳು.
ನಾಗರಾಜ್ ಬಳಿ ಇದ್ದ ಬುಕ್ಸ್ ಗಳನ್ನ ಓದುವುದು ಮಾಡ್ತಿದ್ದೆ. ಅವರು ಪ್ರಶ್ನೆ ಪೇಪರ್ ತಯಾರು ಮಾಡುವ ಕಮಿಟಿಯಲ್ಲಿರೋದು ಗೊತ್ತಿತ್ತು ಎಂದಿದ್ದಳು.
ನಾಗರಾಜ್ ಟೇಬಲ್ ಮೇಲೆ ಪ್ರಶ್ನೆ ಪತ್ರಿಕೆಯ ಕವರ್ ಇತ್ತು. ನಾನು ಯಾರಿಗೂ ಗೊತ್ತಾಗದ ಹಾಗೆ ಫೋಟೋ ತೆಗೆದುಕೊಂಡು ಬಂದಿದ್ದೆ. ಮರುದಿನ ಕಾಲೇಜಿನ ಬಳಿ ಪ್ರೊಫೆಸರ್ ತಂಗಿ ಮಗಳು ಕುಸುಮಾಗೆ ಪ್ರಶ್ನೆ ಪತ್ರಿಕೆ ಫೋಟೋ ಕಾಪಿ ಕಳಿಸುವಂತೆ ಹೇಳಿದ್ದೆ. ಆಕೆ ಕೂಡ ಕೆಲವೊಂದು ಪ್ರಶ್ನೆಗಳ ಫೋಟೋ ಕಳುಹಿಸಿದ್ದಳು. ಹೀಗೆ ಕ್ವೆಶ್ಚೆನ್ ಪೇಪರ್ ಲೀಕ್ ಹಿಂದಿನ ಇಂಚಿಂಚು ಮಾಹಿತಿಯನ್ನ ಎಳೆ ಎಳೆಯಾಗಿ ಪೊಲೀಸರ ಮುಂದೆ ಸೌಮ್ಯ ಬಿಚ್ಚಿಟ್ಟಿದ್ದಳು.
- ಎಪಿಗಾಮಿಯಾ ಸಹ-ಸಂಸ್ಥಾಪಕ ರೋಹನ್ ಮಿರ್ಚಂದಾನಿ ನಿಧನ
- ಮಾತೃವಾತ್ಸಲ್ಯದ ಗಣಿ, ಪ್ರೇಮಮಯಿ ಜಗನ್ಮಾತೆ ಶಾರದಾದೇವಿ
- ಜನವರಿ 23, 24, 25 ರಂದು ಅಂತರಾಷ್ಟ್ರೀಯ ಸಿರಿಧಾನ್ಯ ಮೇಳ ಜರುಗಲಿದೆ: ಎನ್ ಚಲುವರಾಯಸ್ವಾಮಿ
- ಓದಿನ ಮಹತ್ವ
- ಕುಂಭಮೇಳ ಪ್ರಯಾಣಿಕರಿಗೆ ಸುವಾರ್ತೆ: ಮೈಸೂರು-ಪ್ರಯಾಗ್ ರಾಜ್ ವಿಶೇಷ ರೈಲು ಸೇವೆ
- ಮಂಡ್ಯದಲ್ಲಿ ಭೀಕರ ಅಪಘಾತ: ಕಾರು-ಲಾರಿ ಡಿಕ್ಕಿಯಾಗಿ ಮೂವರು ವಿದ್ಯಾರ್ಥಿ ಸಾವು
More Stories
ಎಪಿಗಾಮಿಯಾ ಸಹ-ಸಂಸ್ಥಾಪಕ ರೋಹನ್ ಮಿರ್ಚಂದಾನಿ ನಿಧನ
ಮಾತೃವಾತ್ಸಲ್ಯದ ಗಣಿ, ಪ್ರೇಮಮಯಿ ಜಗನ್ಮಾತೆ ಶಾರದಾದೇವಿ
ಓದಿನ ಮಹತ್ವ