ಏಪ್ರಿಲ್​ 30 ರಂದು ಚನ್ನಪಟ್ಟಣಕ್ಕೆ ಪ್ರಧಾನಿ ನರೇಂದ್ರ ಮೋದಿ:ಮೈಸೂರು – ಬೆಂಗಳೂರು ದಶಪಥ ಹೆದ್ದಾರಿ ಮಾರ್ಗದಲ್ಲಿ ಬದಲಾವಣೆ

Team Newsnap
1 Min Read

ಚನ್ನಪಟ್ಟಣಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ಹಿನ್ನಲೆಯಲ್ಲಿ ಮೈಸೂರು ಮತ್ತು ಬೆಂಗಳೂರು ನಡುವಿನ ದಶಪಥ ಹೆದ್ದಾರಿ ಮಾರ್ಗದಲ್ಲಿ ಸಂಚಾರ ಬದಲಾವಣೆ ಆಗಲಿದೆ.

ಬೆಂಗಳೂರಿನಿಂದ ಮೈಸೂರಿಗೆ ಹೊರಡುವ ವಾಹನಗಳು ಬಿಡದಿ- ಹಾರೋಹಳ್ಳಿ- ಕನಕಪುರ-ಮಳವಳ್ಳಿ ಮಾರ್ಗವಾಗಿ ಮೈಸೂರು ಪ್ರಯಾಣ ಮಾಡಬಹುದು. ಮೈಸೂರಿನಿಂದ ಬರುವ ವಾಹನಗಳು ಮದ್ದೂರು- ಕುಣಿಗಲ್-ನೆಲಮಂಗಲ ಮಾರ್ಗವಾಗಿ ಬೆಂಗಳೂರಿಗೆ ತಲುಪಬಹುದು.

ಮಾರ್ಗ ಬದಲಾವಣೆ ಮಾಡಿ ರಾಮನಗರ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಏಪ್ರಿಲ್​ 30ರ ಬೆಳಗ್ಗೆ 11 ರಿಂದ ಸಂಜೆ 4 ಗಂಟೆವರೆಗೆ ಎಕ್ಸ್‌ಪ್ರೆಸ್‌ ಹೈವೆ ಬಂದ್ ಆಗಲಿದೆ.

ಏ.30 ರಂದು ಚನ್ನಪಟ್ಟಣಕ್ಕೆ ಮೋದಿ ಭೇಟಿ ನೀಡಿದರೆ, ಮೇ 4 ರಂದು ಕನಕಪುರಕ್ಕೆ ಅಮಿತ್ ಷಾ ಭೇಟಿ ಕೊಡಲಿದ್ದಾರೆ. ರಾಮನಗರ ಜಿಲ್ಲೆಯಲ್ಲಿ ನಾಲ್ಕು ಸ್ಥಾನಗಳನ್ನು ಗೆಲ್ಲುವ ವಿಶ್ವಾಸ ಇದೆ ಎಂದು ರಾಮನಗರದಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಶ್ವತ್ಥ ನಾರಾಯಣ ಹೇಳಿದರು.

ಏಪ್ರಿಲ್​ 30 ಭಾನುವಾರ ಆಗಿದ್ದು, ಅಂದು ವಾಹನ ದಟ್ಟಣೆ ಹೆಚ್ಚಳವಾಗಿ ಟ್ರಾಫಿಕ್ ಜಾಮ್​ ಉಂಟಾಗುವ ಸಾಧ್ಯತೆ ದಟ್ಟವಾಗಿದೆ.

Share This Article
Leave a comment