December 24, 2024

Newsnap Kannada

The World at your finger tips!

modi mother

ತಾಯಿ ಹೀರಾಬೆನ್​​ಗೆ 100 ವಸಂತ: ಅಮ್ಮನ ಪಾದಪೂಜೆ ಮಾಡಿದ ನರೇಂದ್ರ ಮೋದಿ

Spread the love

ಪ್ರಧಾನಿ ನರೇಂದ್ರ ಮೋದಿ ತಾಯಿ ಹೀರಾಬೆನ್​ ಮೋದಿ ಇಂದು 100 ವರ್ಷಗಳನ್ನ ಪೂರೈಸಿ ಶತಾಯುಷಿಯಾಗಿದ್ದಾರೆ. ಅಮ್ಮನ 100ನೇ ವರ್ಷದ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಮೋದಿ ಗುಜರಾತ್​ನ ಗಾಂಧಿನಗರದಲ್ಲಿರುವ ತಮ್ಮ ನಿವಾಸಕ್ಕೆ ಆಗಮಿಸಿದ ಮೋದಿ, ಅಮ್ಮನ ಪಾದ ಪೂಜೆ ಮಾಡಿ ಸಿಹಿ ತಿನ್ನಿಸಿದ್ದಾರೆ.

ಇದೇ ಖುಷಿಯಲ್ಲಿ ವದ್ನಗರದಲ್ಲಿ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆಯನ್ನೂ ಕೂಡ ಸಲ್ಲಿಸಲಿದ್ದಾರೆ.
ವಿಶೇಷ ಅಂದ್ರೆ ಹೀರಾಬೆನ್ ತಮ್ಮ ಇಳಿ ವಯಸ್ಸಿನಲ್ಲಿಯೂ ತುಂಬಾ ಆರೋಗ್ಯವಾಗಿದ್ದಾರೆ. ಗಾಂಧಿನಗರದಲ್ಲಿರುವ ಇನ್ನೊಬ್ಬ ಪುತ್ರ ಪಂಕಜ್​ (ಮೋದಿ ಕಿರಿಯ ಸಹೋದರ) ಮೋದಿ ಜೊತೆ ವಾಸವಿದ್ದಾರೆ. ಅವರ ಆರೋಗ್ಯವು ಸಾಮಾನ್ಯ ಜನರ ಆರೋಗ್ಯಕ್ಕಿಂತ ಉತ್ತಮವಾಗಿದೆ.

ಇದನ್ನು ಓದಿ – ಸೇನೆಗೆ ಪುಂಡರ ಅಗತ್ಯವಿಲ್ಲ, ರೈಲು ಸುಡುವವರು ಸೇನೆಗೆ ಸೂಕ್ತರಲ್ಲ: ಮಾಜಿ ಜನರಲ್ ವಿಪಿ ಮಲೀಕ್

ಹೀರಾಬೆನ್ ಸದಾ ಸರಳವಾದ ಆಹಾರವನ್ನು ಇಷ್ಟಪಡುತ್ತಾರೆ. ಇದೇ ಅವರ ಆರೋಗ್ಯದ ಗುಟ್ಟು ಎಂದು ಹೇಳಲಾಗಿದೆ.
ಮೋದಿ ಅವರು ಮಾಧ್ಯಮಗಳಿಗೆ ಹಿಂದೊಮ್ಮೆ ಹೇಳಿರುವ ಪ್ರಕಾರ, ಅವರು ಯಾವುದೇ ವಿಶೇಷ ಆಹಾರವನ್ನು ಸೇವಿಸುವುದಿಲ್ಲ. ಅವರೇ ಖುದ್ದು ತಯಾರಿಸಿದ ಆಹಾರವನ್ನೇ ಹೆಚ್ಚಾಗಿ ಸೇವಿಸುತ್ತಾರೆ. ಸ್ಪೈಸಿ ಹಾಗೂ ಆಯಿಲ್ ಆಹಾರ ಪದಾರ್ಥಗಳನ್ನು ಯಾವತ್ತೂ ಇಷ್ಟಪಟ್ಟಿಲ್ಲ. ಬೇಳೆ, ಅನ್ನ, ಖಿಚಡಿ ಮತ್ತು ಚಪಾತಿಯನ್ನ ನಿತ್ಯ ತಿನ್ನಲು ಇಷ್ಟಪಡುತ್ತಾರೆ. ಸಿಹಿತಿಂಡಿಗಳಲ್ಲಿ ಸಕ್ಕರೆ ಕ್ಯಾಂಡಿ ಮತ್ತು ಲ್ಯಾಪ್ಸಿ ತಿನ್ನಲು ಬಯಸುತ್ತಾರೆ ಎಂದು ಹೇಳಿದ್ದರು.

Copyright © All rights reserved Newsnap | Newsever by AF themes.
error: Content is protected !!