ಮೈಸೂರು:
ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಬುಧವಾರ ಮೈಲಾರಿ ದೋಸೆಯನ್ನು ಸವಿದು ಪ್ರಿಯಾಂಕಾ ಫಿದಾ ಆಗಿದ್ದಾರೆ.
ಪ್ರಿಯಾಂಕಾ ಗಾಂಧಿ ಮೈಸೂರಿನ ಅಗ್ರಹಾರ ಬಳಿ ಇರುವ ಮೈಲಾರಿ ಹೋಟೆಲ್‌ಗೆ ತೆರಳಿ, ಅಲ್ಲಿ ಅವರು ಅಡುಗೆ ಮನೆಯಲ್ಲಿ ಖುದ್ದು ತವಾ ಮೇಲೆ ದೋಸೆ ಹಾಕಿದ್ದಾರೆ. ತವಾಗೆ ಸಂಪಳಾ ಹಾಕಿ ದೋಸೆ ಮಾಡಿ ಸಂತೋಷ ವ್ಯಕ್ತಪಡಿಸಿದ ಪ್ರಿಯಾಂಕಾ ಬಳಿಕ ದೋಸೆ ಸವಿದು ರುಚಿಗೆ ಮನಸೋತಿದ್ದಾರೆ.
ಬಳಿಕ ಮಾತನಾಡಿದ ಪ್ರಿಯಂಕಾ ಅವರು, ನಾನಿಲ್ಲಿ ಇಡ್ಲಿ, ದೋಸೆ ಸವಿದಿದ್ದೇನೆ. ಎಲ್ಲವೂ ತುಂಬಾ ರುಚಿಕರವಾಗಿತ್ತು. ಇದನ್ನು ಮನೆಯಲ್ಲಿ ಹೇಗೆ ಮಾಡಬೇಕು ಎಂಬುದನ್ನು ತಿಳಿದುಕೊಂಡಿದ್ದೇನೆ. ನಾನು ಇದನ್ನು ಮನೆಯಲ್ಲಿಯೂ ಟ್ರೈ ಮಾಡುತ್ತೇನೆ ಎಂದು ಹೇಳಿದರು.
ಈ ವೇಳೆ ಪ್ರಿಯಾಂಕಾ ಗಾಂಧಿ ಅವರಿಗೆ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸಾಥ್ ನೀಡಿದರು.