ಗ್ಯಾರಂಟಿ ಯೋಜನೆಗಳ ಜೊತೆ ಅಭಿವೃದ್ಧಿಗೂ ಆದ್ಯತೆ: ಚಲುವರಾಯಸ್ವಾಮಿ

Team Newsnap
2 Min Read

ಮಂಡ್ಯ : ಜನರಿಗೆ ಗ್ಯಾರಂಟಿ ಯೋಜನೆಗಳನ್ನು ನೀಡುವುದು ಮಾತ್ರವಲ್ಲದೆ ಅಭಿವೃದ್ಧಿ ಕಾಮಗಾರಿಗಳೂ ನಮ್ಮ ಸರ್ಕಾರ ಅಷ್ಟೇ ಆದ್ಯತೆ ನೀಡುತ್ತಿದೆ ಎಂದು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ಮಂಗಳವಾರ ಹೇಳಿದರು .

ನಗರದಲ್ಲಿ ಕೆರಗೋಡು ಮಂಡ್ಯ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಸಚಿವರು ಮಾತನಾಡಿದರು.

ಜನರ ಜೀವನ ಮಟ್ಟ ಸುಧಾರಣೆ ಹಾಗೂ ಭೌತಿಕ ಅಭಿವೃದ್ಧಿ ಎರೆಡೂ ರಾಜ್ಯ ಸರ್ಕಾರದ ಆಧ್ಯತೆ. ಇಂದಿನ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನಮ್ಮ ಬದ್ದತೆಗೆ ಸಾಕ್ಷಿಯಾಗಿದೆ ಎಂದರು.

ಗುಣಮಟ್ಟ ಕೊಯ್ದುಕೊಂಡು ಆದಷ್ಟು ಬೇಗ ಕಾಮಗಾರಿ ಮುಗಿಸಬೇಕು,ರೈತರು ಸಹಕರಿಸಿಬೇಕು ಎಂದು ಸಚಿವರು ಕರೆ ನೀಡಿದರು.

ರಾಜ್ಯದಲ್ಲಿ ನಮ್ಮ ಸರ್ಕಾರ ಬಂದ ನಂತರ ಮಂಜೂರಾಗಿ ಟೆಂಡರ್ ಕೂಡ‌ ಮುಗಿದು ಈ ಹೊಸ ಕಾಮಗಾರಿ ಪ್ರಾರಂಭವಾಗಿದೆ. ಜನರ ದಶಕದ ಕನಸು ಈಡೇರಿದೆ .

ನಾಗಮಂಗಲ ,ಕೌಡ್ಲು ತುಮಕೂರು ಕಡೆಗೆ ತೆರಳುವವರಿಗೆ ಈ ರಸ್ತೆ ಕಾಮಗಾರಿಯಿಂದ ಅನುಕೂಲವಾಗಲಿದೆ ಎಂದು ಕೃಷಿ ಸಚಿವರು ಅಭಿಪ್ರಾಯ ಪಟ್ಟರು.

11 ಕೋಟಿ ರೂ ವೆಚ್ಚದ ಕಾಮಗಾರಿ ಇದಾಗಿದೆ .ಶೀಘ್ರದಲ್ಲೇ 150 ಕೋಟಿ ರೂ ವೆಚ್ಚದಲ್ಲಿ ಜಿಲ್ಲೆಯ ವಿವಿಧ ಕಾಮಗಾರಿ ಪ್ರಾರಂಭವಾಗಲಿದೆ ಎಂದು ಸಚಿವರು ಹೇಳಿದರು.

ಜಿಲ್ಲೆಯ ಡಾ. ವಿವೇಕ್ ಅವರು ಅಮೇರಿಕ ಅಧ್ಯಕ್ಷರ ಆಪ್ತ ವೈದ್ಯರಾಗಿರುವುದು ಹೆಮ್ಮೆಯ ವಿಷಯ. ಅವರ ಆಹ್ವಾನದ ಮೇರೆಗೆ ಅಮೇರಿಕಾದ ಮಾಜಿ ಅಧ್ಯಕ್ಷರಾದ ಬರಾಕ್ ಒಬಮಾ ಅವರು ಸ್ಟ್ಯಾಚು ಆಫ್ ಮದರ್ ಅರ್ಥ ಪ್ರತಿಮೆ ಅನಾವರಣಕ್ಕೆ ಮಂಡ್ಯಗೆ ಬರುವ ಸಾಧ್ಯತೆ ಇದೆ . ಅಷ್ಟರಲ್ಲಿ ರಸ್ತೆ ಕಾಮಗಾರಿಗಳು ಪೂರ್ಣಗೊಳ್ಳಬೇಕು ಎಂದರು .

ಮಂಡ್ಯ ಶಾಸಕ ರವಿಕುಮಾರ್ ಪಿ ಗೌಡ ಅವರು ಮಾತನಾಡಿ ಕಳೆದ 10 ವರ್ಷಗಳಿಂದ ಮಂಡ್ಯ ಕೆರಗೋಡು ರಸ್ತೆ ನೆನೆಗುದಿಗೆ ಬಿದ್ದಿದ್ದು ದುರಸ್ತಿ ಕಾಮಗಾರಿಗೆ ಈಗ ಚಾಲನೆ ದೊರೆತಿರುವುದು ಸಂತೋಷದ ವಿವಾರ ಎಂದರು.

ಕಳೆದ 10 ವರ್ಷ ಗಳಲ್ಲಿ ಈ ರಸ್ತೆಯಲ್ಲಿ ಹಲವು ಅಪಘಾತಗಳು, ಒಂದೆರೆಡು ಪ್ರಾಣ ಹಾನಿಗಳೂ ಸಂಭವಿಸಿತ್ತು. ಆದರೆ ಹಿಂದೆ ಆಳಿದವರು ಯಾವುದೇ ಅಭಿವೃದ್ಧಿಗೆ ಗಮನ ಹರಿಸಿಲ್ಲ.ಈಗ ರಸ್ತೆ ಅಭಿವೃದ್ಧಿಗೆ ಚಾಲನೆ ನೀಡಲಾಗಿದೆ.

ಇದು ನಮ್ಮ ಸರ್ಕಾರ ಹಾಗೂ ಜಿಲ್ಲಾ ಉಸ್ತವಾರಿ ಸಚಿವರಾದ ಎನ್ ಚಲುವರಾಯಸ್ವಾಮಿ ಅವರ ಇಚ್ಚಾಶಕ್ತಿ ಏನೆಂಬುದನ್ನು ತೋರುತ್ತಿದೆ ಎಂದರು .

11 ಕೋಟಿ ರೂ ವೆಚ್ಚದಲ್ಲಿ ಎರೆಡು ತಿಂಗಳೊಳಗೆ ರಸ್ತೆ ಕಾಮಗಾರಿ‌ ಪೂರ್ಣ ಗೊಳ್ಳಲಿದೆ. ನಗರದ ವಿವಿಧ ಭಾಗಗಳಲ್ಲಿ 5 ಕೋಟಿ ರೂ ವೆಚ್ಚದಲ್ಲಿ ರಸ್ತೆ ಕಾಮಗಾರಿಗಳಿಗೂ ಚಾಲನೆ ನೀಡಲಾಗಿದೆ‌ ಎಂದರು.

ಇದಲ್ಲದೆ 150ಕೋಟಿ ರೂ ಗಳಲ್ಲಿ ಜಿಲ್ಲೆಯ ವಿವಿಧ ರಸ್ತೆಗಳ ಅಭಿವೃದ್ಧಿ ಆದಷ್ಟು ಬೇಗ ಮಾಡಲಾಗುವುದು ಎಂದು ಶಾಸಕರು ಹೇಳಿದರು.ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಿಂದ ಮಳವಳ್ಳಿಯಲ್ಲಿ ಬರ‌ ಪರಿಸ್ಥಿತಿ : ಬೆಳೆ ನಾಶ ಪರಿಶೀಲನೆ

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ; ಕುಮಾರ ,ಅಧಿಕಾರಿಗಳು ಉಪಸ್ಥಿತರಿದ್ದರು .

Share This Article
Leave a comment