December 3, 2024

Newsnap Kannada

The World at your finger tips!

police 1

ಅಯೋಧ್ಯೆಯಲ್ಲಿ ಫೇಸ್‌ಬುಕ್ ಲೈವ್ ನಂತರ ಅರ್ಚಕ ಆತ್ಮಹತ್ಯೆ

Spread the love

ಅಯೋಧ್ಯೆಯ ದೇವಸ್ಥಾನದಲ್ಲಿ ಅರ್ಚಕ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೋಮವಾರ ನಡೆದಿದೆ.

ರಾಮ್‌ಶಂಕರ್ ದಾಸ್ ಆತ್ಮಹತ್ಯೆ ಮಾಡಿಕೊಂಡಿರುವ ಅರ್ಚಕ, ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಫೇಸ್‌ಬುಕ್ ಲೈವ್ ಬಂದಿದ್ದು, ಇಬ್ಬರು ಪೊಲೀಸರು ತನಗೆ 2 ಲಕ್ಷ ರೂ. ಹಣ ನೀಡುವಂತೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಲೈವ್ ಮಾಡಿದ್ದಾರೆ. ಅರ್ಚಕ ಮಾದಕವ್ಯಸನಿ ಆಗಿದ್ದು, ಆರೋಪಗಳು ಆಧಾರರಹಿತ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಚುನಾವಣಾ ತರಬೇತಿಗೆ ತೆರಳ್ತಿದ್ದ ಸರ್ಕಾರಿ ಬಸ್ ಪಲ್ಟಿ : ಸಿಬ್ಬಂದಿಗಳಿಗೆ ಗಾಯ

ಜನವರಿಯಲ್ಲಿ ಮುಖ್ಯ ಅರ್ಚಕ ರಾಮ್ ಸರಣ್ ದಾಸ್ ನಾಪತ್ತೆಯಾದ ಬಳಿಕ ಇವರೊಬ್ಬರೇ ದೇವಸ್ಥಾನದಲ್ಲಿ ಉಳಿದುಕೊಂಡಿದ್ದರು. ಎಷ್ಟು ಬಡಿದರೂ ಬಾಗಿಲು ತೆರೆಯುತ್ತಿಲ್ಲ ಎಂಬ ಮಾಹಿತಿ ತಿಳಿದ ಕೂಡಲೇ ಪೊಲೀಸರು ಬಾಗಿಲು ಒಡೆದು ಒಳಗೆ ನುಗ್ಗಿದ್ದಾರೆ. ಈ ವೇಳೆ ಅವರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಅಯೋಧ್ಯೆಯ ಎಸ್‌ಹೆಚ್‌ಒ (SHO) ಮನೋಜ್ ಕುಮಾರ್ ಶರ್ಮ ತಿಳಿಸಿದ್ದಾರೆ. ಡಿಕೆ ಶಿವಕುಮಾರ್‌ ಹೆಲಿಕಾಪ್ಟರ್‌ಗೆ ಹದ್ದು ಡಿಕ್ಕಿ – ಪ್ರಾಣಾಪಾಯದಿಂದ ಪಾರು

ರಾಮ್‌ಶಂಕರ್ ದೇವಸ್ಥಾನದ ಒಳಗೆ ವಾಸಿಸುತ್ತಿದ್ದು, ದೇವಸ್ಥಾನದ ಭದ್ರತೆಗಾಗಿ ಕೆಲವು ಪೊಲೀಸರನ್ನು ಸಹಾ ನಿಯೋಜಿಸಲಾಗಿತ್ತು. ಆದರೆ ಅರ್ಚಕರಿಗೆ ದೇವಸ್ಥಾನಕ್ಕೆ ಸಂಬಂಧಪಟ್ಟ ಬೆಳ್ಳಿ ಹಾಗೂ ತಾಮ್ರದ ಸಾಮಾನುಗಳನ್ನು ಮಾರಾಟ ಮಾಡುವಲ್ಲಿ ಪೊಲೀಸರೊಂದಿಗೆ ಸಮಸ್ಯೆಗಳನ್ನು ಹೊಂದಿದ್ದರು. ಪೊಲೀಸರನ್ನು ದೇವಸ್ಥಾನದ ಒಳಗೆ ನಿಯೋಜಿಸದಂತೆ ಪೊಲೀಸ್ ಅಧಿಕಾರಿಗಳಿಗೆ ಒತ್ತಾಯಿಸಿದ್ದರಿಂದ ಅವರನ್ನು ದೇವಸ್ಥಾನದ ಹೊರಗೆ ನಿಯೋಜಿಸಲಾಗಿತ್ತು. 

Copyright © All rights reserved Newsnap | Newsever by AF themes.
error: Content is protected !!