December 27, 2024

Newsnap Kannada

The World at your finger tips!

priyanka gandhi

ಪ್ರಿಯಾಂಕಾ ಗಾಂಧಿ ಪೋಲಿಸ್ ವಶಕ್ಕೆ; ವಶದಲ್ಲಿಟ್ಟ ರೂಂ ಕಸ ಗೂಡಿಸಿದ ಕೈ ನಾಯಕಿ

Spread the love

ಅಖಿಂಪುರ್​ನಲ್ಲಿ ನಡೆದ ಹಿಂಸಾಚಾರವನ್ನು ಖಂಡಿಸಿ ಪೊಲೀಸರ ವಶದಲ್ಲಿರುವ ಕಾಂಗ್ರೆಸ್​ ನಾಯಕಿ ಪ್ರಿಯಾಂಕ ಗಾಂಧಿ ತಮ್ಮನ್ನು ಇರಿಸಿದ ರೂಂ ಕಸ ಗೂಡಿಸುತ್ತಿರುವು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ಉತ್ತರ ಪ್ರದೇಶದ ಸೀತಾಪುರ ಜಿಲ್ಲೆಯ ಲಖಿಂಪುರ್​ ಖೇರಿಯ ಪಿಎಸಿ ಗೆಸ್ಟ್​​ಹೌಸ್​​ನಲ್ಲಿರುವ ಪ್ರಿಯಾಂಕ ರೂಮ್​​ ಗಲೀಜಾಗಿದ್ದರಿಂದ ಸ್ವತಃ ತಾವೇ ಕಸಗೂಡಿಸಿ ಕ್ಲೀನ್ ಮಾಡಿಕೊಂಡಿದ್ದಾರೆ.

ಲಖಿಂಪುರ್​ನಲ್ಲಿ ನಡೆದ ಹಿಂಸಾಚಾರವನ್ನು ಖಂಡಿಸಿ ನಿನ್ನೆ ರಾತ್ರೋರಾತ್ರಿ ಪ್ರಿಯಾಂಕ ಗಾಂಧಿ ಲಖಿಂಪುರ್​ ಖೇರಿಗೆ ಭೇಟಿ ನೀಡಲು ಯತ್ನಿಸಿದ್ದರು. ಈ ವೇಳೆ ಅವರನ್ನು ಬಂಧಿಸಿದ ಉತ್ತರ ಪ್ರದೇಶ ಪೊಲೀಸರು ಅವರನ್ನು ವಶಕ್ಕೆ ತೆಗೆದುಕೊಂಡು ಲಖಿಂಪುರ್​ ಖೇರಿಯ ಪಿಎಸಿ ಗೆಸ್ಟ್​​ಹೌಸ್​​ನಲ್ಲಿರಿಸಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!