ದೇಶದಲ್ಲಿರುವ ವಿಐಪಿ ಸಂಸ್ಕೃತಿ ಕುರಿತಂತೆ ಯಾವಾಗಲೂ ವಾಗ್ದಾಳಿ ನಡೆಸುವ ಪ್ರಧಾನಿ ನರೇಂದ್ರ ಮೋದಿ ಅವರು, ಮಾರ್ಗಮಧ್ಯೆ ತಾವು ಪ್ರಯಾಣಿಸುತ್ತಿದ್ದ ಕಾರನ್ನು ನಿಲ್ಲಿಸುವಂತೆ ಬೆಂಗಾವಲು ಪಡೆಗೆ ಆದೇಶಿಸಿ ಅಂಬುಲೆನ್ಸ್‌ಗೆ ದಾರಿ ಮಾಡಿಕೊಡುವ ಮೂಲಕ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಸದ್ಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.ಅಹಮದಾಬಾದ್‍ನಿಂದ ಗಾಂಧಿನಗರಕ್ಕೆ ಹೋಗುವ ದಾರಿಯಲ್ಲಿ ಬರುತ್ತಿದ್ದ ಅಂಬುಲೆನ್ಸ್ ಕಂಡು ನರೇಂದ್ರ ಮೋದಿ ಅವರು, ತಮ್ಮ ವಾಹನವನ್ನು ನಿಲ್ಲಿಸಿ ಅಂಬುಲೆನ್ಸ್‌ಗೆ ದಾರಿ ಮಾಡಿಕೊಟ್ಟಿದ್ದಾರೆ. ಮೋದಿ ಯುಗದಲ್ಲಿ ವಿಐಪಿ ಸಂಸ್ಕೃತಿ ಇಲ್ಲ ಎಂದು ಬಿಜೆಪಿ ನಾಯಕ ರುತ್ವಿಜ್ ಪಟೇಲ್ ಟ್ವಿಟರ್‌ನಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ವಿವಾಹಿತ, ಅವಿವಾಹಿತ ಮಹಿಳೆಯರಿಗೆ ಗರ್ಭಪಾತ ಹಕ್ಕು-ಸುಪ್ರೀಂ ಮಹತ್ವದ ತೀರ್ಪು
ಗುಜರಾತ್ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಅವರು ಅಂಬುಲೆನ್ಸ್‌ಗೆ ದಾರಿ ಮಾಡಿಕೊಡುವ ಸಲುವಾಗಿ ತಮ್ಮ ಬೆಂಗಾವಲು ಪಡೆಯನ್ನು ನಿಲ್ಲಿಸಿದರು. ವಿಐಪಿ ಸಂಸ್ಕೃತಿಯ ವಿರುದ್ಧ ಪ್ರಧಾನಿಯವರ ಮತ್ತೊಂದು ನಡೆ. ಇದೊಂದು ಮಾನವೀಯತೆಯನ್ನು ಸೂಚಿಸುತ್ತದೆ ಎಂದು ಬರೆಯಲಾಗಿದೆ.
- ಮತ್ತೆ ಟೋಲ್ ಶುಲ್ಕ ಹೆಚ್ಚಳ, ಏಪ್ರಿಲ್ 1 ರಿಂದಲೇ ಹೊಸ ದರ
- ಕೌಟುಂಬಿಕ ಕಲಹ : ಪತ್ನಿ ನೇಣುಬಿಗಿದುಕೊಂಡ ಬೆನ್ನಲ್ಲೇ ಪತಿಯೂ ಆತ್ಮಹತ್ಯೆ
- ತುಮಕೂರು ಗ್ರಾಮಾಂತರ ಶಾಸಕ ಗೌರಿಶಂಕರ್ ಚುನಾವಣೆಯಿಂದ 6 ವರ್ಷ ಅನರ್ಹ
- ಸಂಸತ್ ಸದಸ್ಯತ್ವಕ್ಕೆ ಪ್ರಜ್ವಲ್ ರೇವಣ್ಣರಾಜೀನಾಮೆ ? ದೇವೇಗೌಡರಿಗೆ ತಲೆ ನೋವಾದ ಹಾಸನ ಟಿಕೆಟ್
- ಕೇಂದ್ರದಲ್ಲಿನ ವಿವಿಧ ಇಲಾಖೆಗಳಲ್ಲಿ 9.79 ಲಕ್ಷ ಖಾಲಿ ಹುದ್ದೆಗಳು
More Stories
ಸಂಸತ್ ಸದಸ್ಯತ್ವಕ್ಕೆ ಪ್ರಜ್ವಲ್ ರೇವಣ್ಣರಾಜೀನಾಮೆ ? ದೇವೇಗೌಡರಿಗೆ ತಲೆ ನೋವಾದ ಹಾಸನ ಟಿಕೆಟ್
ಕೇಂದ್ರದಲ್ಲಿನ ವಿವಿಧ ಇಲಾಖೆಗಳಲ್ಲಿ 9.79 ಲಕ್ಷ ಖಾಲಿ ಹುದ್ದೆಗಳು
ಹಿರಿಯ ನಟ ಶರತ್ ಬಾಬು ಆರೋಗ್ಯ ಸ್ಥಿತಿ ಗಂಭೀರ; ಆಸ್ಪತ್ರೆಗೆ ದಾಖಲು