ಮಹಿಳೆಯರಿಗೆ ಶೇ33ರಷ್ಟು ರಾಜಕೀಯ ಮೀಸಲಾತಿ ಮಸೂದೆಗೆ ರಾಷ್ಟ್ರಪತಿ ಮುರ್ಮು ಅಂಕಿತ

Team Newsnap
1 Min Read

ನವದೆಹಲಿ :

ಮಹಿಳಾ ಮೀಸಲಾತಿ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅಂಕಿತ ಹಾಕಿದ್ದಾರೆ. ಇದೀಗ ‘ನಾರಿ ಶಕ್ತಿ ವಂದನ್ ಅಧಿನಿಯಮ್’ ಕಾನೂನಾಗಿ ಬದಲಾಗಿದೆ.

ಈ ಕಾನೂನು ಜಾರಿಯಾದ ಬಳಿಕ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಶೇ.33ರಷ್ಟು ಸ್ಥಾನಗಳು ಮಹಿಳೆಯರಿಗೆ ಮೀಸಲಾಗಲಿವೆ.

ಆದರೆ, ಹೊಸ ಜನಗಣತಿ ಮತ್ತು ಡಿಲಿಮಿಟೇಶನ್ ನಂತರ ಮೀಸಲಾತಿ ಜಾರಿಗೆ ಬರಲಿದೆ. ರಾಷ್ಟ್ರಪತಿಗಳಿಂದ ಒಪ್ಪಿಗೆ ಪಡೆದರೂ ಕಾನೂನು ಮಾತ್ರ ಸಧ್ಯಕ್ಕೆ ಜಾರಿಯಾಗುತ್ತಿಲ್ಲ.

ಸಂಸತ್ತಿನ ವಿಶೇಷ ಅಧಿವೇಶನದಲ್ಲಿ, ಮಹಿಳಾ ಮೀಸಲಾತಿ ಮಸೂದೆಯನ್ನು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಅಂಗೀಕರಿಸಿತು.

ಈ ಮಸೂದೆಯಲ್ಲಿ ಒಬಿಸಿ ಮೀಸಲಾತಿ ನೀಡಬೇಕು ಮತ್ತು ಸಂಸತ್ತಿನಲ್ಲಿ ಅಂಗೀಕಾರದ ನಂತರ ರಾಷ್ಟ್ರಪತಿಯವರ ಒಪ್ಪಿಗೆ ಪಡೆದರೂ ಅದನ್ನು ಜಾರಿಗೆ ತರಲು ದೀರ್ಘಾವಧಿ ತೆಗೆದುಕೊಳ್ಳುವ ಬಗ್ಗೆ ಕಾಂಗ್ರೆಸ್ ಪ್ರಶ್ನಿಸಿತು.

Share This Article
Leave a comment